ಕಬ್ಬೂರ: ಪಟ್ಟಣದ ಜಲಯೋಗ ಸಾಧಕ ಡಾ.ಪ್ರಕಾಶ ಬೆಲ್ಲದ ಅವರ ಮಗಳು ಸ್ನೇಹಾ ವಿಜಾಪುರೆ ಅವರು ಆಸ್ಟ್ರೇಲಿಯಾ ದೇಶದಲ್ಲಿ ಗಣೇಶ ಚತುರ್ಥಿ ನಿಮಿತ್ತ ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಸಂಸ್ಕೃತಿ ಪಾಲಿಸಿದ್ದಾರೆ.
ಸ್ನೇಹಾ ಅವರು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಲಸಿ ಗ್ರಾಮದ ವೀರೇಶ ವಿಜಾಪುರೆ ಅವರನ್ನು ಮದುವೆಯಾಗಿ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಆಸ್ಟ್ರೇಲಿಯಾದ ಪರ್ಥ್ ನಗರದಲ್ಲಿ ವಾಸವಿರುವ ಸ್ನೇಹಾ 10 ವರ್ಷಗಳಿಂದ ಸ್ವಗೃಹದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿಕೊಂಡು ಬರುತ್ತಿದ್ದಾರೆ.
ಈ ಬಾರಿ ಚಕ್ಕಡಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದು, ಆಕರ್ಷಕವಾಗಿದೆ. ಪ್ರತಿ ವರ್ಷವೂ ಭಾರತದ ಸಂಸ್ಕೃತಿ, ವೈಶಿಷ್ಟ್ಯ ಹೋಲುವ ಗಣೇಶನನ್ನು ಪ್ರತಿಷ್ಠಾಪಿಸುತ್ತೇವೆ. ಎಲ್ಲಿದ್ದರೂ ನಮ್ಮ ಸಂಪ್ರದಾಯ ಮರೆಯಬಾರದು ಎನ್ನುತ್ತಾರೆ ಸ್ನೇಹಾ.