ಆ.10ರಂದು ನಗರದಲ್ಲಿ ರಾಜ್ಯ ಮಟ್ಟದ ದೇಹದಾಡ್ಯ ಸ್ಪರ್ಧೆ

ಹಾಸನ: ನಗರದ ರಾಜಣ್ಣ ಫಿಟ್ನೆಸ್ ಜಿಮ್ ಹಾಗೂ ವೆಡ್ಡಿಂಗ್ಸ್ ಬೈ ಧ್ರುವ ಇವೆಂಟ್ ಮ್ಯಾನೇಜಮೆಂಟ್ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ದೇಹದಾಡ್ಯ ಸ್ಪರ್ಧೆ ಯುವ ರತ್ನ 2024 ಹಾಗೂ ಮೆನ್ ಫಿಜಿಕ್ ಎಂಬ ಅಂಗ ಸೌಷ್ಠವ ಪ್ರದರ್ಶನ ಸ್ಪರ್ಧೆ ಯನ್ನು ಆ.10ರ ಶನಿವಾರ ಸಂಜೆ 4 ಗಂಟೆಗೆ ನಗರದ ಸರಕಾರಿ ಕಲಾ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ರಾಜಣ್ಣ ಫಿಟ್ನೆಸ್ ಜಿಮ್ ಮಾಲಿಕ ಆನಂದ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಪ್ರಥಮ ಬಹುಮಾನವಾಗಿ ’ಯುವರತ್ನ 2024’ ಟೈಟಲ್ ಜತೆಗೆ ಬೆಳ್ಳಿ ಗದೆ ಹಾಗೂ ನಗದು ಬಹುಮಾನ ನೀಡಲಾಗುವುದು. ವಿವಿಧ ತೂಕ, ವಯೋಮಾನ ಆಧಾರದಲ್ಲಿ ಸ್ಪರ್ಧೆ ನಡೆಯಲಿದ್ದು, ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಖ್ಯಾತ ಬಾಡಿ ಬಿಲ್ಡರ್ ಗಳು ಕಾರ್ಯಕ್ರಮದಲ್ಲಿ ಪ್ರಮುಖ ಆಕರ್ಷಣೆಯಾಗಿ ಭಾಗವಹಿಸಲಿದ್ದಾರೆ ಎಂದರು.
ಇತ್ತೀಚಿನ ದಿನಗಳಲ್ಲಿ ಬಾಡಿ ಬಿಲ್ಡಿಂಗ್ ಕ್ಷೇತ್ರ ಹೆಚ್ಚು ವೃತ್ತಿಪರವಾದ ಕ್ರೀಡೆಯಾಗಿ ಗುರುತಿಸಿಕೊಳ್ಳುತ್ತಿದೆ. ದೈಹಿಕ ಹಾಗೂ ಮಾನಸಿಕ ಅರೋಗ್ಯ ಕಾಪಾಡಿಕೊಳ್ಳಲು ಬಾಡಿ ಬಿಲ್ಡಿಂಗ್ ಹವ್ಯಾಸ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ನಾವು ಆಯೋಜಿಸುತ್ತಿರುವ ರಾಜ್ಯಮಟ್ಟದ ಸ್ಪರ್ಧೆ ದೇಹದಾರ್ಡ್ಯತೆ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ವಿಶ್ವಾಸವಿದೆ ಎಂದು ಹೇಳಿದರು.
ಹಾಸನ ಮೂಲದ ಯುವ ಉದ್ಯಮಿ ದೃವ ನಮ್ಮ ಪ್ರಯತ್ನಕ್ಕೆ ಕೈ ಜೋಡಿಸಿದ್ದು ಕಾರ್ಯಕ್ರಮ ಆಯೋಜನೆಗೆ ದೊಡ್ಡ ಮಟ್ಟದ ಸಹಕಾರ ನೀಡುತ್ತಿದ್ದಾರೆ. ಸೆಲೆಬ್ರಿಟಿ ಗಳ ಆಕರ್ಷಕ ಸಮಾರಂಭಗಳನ್ನು ಯಶಸ್ವಿಯಾಗಿ ಆಯೋಜಿಸಿ ಖ್ಯಾತಿ ಸಂಪಾದಿಸಿರುವ ಧ್ರುವ ಹಾಸನ ಮೂಲದವರಾಗಿದ್ದು ಜಿಲ್ಲಾ ಕೇಂದ್ರದಲ್ಲಿ ನಡೆಯುತ್ತಿರುವ ಕಾರ್ಯಕ್ರವನ್ನು ಜಾಗತಿಕ ಬಾಡಿ ಬಿಲ್ಡಿಂಗ್ ಸ್ಪರ್ಧೆಗೆ ಸರಿಸಮನಾದ ವೇದಿಕೆ ನಿರ್ಮಿಸಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪತ್ರಕರ್ತ ಮಂಜು ಬನವಾಸೆ, ಸಂದೀಪ್, ಇತರರು ಇದ್ದರು.

Share This Article

ತೂಕ ಇಳಿಸಿಕೊಳ್ಳಬೇಕಾ? ಸುಮ್ಮನೆ ಈ ಹಣ್ಣು, ಸೊಪ್ಪಿನ ವಾಸನೆಯನ್ನು ಒಮ್ಮೆ ಉಸಿರಾಡಿದ್ರೆ ಸಾಕು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…

ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿದು ನೋಡಿ; ಆರೋಗ್ಯ ಸಮಸ್ಯೆಗೆ ಸಿಗುತ್ತೆ ಪರಿಹಾರ …

 ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…