ಆಸ್ರಾ ಜಬೀನ್ಗೆ ಎಂಟೆಕ್ನಲ್ಲಿ ಪ್ರಥಮ RANK

ವಿಜಯವಾಣಿ ಸುದ್ದಿಜಾಲ ಕಲಬುರಗಿ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ 2018ರ ಮೇ-ಜೂನ್ನಲ್ಲಿ ನಡೆಸಿದ ವಾರ್ಷಿಕ ಪರೀಕ್ಷೆಯಲ್ಲಿ ಕಲಬುರಗಿಯ ಅಪ್ಪಾ ಇನ್ಸಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಎಂ. ಟೆಕ್( ಡಿಜಿಟಲ್ ಎಲೆಕ್ಟ್ರಾನಿಕ್ಸ್) ವಿಭಾಗದ ಕೊನೆಯ ಬ್ಯಾಚ್ನ ವಿದ್ಯಾರ್ಥಿನಿ ಆಸ್ರಾ ಜಬೀನ್ ಪ್ರಥಮ ರ್ಯಾಂಕ್ ಪಡೆದಿದ್ದಾರೆ.

ಇತ್ತೀಚೆಗೆ ಜರುಗಿದ ವಿಟಿಯು ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದ ಆಸ್ರಾ ಜಬೀನರನ್ನು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರೂ ಆದ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪನವರು ಗೌರವಿಸಿದರು.

ಉತ್ತಮ ಶಿಕ್ಷಣ ಪಡೆದ ಮಧ್ಯಮ ಕುಟುಂಬದಿಂದ ಬಂದಿರುವ ಆಸ್ರಾ ಜಬೀನ್ರ ತಂದೆ ಮಹ್ಮದ್ ಮಹಮೋದ್ ಅಲಿ ತಾಯಿ ಸೈಯದ್ ಫರ್ಜನಾ ನಿವೃತ್ತ ಶಿಕ್ಷಕರಾಗಿದ್ದೂ ಇವರ ಅಣ್ಣ ಎಂಎಸ್ಸಿ ( ನರ್ಸಿಂಗ್) ಮುಗಿಸಿ ಕೆ ಜೆ ಸೋಮಯ್ಯ ಮೆಡಿಕಲ್ ಕಾಲೇಜ್ನಲ್ಲಿ ಬೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಮೂವರು ಸಹೋದರಿಯರು ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದಾರೆ.

