ಇಂಜಿನಿಯರಿಂಗ್​ ಸೀಟ್​ ಬ್ಲಾಕಿಂಗ್​ ಹಗರಣದ ಕಿಂಗ್​ಪಿನ್​ ಸೆರೆ

ತುಮಕೂರು: ಕರ್ನಾಟಕ ಪರೀಾ ಪ್ರಾಧಿಕಾರದ(ಕೆಇಎ) ಇಂಜಿನಿಯರಿಂಗ್​ ಸೀಟ್​ ಬ್ಲಾಕಿಂಗ್​ ಹಗರಣಕ್ಕೆ ಸಂಬಂಧಿಸಿದಂತೆ 10 ಆರೋಪಿಗಳನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕನಾಯಕನಹಳ್ಳಿ ತಾಲೂಕು ಜೆಡಿಎಸ್​ ಮುಖಂಡ ತಿಮ್ಮನಹಳ್ಳಿ ಶ್ರೀಹರ್ಷ(40) ಪ್ರಕರಣದ ಕಿಂಗ್​ಪಿನ್​ ಎನ್ನಲಾಗಿದ್ದು, ಸರ್ಕಾರಿ ಕೋಟಾದಡಿಯ ಇಂಜಿನಿಯರಿಂಗ್​ ಸೀಟುಗಳನ್ನು ಬ್ಲಾಕ್​ ಮಾಡಿ ಖಾಸಗಿ ಕಾಲೇಜುಗಳಿಗೆ ಲಾಭ ಮಾಡಿಕೊಟ್ಟು, ಅರ್ಹ ಅಭ್ಯರ್ಥಿಗಳಿಗೆ ವಂಚಿಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ಶ್ರೀಹರ್ಷನ ಸಹಚರರಾದ ಕಡೂರು ನಿವಾಸಿ ಪುರುಷೋತ್ತಮ(24), ಶಶಿಕುಮಾರ(34), ಪುನೀತ(27), ಪ್ರಕಾಶ(42) ಕನಕಪುರದ ಸಾತನೂರು ನಿವಾಸಿ ರವಿಶಂಕರ್​(56), ಶೇಷಾದ್ರಿಪುರ ನಿವಾಸಿ ಆರ್​.ಜಿ. ತಿಲಕ್​(60), ಬಿಟಿಎಂ ಲೇಔಟ್​ ನಿವಾಸಿಗಳಾದ ದಿಲ್ಷಾದ್​ ಆಲಂ(33), ನೌಷದ್​ ಆಲಂ (42) ಮತ್ತು ಕೆಇಎ ನೌಕರ ಯಶವಂತಪುರದ ಅವಿನಾಶ್​(36) ಬಂಧಿತರು.

ಆರೋಪಿಗಳು ಸರ್ಕಾರಿ ಕೋಟದ ಸೀಟುಗಳನ್ನು ಅಕ್ರಮವಾಗಿ ಬ್ಲಾಕ್​ ಮಾಡಿಸಿ ಬಿಎಂಎಸ್​ ಇಂಜಿನಿಯರಿಂಗ್​ ಕಾಲೇಜು, ಆಕಾಶ್​ ಇನ್​ಸ್ಟ್ಟಿಟ್ಯೂಟ್​ ಆಫ್​ ಇಂಜಿನಿಯರಿಂಗ್​, ನ್ಯೂ ಹಾರಿಜನ್​ ಇಂಜಿನಿಯರಿಂಗ್​ ಕಾಲೇಜುಗಳಿಗೆ ಹಸ್ತಾಂತರಿಸಿದ್ದಾರೆ ಎಂದು ಆರೋಪಿಸಿ ಕೆಇಎ ಅಧಿಕಾರಿಗಳು ನ.13 ರಂದು ದೂರು ನೀಡಿದ್ದರು.

