Friday, 16th November 2018  

Vijayavani

Breaking News

ಆರ್ಥಿಕ ಬಲವರ್ಧನೆ ಡೇರಿ ಸಹಕಾರಿ

Thursday, 12.07.2018, 3:43 AM       No Comments

ನೆಲಮಂಗಲ: ಗ್ರಾಮೀಣ ಪ್ರದೇಶದ ರೈತ ಕುಟುಂಬಗಳ ಆರ್ಥಿಕ ಬಲಸಂರ್ವಧನೆಗೆ ಹಾಲು ಉತ್ಪಾದಕರ ಸಹಕಾರ ಸಂಘ ಸಹಕಾರಿ ಎಂದು ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲೂಕಿನ ಮಲ್ಲರಬಾಣವಾಡಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ನಿರ್ವಿುಸಿರುವ ಡಾ.ವರ್ಗೀಸ್ ಕುರಿಯನ್ ನಂದಿನಿ ಕ್ಷೀರಧಾಮ ನೂತನ ಕಟ್ಟಡವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

ಅಂರ್ತಜಲಮಟ್ಟ ಕುಸಿದು ನೀರಿನ ಅಭಾವ ಎದುರಾಗಿರುವುದು ಒಂದೆಡೆಯಾದರೆ ಸಕಾಲಕ್ಕೆ ಮಳೆಯಾಗದೇ ರೈತರು ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ ಡೇರಿಗಳು ಅನ್ನದಾತರ ಕೈಹಿಡಿದಿವೆ. ಆದರೆ, ಕೆಲ ಹಾಲು ಉತ್ಪಾದಕರು ದುರಾಸೆಯಿಂದ ಸತ್ವವಿಲ್ಲದ ಹಾಲಿನ ಉತ್ಪಾದನೆ ಮಾಡುತ್ತಿರುವುದು ಬೇಸರದ ಸಂಗತಿ ಎಂದರು.

ಗ್ರಾಮೀಣ ಪ್ರದೇಶದ ಜನರ ಆರೋಗ್ಯದ ಸ್ಥಿತಿ ಕ್ಷೀಣಿಸುತ್ತಿದ್ದು, ಸುಧಾರಿಸುವ ಕೆಲಸ ರೈತರಿಂದಲೇ ಆಗಬೇಕಿದೆ. ಕೃಷಿ ಭೂಮಿಯನ್ನು ಮಾರಾಟ ಮಾಡುತ್ತಿರುವ ರೈತರು ನಗರಕ್ಕೆ ವಲಸೆ ಹೋಗುತ್ತಿದ್ದಾರೆ. ಹೀಗೆಯೇ ಮುಂದುವರಿದರೆ ಆಹಾರ ಸಮಸ್ಯೆ ಉಲ್ಬಣಿಸುತ್ತದೆ ಎಂದರು.

ಬೆಂಗಳೂರು ಹಾಲು ಒಕ್ಕೂಟ ವ್ಯವಸ್ಥಾಪಕ ನಿರ್ದೇಶಕ ಡಿ.ಸಿ ನಾಗರಾಜಯ್ಯ ಮಾತನಾಡಿ, ಹಾಲಿನ ಉತ್ಪಾದಕರಿಂದ ಗ್ರಾಮೀಣ ಪ್ರದೇಶದಲ್ಲಿ ಅರ್ಥಿಕ ವ್ಯವಹಾರ ಹೆಚ್ಚಾಗಿದೆ. ಗ್ರಾಮೀಣಾಭಿವೃದ್ಧಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಪಾತ್ರ ದೊಡ್ಡದು ಎಂದರು.

ಮೇಲಣಗವಿ ಮಠದ ಶ್ರೀ ಮಲಯಶಾಂತ ಮುನಿದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಪವಾಡ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಬಸವನಹಳ್ಳಿ ಶಿವಾನಂದಾಶ್ರಮದ ಶ್ರೀ ರಮಾಣಾನಂದ ಸ್ವಾಮೀಜಿ, ವನಕಲ್ಲು ಮಠದ ಶ್ರೀ ಬಸವ ರಮಾನಂದ ಸ್ವಾಮೀಜಿ, ತಾಪಂ ಸದಸ್ಯ ಎಂ.ವಿ ರುದ್ರೇಶ್, ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಎಂ.ಜಿ ತಿಮ್ಮರಾಜು, ಮಲ್ಲರಬಾಣವಾಡಿ ಹಾಲು ಉತ್ಪಾದಕರ ಸಹಕಾರ ಸಂಘ ಅಧ್ಯಕ್ಷ ಗರುಡರಂಗಯ್ಯ ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

Back To Top