ಎಸ್ಸೆಸ್ಸೆಲ್ಸಿವರೆಗೆ ಉದರ್ು ಮಾಧ್ಯಮದಲ್ಲಿ ಓದಿರುವ ಆಸ್ರಾ ಜಬೀನ್, ಪಿಯುಸಿಯನ್ನು ನಗರದ ಅಲ್ ಹಬೀಬ್ ಕಾಲೇಜಿನಲ್ಲಿ ಓದಿ ಶೇ. 70 ಅಂಕಗಳನ್ನು ಗಳಿಸಿ ಸಿಇಟಿಯಲ್ಲಿ 5 ಸಾವಿರ ರ್ಯಾಂಕ್ ಪಡೆದು 2012ರಲ್ಲಿ ಕೆಬಿಎನ್ ಇಂಜಿನಿಯರಿಂಗ್ ಕಾಲೇಜಿನ ಇಸಿ ವಿಭಾಗದಲ್ಲಿ ಶೇ. 88 ಅಂಕಗಳೊಂದಿಗೆ 2016 ರಲ್ಲಿ ಪಾಸಾಗಿ ನಂತರ ಎಂ.ಟೆಕ್ ಪದವಿಗಾಗಿ ಅಪ್ಪ ಇನ್ಸಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಟೆಕ್ನಾಲಜಿನಲ್ಲಿ 2018ರಲ್ಲಿ ಸ್ನಾತಕ ಪದವಿ ಪೂರ್ಣಗೊಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಆಸ್ರಾ ಜಬೀನ್, ಪದವಿ ಪೂರ್ಣಗೊಳ್ಳುವಲ್ಲಿ ಮತ್ತು ಪ್ರಥಮ ರ್ಯಾಂಕ್ ಪಡೆದುಕೊಳ್ಳುವಲ್ಲಿ ಬೋಧಕರ ಸಹಾಯ, ಸ್ಫೂರ್ತಿ ಸಲಹೆ ದೊರೆತಿದೆ. ಕುಲಸಚಿವ ಡಾ. ಅನಿಲಕುಮಾರ ಬಿಡವೆ, ಡೀನ್ ಡಾ. ಲಿಂಗರಾಜ ಶಾಸ್ತ್ರಿ, ಕಾಲೇಜಿನ ಪ್ರಾಚಾರ್ಯ ಡಾ. ವಿ ಡಿ ಮೈತ್ರಿ, ಮಾರ್ಗದರ್ಶಕರಾದ ಪ್ರೊ. ಪೂಜಾ, ವಿಭಾಗದ ಮುಖ್ಯಸ್ಥ ಡಾ. ಶಿವಕುಮಾರ ಜವಳಗಿ ಸಹಕಾರ ನೀಡಿದ್ದಾರೆ. ಈಗಾಗಲೇ ಶರಣಬಸವ ವಿಶ್ವವಿದ್ಯಾಲಯದಲ್ಲಿ ವಿಲೀನಗೊಂಡಿರುವ ಅಪ್ಪಾ ಇನ್ಸಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಟೆಕ್ನಾಲಜಿನಲ್ಲಿ ಮೂಲ ಸೌಕರ್ಯ ನೀಡಿರುವುದರಿಂದ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಲು ಸಾಧ್ಯವಾಗಿದೆ ಎಂದು ಹೇಳಿದರು.

ಉನ್ನತ ಮಟ್ಟದ ಸಾಧನೆ ಮಾಡಿದ ವಿದ್ಯಾರ್ಥಿನಿ ಆಸ್ರಾ ಜಬೀನ ಮತ್ತು ವಿಭಾಗದ ಸಿಬ್ಬಂದಿಗೆ ಅಭಿನಂದಿಸಿರುವ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರು ಸಂತಷ ವ್ಯಕ್ತಪಡಿಸಿದ್ದಾರೆ. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಕುಲಪತಿ ಡಾ. ನಿರಂಜನ ನಿಷ್ಟಿ, ಸಮ ಕುಲಪತಿ ಡಾ. ವಿ ಡಿ ಮೈತ್ರಿ, ಕುಲಸಚಿವ ಡಾ. ಅನಿಲಕುಮಾರ ಬಿಡವೆ, ಡೀನ್ ಡಾ. ಲಿಂಗರಾಜ ಶಾಸ್ತ್ರಿ ವಿದ್ಯಾಥರ್ಿನಿಯ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ಬೋಧಕರ ಸಹಕಾರ, ಸ್ಪೂರ್ತಿ, ಪೂಜ್ಯ ಅಪ್ಪಾಜಿಯವರು ಕಾಲೇಜಿಗೆ ನುರಿತ ಸಿಬ್ಬಂದಿ ಒದಗಿಸಿರುವುದು ಸಾಧನೆಗೆ ಬುನಾದಿಯಾಗಿದೆ. ಮೊದಲ ರ್ಯಾಂಕ್ ಪಡೆಯಲು ಎಲ್ಲರೂ ನೀಡಿದ ಸಹಕಾರ, ಅಪ್ಪ-ಅಮ್ಮನ ಮಾರ್ಗದರ್ಶನದಿಂದ ಯಶಸ್ಸು ದೊರೆತಿದೆ.
|ಆಸ್ರಾ ಜಬೀನ್, ಎಂಟೆಕ್ ಮೊದಲ ರ್ಯಾಂಕ್ ಪಡೆದ ವಿದ್ಯಾರ್ಥಿನಿ.