ಬಿಜೆಪಿ ಕಾರ್ಯಕರ್ತರಿಂದ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ

ಇಂಡಿ, ವಿಜಯಪುರ, ಬಿಜೆಪಿ, ಕೇಂದ್ರ, Indi News, Vijayapura, Election, BJP, Centerl
ಇಂಡಿ: ವಿಜಯಪುರ ಲೋಕಸಭೆ ಬಿಜೆಪಿ ಅಭ್ಯರ್ಥಿ, ಕೇಂದ್ರ ಮಾಜಿ ಸಚಿವ ರಮೆಶ ಜಿಗಜಿಣಗಿ ಮತ್ತೊಮ್ಮೆ ಅತ್ಯಧಿಕ ಮತಗಳ ಅಂತರದಿಂದ ಆಯ್ಕೆಯಾಗಲೆಂದು ಬಿಜೆಪಿ ಕಾರ್ಯಕರ್ತರು ಹಿರೇಇಂಡಿ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.

ಮುಖಂಡ ರಾಮಸಿಂಗ್ ಕನ್ನೊಳ್ಳಿ ನೇತೃತ್ವ ವಹಿಸಿ ಮಾತನಾಡಿ, ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹಾಗೂ ಜಿಲ್ಲೆಯಲ್ಲಿ ಸಚಿವ ರಮೇಶ ಜಿಗಜಿಣಗಿಯವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅವರ ಅಭಿವೃದ್ಧಿ ಕಾರ್ಯಗಳನ್ನು ಮತದಾರರ ಮನೆ ಮನೆಗೆ ತೆರಳಿ ತಿಳಿಸಬೇಕಿದೆ. ನರೇಂದ್ರ ಮೋದಿಯವರು ಪ್ರಧಾನಿಯಾಗಲು ಜಿಲ್ಲೆಯಲ್ಲಿ ರಮೇಶ ಜಿಗಜಿಣಗಿಯವರನ್ನು ಅತ್ಯಧಿಕ ಮತಗಳಿಂದ ಆರಿಸಿ ತರಲು ಕಾರ್ಯಕರ್ತರೆಲ್ಲರೂ ಶ್ರಮಿಸಬೇಕಾಗಿದೆ ಎಂದರು.

ಪುರಸಭೆ ಸದಸ್ಯರಾದ ದೇವೇಂದ್ರ ಕುಂಬಾರ, ಸೋಮು ನಿಂಬರಗಿಮಠ, ಸತೀಶ ಕುಂಬಾರ, ಮಲ್ಲು ವಾಲಿಕಾರ, ಸಂಜು ದಶವಂತ, ಅಶೋಕಗೌಡ ಬಿರಾದಾರ, ಸಂದೀಪ ಕಕ್ಕಳಮೇಲಿ, ದಾನಯ್ಯ ಹಿರೇಮಠ ಮತ್ತಿತರರಿದ್ದರು.

Leave a Reply

Your email address will not be published. Required fields are marked *