ತನಿಖೆ ಆರಂಭಿಸಿದ ಪೊಲೀಸರಿಗೆ 52 ಅಭ್ಯರ್ಥಿಗಳ ಲಾಗಿನ್​ ಹೆಸರು ಮತ್ತು ಪಾಸ್​ವರ್ಡ್​ ಪಡೆದು ಸೀಟ್​ಗಳನ್ನು ಬ್ಲಾಕ್​ ಮಾಡಿರುವುದು ತಿಳಿದುಬಂದಿದ್ದು, ಐಪಿ ವಿಳಾಸದ ಆಧಾರದ ಮೇಲೆ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ. ಸಂಜಯನಗರದ ಡಾರ್ಲಸ್​ ಕಾಲನಿಯಲ್ಲಿ ಜಾಬ್​ ಕನ್ಸಲ್ಟೆಂಟ್​
ಹೊಂದಿದ್ದ ತಿಮ್ಮನಹಳ್ಳಿಯ ಶ್ರೀಹರ್ಷ ಪ್ರಕರಣದ ಸೂತ್ರದಾರ ಎನ್ನಲಾಗಿದ್ದು, ಕೆಇಎ ನೌಕರ ಅವಿನಾಶ್​ ನೆರವಿನೊಂದಿಗೆ ಮೂರನೇ ಸುತ್ತಿಗೆ ಕೌನ್ಸೆಲಿಂಗ್​ ಹಾಜರಾಗದ ಅಭ್ಯರ್ಥಿಗಳ ಮಾಹಿತಿ ಪಡೆದು ದಂಧೆ ನಡೆಸಿರುವುದು ತನಿಖೆಯಲ್ಲಿ ತಿಳಿದುಬಂದಿದೆ.

Share This Article

ನಿಮ್ಮ ಸ್ಮಾರ್ಟ್​ಫೋನ್​ ನಿಮ್ಮ ಫಿಟ್​ನೆಸ್​ ಕೋಚ್​… ಆಶ್ಚರ್ಯವಾಯಿತೇ? ಇಲ್ಲಿದೆ ಅಚ್ಚರಿ ಮಾಹಿತಿ… Smartphone

Smartphone : ಸ್ಮಾರ್ಟ್‌ಫೋನ್‌ಗಳ ಮೇಲಿನ ಅವಲಂಬನೆ ದಿನೇ ದಿನೇ ಹೆಚ್ಚಾಗುತ್ತಿದೆ. ಒಂದು ಅಧ್ಯಯನದ ಪ್ರಕಾರ, 2040ರ…

ಈ ದಿನಾಂಕಗಳಂದು ಜನಿಸಿದವರು ತಮ್ಮ ಬುದ್ಧಿವಂತಿಕೆಯಿಂದಾಗಿ ರಾಯಲ್​ ಲೈಫ್​ ನಡೆಸುತ್ತಾರೆ! Numerology

Numerology : ಜ್ಯೋತಿಷ್ಯದಲ್ಲಿ ಅನೇಕ ಬಗೆಗಳಿರುವುದು ಎಲ್ಲರಿಗೂ ತಿಳಿದಿದೆ. ಅವುಗಳಲ್ಲಿ ಸಂಖ್ಯಾಶಾಸ್ತ್ರ ಮತ್ತು ಹಸ್ತಸಾಮುದ್ರಿಕ ಶಾಸ್ತ್ರವೂ…

ನೀವು ಬೆಳಿಗ್ಗೆ ತಿಂಡಿಯನ್ನು ತಡವಾಗಿ ತಿನ್ನುತ್ತೀರಾ? ಎಚ್ಚರ..ಈ ಕಾಯಿಲೆ ಬರೋದು ಪಕ್ಕಾ… breakfast

breakfast: ಬೆಳಗಿನ ಉಪಾಹಾರವು ದೇಹಕ್ಕೆ ಬಹಳ ಮುಖ್ಯ. ಯಾವುದೇ ಕಾರಣಕ್ಕೂ ಉಪಹಾರವನ್ನು ಬಿಡಬಾರದು. ತಡವಾಗಿ ತಿನ್ನುವುದು…