ಆಲಿಯಾ ವೋಟ್ ಮಾಡಲ್ಲ!

ದಿನಕಳೆದಂತೆ ಲೋಕಸಭಾ ಚುನಾವಣಾ ಕಣ ರಂಗೇರುತ್ತಿದೆ. ಅಭ್ಯರ್ಥಿಗಳ ಪ್ರಚಾರ ಒಂದು ಕಡೆಯಾದರೆ, ಮತದಾನ ಮಾಡಿ, ಹಕ್ಕು ಚಲಾಯಿಸಿ ಎಂಬ ಅಭಿಯಾನವೂ ಜೋರಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಸಿನಿಮಾ ತಾರೆಯರು ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ, ಬಾಲಿವುಡ್ ನಟಿ ಆಲಿಯಾ ಭಟ್ ಈ ಬಾರಿ ಮತದಾನ ಮಾಡುವುದಿಲ್ಲವಂತೆ! ಅಚ್ಚರಿ ಎನಿಸಿದರೂ ಇದು ಸತ್ಯ. ಅರೇ, ಸೆಲೆಬ್ರಿಟಿಗಳೇ ಹೀಗೆ ಮಾಡಿದರೆ ಹೇಗೆ ಎಂಬ ಪ್ರಶ್ನೆ ಉದ್ಭವವಾಗಬಹುದು. ಆದರೆ, ಆಲಿಯಾ ಹೇಳಿಕೆಗೆ ಕಾರಣವೇ ಬೇರೆ ಇದೆ. ಅಷ್ಟಕ್ಕೂ ಆಲಿಯಾ ಭಾರತೀಯರಲ್ಲ! ಅವರು ಇಂಗ್ಲೆಂಡ್ ಪೌರತ್ವವನ್ನು ಹೊಂದಿದ್ದಾರೆ. ಅವರ ಬಳಿ ಭಾರತೀಯ ಪಾಸ್​ಪೋರ್ಟ್ ಆಗಲಿ, ಚುನಾವಣಾ ಗುರುತಿನ ಚೀಟಿಯಾಗಲಿ ಇಲ್ಲ. ಒಂದು ವೇಳೆ ವೋಟ್ ಮಾಡಲೇಬೇಕು ಎಂದಾದರೆ, ಬ್ರಿಟೀಷ್ ಪೌರತ್ವವನ್ನು ತ್ಯಜಿಸಬೇಕು. -ಏಜೆನ್ಸೀಸ್