PHOTOS| ಆರ್​ಸಿಬಿ ಸೋಲಿನಲ್ಲೂ ಕಡಿಮೆಯಾಗದ ಅಭಿಮಾನಿಗಳ ಜೋಶ್

ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ ಪಂದ್ಯಗಳಿಗೆ ಅಭಿಮಾನಿಗಳ ಉತ್ಸಾಹ ಎಂದಿಗೂ ಕಡಿಮೆಯಾಗುವುದಿಲ್ಲ. ಆದರೆ, ಭಾನುವಾರದ ಪಂದ್ಯಕ್ಕೆ ನಿರೀಕ್ಷೆ ಮಾಡಿದಷ್ಟು ಅಭಿಮಾನಿಗಳ ಉಪಸ್ಥಿತಿ ಇರಲಿಲ್ಲ. ಅಂದಾಜು 26 ಸಾವಿರ ಅಭಿಮಾನಿಗಳ ಅಬ್ಬರದ ನಡುವೆ ಪಂದ್ಯ ಸಾಗಿತು. ಜಯದ ನಿರೀಕ್ಷೆ ಇಟ್ಟುಕೊಂಡ ಬಂದಿದ್ದ ಆರ್​ಸಿಬಿ ಬಹುದೊಡ್ಡ ಅಭಿಮಾನಿಗಳ ಬಳಗ ಸತತ 6ನೇ ಸೋಲು ನೋಡಿದ ನಿರಾಸೆಯೊಂದಿಗೆ ಮರಳಿತು. ಪರಿಸರ ಜಾಗೃತಿಯ ಗೋ ಗ್ರೀನ್ ಅಭಿಯಾನದ ಅಂಗವಾಗಿ ಆಟಗಾರರು ಹಸಿರು ಜೆರ್ಸಿಯಲ್ಲಿ ಆಡಿದರೆ, ಗ್ಯಾಲರಿಯಲ್ಲಿದ್ದ ಪ್ರೇಕ್ಷಕರೂ ಹಸಿರು ಜೆರ್ಸಿ ಮತ್ತು ಧ್ವಜದೊಂದಿಗೆ ತಂಡವನ್ನು ಹುರಿದುಂಬಿಸಿದರು.