ಆಳ್ವಾಸ್ ನುಡಿಸಿರಿಗೆ ಸಂಭ್ರಮದ ತೆರೆ

ಮೂಡುಬಿದರೆ: ಕನ್ನಡ ನಾಡುನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನದ 13ನೇ ‘ಆಳ್ವಾಸ್ ನುಡಿಸಿರಿ’ ಭಾನುವಾರ ತೆರೆ ಕಂಡಿತು. ಮೂಡುಬಿದರೆ ವಿದ್ಯಾಗಿರಿಯ ಶ್ರೀಮತಿ ಸುಂದರಿ ಆನಂದ ಆಳ್ವ ಆವರಣದಲ್ಲಿ ಮೂರು ದಿನ ನಡೆದ ಸಾಹಿತ್ಯ ಉತ್ಸವದಲ್ಲಿ ಕನ್ನಡ ಮನಸ್ಸುಗಳು ಮಿಂದೆದ್ದವು. ಸಾಹಿತ್ಯ ರಸಗವಳದ ಸವಿ ಸವಿದರು.

ಪ್ರಶಸ್ತಿ ಪ್ರದಾನ: ಸಾಂಪ್ರದಾಯಿಕ ಹಾಗೂ ಜಾನಪದ ಕಲಾ ಮೇಳಗಳೊಂದಿಗೆ ಮೆರವಣಿಗೆ ಹಾಗೂ ತುಂಬಿದ ಕಳಸಗಳ ಸ್ವಾಗತದೊಂದಿಗೆ ಆರಂಭವಾದ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ 13 ಸಾಧಕರಿಗೆ ನುಡಿಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ.ಗಿರಡ್ಡಿ ಗೋವಿಂದರಾಜ, ಸುಬ್ರಾಯ ಚೊಕ್ಕಾಡಿ, ಡಾ.ಚೆನ್ನಣ್ಣ ವಾಲೀಕಾರ, ಡಾ.ಕೆ.ಆರ್.ಸಂಧ್ಯಾ ರೆಡ್ಡಿ, ಜಿ.ಎನ್.ರಂಗನಾಥರಾವ್, ಕೆ.ವಿ.ಅಕ್ಷರ, ಹರಿಣಿ, ಶ್ರೀನಿವಾಸ ಜಿ.ಕಪ್ಪಣ್ಣ, ಶೀನಪ್ಪ ರೈ ಸಂಪಾಜೆ, ಜಬ್ಬಾರ್ ಸಮೊ, ಎಚ್.ಆರ್.ಲೀಲಾವತಿ, ಡಾ.ಚಂದ್ರಶೇಖರ ಚೌಟ ಹಾಗೂ ಡಾ.ಜಿ.ಜ್ಞಾನಾನಂದ ಪ್ರಶಸ್ತಿ ಪುರಸ್ಕೃತರು. ಸನ್ಮಾನಿತರಿಗೆ ಮಹಿಳೆಯರು ಆರತಿ ಎತ್ತಿ, ಪನ್ನೀರು ಸಿಂಚನ ಮಾಡಿದರು.

 

Leave a Reply

Your email address will not be published. Required fields are marked *