ಆಸ್ಪತ್ರೆಯಿಂದ ಬಂದು ಮತದಾನ

ಆಯನೂರು (ಶಿವಮೊಗ್ಗ ): ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಯನೂರು ಗ್ರಾಮದ ಕೃಷ್ಣಪ್ಪ (48) ಎಂಬುವರಿಗೆ ಇನ್ನೆರಡು ದಿನಗಳಲ್ಲಿ ಶಸ್ತ್ರಚಿಕಿತ್ಸೆಯಾಗಬೇಕಿದೆ. ಆದರೂ ಅವರು ಮಂಗಳವಾರ ಆಯನೂರಿಗೆ ಬಂದು ಹಕ್ಕು ಚಲಾಯಿಸಿದರು. ನಿತ್ರಾಣ ಸ್ಥಿತಿಯಲ್ಲಿದ್ದ ಅವರು ವ್ಹೀಲ್​ಚೇರ್​ನಲ್ಲಿ ಸಂಬಂಧಿಕರ ಸಹಾಯದಿಂದ ಮತದಾನ ಕೇಂದ್ರದೊಳಗೆ ಪ್ರವೇಶಿಸಿದರು. ಭಾನುವಾರ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಮತದಾನ ಮಾಡುವ ಉದ್ದೇಶದಿಂದಲೇ ಊರಿಗೆ ಬಂದಿದ್ದರು. ಮತ ಹಾಕಿದ ನಂತರ ಮನೆಗೆ ತೆರಳಿದ ಅವರು ಕೆಲ ಸಮಯ ಮನೆಯಲ್ಲಿದ್ದು, ಮತ್ತೆ ಆಸ್ಪತ್ರೆಗೆ ದಾಖಲಾಗಲು ಬೆಂಗಳೂರಿಗೆ ತೆರಳಿದರು.

Leave a Reply

Your email address will not be published. Required fields are marked *