ಬೈಲಹೊಂಗಲ: ಡಾ.ಶಿವಾನಂದ ಭಾರತಿ ಅಪ್ಪನವರು ನಿಮಗೆ ದೊರಕಿದ್ದು ನಿಮ್ಮ ಸುದೈವ. ಅವರ ಸೇವೆ ಮಾಡಿ, ಅವರ ಆಶೀರ್ವಾದ ಪಡೆದು ಮುಕ್ತಿ ಪ್ರಾಪ್ತ ಮಾಡಿಕೊಳ್ಳಿ ಎಂದು ಹಂಪಿಯ ಹೇಮಕೂಟದ ವಿದ್ಯಾನಂದ ಭಾರತಿ ಸ್ವಾಮೀಜಿ ಹೇಳಿದರು.
ಸಮೀಪದ ಸುೇತ್ರ ಇಂಚಲ ಗ್ರಾಮದ ಶಿವಯೋಗೀಶ್ವರ ಸಾಧು ಸಂಸ್ಥಾನಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಡಾ. ಶಿವಾನಂದ ಭಾರತಿ ಸ್ವಾಮೀಜಿ ಅವರ 83ನೇ ಜಯಂತ್ಯುತ್ಸವ, ವಿಶ್ವಶಾಂತಿಗಾಗಿ 53ನೇ ಅಖಿಲ ಭಾರತ ವೇದಾಂತ ಪರಿಷತ್ನಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಶಿಷ್ಯನು ಗುರುಗಳಿಂದ ತನ್ನ ಮಾನವನೆಂಬ ನಿಜ ಸ್ವರೂಪವನ್ನು ತಿಳಿದು ಸದಾ ಗುರುವಿನ ಸೇವೆಯಲ್ಲಿ ತೊಡಗಿ ಜೀವನದ ಸಾರ್ಥಕತೆ ಕಾಣಬೇಕು. ಸದಾ ಗುರುವಿನ ಉಪದೇಶ ಪಾಲಿಸಬೇಕು. ಗುರುವಿನ ಸೇವೆಯಿಂದ ಆತ್ಮ, ದೇಹ, ಮನಸಿನಲ್ಲಿ, ಮನೆಯಲ್ಲಿ ನೆಮ್ಮದಿ ಉಂಟಾಗುವುದು ಎಂದರು.
ಡಾ.ಶಿವಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಕಷ್ಟ ಬಂದಾಗ ಭಗವಂತನ ಸ್ಮರಣೆ ಮಾಡದೇ ನಿತ್ಯ ನಾಮಸ್ಮರಣೆ ಮಾಡಿ, ಪರೋಪಕಾರಿ ಗುಣ ಬೆಳೆಸಿಕೊಂಡು ಬದುಕು ಹಸನಾಗಿಸಿಕೊಳ್ಳಿ. ಆಸ್ತಿ, ಐಶ್ವರ್ಯ, ಹಣದಿಂದ ಯಾರು ದೊಡ್ಡವರಲ್ಲ ಆಧ್ಯಾತ್ಮಿಕತೆ ಬೆಳೆಸಿಕೊಂಡು ನೆಮ್ಮದಿ ಕಾಣುತ್ತ ಉತ್ತಮ ಆರೋಗ್ಯದ ಐಶ್ವರ್ಯ ಪಡೆದುಕೊಳ್ಳಬೇಕು. ಸಕಲರಿಗೂ ಒಳ್ಳೆಯದನ್ನೇ ಬಯಸಿ, ನಿತ್ಯ ಯಾರು ನನ್ನನ್ನು ಸ್ಮರಿಸಿಕೊಳ್ಳುತ್ತಾರೆ. ಅವರಲ್ಲಿ ನಾನು ಇರುತ್ತೇನೆ ಎಂದು ಭಗವಂತ ಹೇಳಿದ್ದಾನೆ ಎಂದರು.
ಹಿಪ್ಪರಗಿಯ ಕುಮಾರ ಸಿದ್ಧಾರೂಢರು, ರೂಗಿಯ ನಿತ್ಯಾನಂದ ಸ್ವಾಮೀಜಿ, ಪ್ರಭುಚನ್ನ ಮಹಾರಾಜರು ಮಾತನಾಡಿ, ನಾನು ಎಂಬ ಅಹಂ ಮರೆತು ದೇವರ ದ್ಯಾನ ಮಾಡಬೇಕು. ಆಗ ದೇವರನ್ನು ಕಾಣತ್ತೇವೆ. ಸಂಸಾರದ ಜಂಜಾಟದಿಂದ ಪಾರಾಗಲು ಸಾಧು, ಶರಣರ, ಸಂತರ, ವಿದ್ವಾಂಸರ ಅಮೃತವಾಣಿಗಳನ್ನು ಆಲಿಸಬೇಕು ಎಂದರು.
ಸವಟಗಿ ನಿಂಗಯ್ಯ ಸ್ವಾಮೀಜಿ, ಕಲಬುರ್ಗಿಯ ಮಾತೂಶ್ರೀ ಲಕ್ಷಿ$್ಮತಾಯಿ ಮಾತನಾಡಿ, ನಮಗೆ ಎಷ್ಟೇ ಕಷ್ಟ ಬಂದರೂ, ನಾವು ಪರಮಾತ್ಮನ ಮೊರೆ ಹೋದರೆ ನಮ್ಮ ದುಖ@ ಕಳೆಯುವನು. ಗುರುವಿನ ಕೃಪಾಶೀರ್ವಾದಕ್ಕಾಗಿ ಪುಣ್ಯದ ಕೆಲಸ ಮಾಡಬೆಕು ಎಂದರು.
ವಿಜಯಪುರ ಷಣ್ಮೂಖಾರೂಢ ಮಠದ ಅಭಿನವ ಸಿದ್ಧಾರೂಢ ಸ್ವಾಮೀಜಿ, ಇಂಡಿಯ ಸ್ವರೂಪಾನಂದ ಸ್ವಾಮೀಜಿ, ಇಂಚಲದ ಪೂರ್ಣಾನಂದ ಭಾರತಿ ಸ್ವಾಮೀಜಿ, ಹುಬ್ಬಳ್ಳಿ ಸಿದ್ದಾರೂಢ ಮಠದ ಸಚ್ಚಿದಾನಂದ ಸ್ವಾಮೀಜಿ, ಕುಳ್ಳೂರು&ಯಡಳ್ಳಿ ಬಸವಾನಂದ ಭಾರತಿ ಸ್ವಾಮೀಜಿ, ಹುಬ್ಬಳ್ಳಿಯ ಜಡೆಸಿದ್ದೇಶ್ವರ ಮಠದ ರಾಮಾನಂದ ಭಾರತಿ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ತುಂಗಳದ ಅನಸೂಯಾತಾಯಿ, ತುಂಗಳದ ಅನಸೂಯಾತಾಯಿ, ಮದನಭಾವಿಯ ಶಿವದೇವಿ ತಾಯಿ, ಖೋದಾನಪುರ ಜಾನಮ್ಮ ತಾಯಿ ಇದ್ದರು. ಸಂಸ್ಥೆಯ ಚೇರ್ಮನ್ ಡಿ.ಬಿ. ಮಲ್ಲೂರ, ಸಾವಿರಾರು ಭಕ್ತರು ಇದ್ದರು.