ಚಿತ್ರದುರ್ಗ: ದೇಶದ ಆರ್ಥಿಕ ಉನ್ನತಿಯಲ್ಲಿ ಸೂಕ್ಷ್ಮ,ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಪಾತ್ರ ಹಿರಿದಾಗಿದೆ ಎಂದು ಸಂಸದ ಗೋವಿಂದ ಎಂ.ಕಾರಜೋಳ ಹೇಳಿದರು.
ನಗರದ ಕೆಐಎಡಿಬಿ ಕೈಗಾರಿಕಾ ವಲಯದಲ್ಲಿರುವ ಕೇಂದ್ರೀಯ ಹಂಜಿ ಕಾರ್ಯಾಗಾರಕ್ಕೆ ಭೇಟಿ ನೀಡಿ ಅಧಿಕಾರಿ,ಸಿಬ್ಬಂದಿ ಉದ್ದೇಶಿಸಿ ಮಾತ ನಾಡಿದ ಅವರು,ದೇಶದ ರಫ್ತು ಪ್ರಮಾಣ ಹೆಚ್ಚಾಗಲು ಮತ್ತು ಭಾರತದ ಉತ್ಪನ್ನಗಳನ್ನು ಹೊಸ ಮಾರುಕಟ್ಟೆಗಳಿಗೆ ತಲುಪಲು ಎಂಎಸ್ ಎಂಇ ವಲಯ ಬಲಿಷ್ಠವಾಗುವುದು ಅತ್ಯಂತ ಅವಶ್ಯವಿದೆ.
ದೇಶದ ಆರ್ಥಿಕ ಬೆಳವಣಿಗೆ, ಸೂಕ್ಷ್ಮ,ಸಣ್ಣ ಮತ್ತು ಮಧ್ಯಮ ಉದ್ಯಮಗಳ ಯಶಸ್ಸಿನ ಮೇಲೆ ಅವಲಂಬಿತವಾಗಿದೆ. ಭಾರತದ ಆರ್ಥಿಕತೆಯಲ್ಲಿ ಅಂದಾಜು 3ನೇ ಒಂದು ಭಾಗ ಈ ವಲಯದ ಪಾಲಿದೆ. ನರೇಂದ್ರಮೋದಿ ಸರ್ಕಾರ ಅತ್ಯುನ್ನತ ಆದ್ಯತೆಗಳಲ್ಲಿ ಒಂದಾಗಿರುವ ಈ ವಲಯದ ಬಲವರ್ಧನೆಗೆ ಕಳೆದ 10 ವರ್ಷಗಳಲ್ಲಿ ಕೇಂದ್ರದ ಬಜೆಟ್‌ನಲ್ಲಿ ಅಗ್ರಪಾಲು ಒದಗಿದೆ. ಕೋವಿಡ್ ಸಮಯದಲ್ಲಿ ಅನೇಕ ರಿಯಾಯಿತಿ ಯೋಜನೆಗಳನ್ನು ಕೇಂದ್ರ ಆತ್ಮನಿರ್ಭರ ಯೋಜನೆಯಡಿ ನೀಡಿದ್ದರ ಪರಿಣಾಮವಾಗಿ ವಲಯವೀಗ ಚೇತರಿಸಿಕೊಂಡಿದೆ ಎಂದರು.
ದಕ್ಷಿಣ ಭಾರತದಲ್ಲೇ ಕರ್ನಾಟಕ ಮತ್ತು ಕೇರಳದಲ್ಲಿ ಕೇಂದ್ರೀಯ ಹಂಜಿ ಕಾರ್ಯಾಗಾರಗಳಿವೆ. ಚಿತ್ರದುರ್ಗ ಹಂಜಿ ಕಾರ್ಯಾಗಾರದಲ್ಲಿ 90ಕ್ಕೂ ಹೆಚ್ಚು ಕಾರ್ಮಿಕರಿದ್ದಾರೆ. 5 ಎಕರೆ ಪ್ರದೇಶದಲ್ಲಿ 1995ರಲ್ಲಿ ಪ್ರಾರಂಭವಾದ ಈ ಘಟಕ ಪ್ರಸ್ತುತ ಪ್ರತಿ ವರ್ಷ 18-20 ಕೋಟಿ ರೂ.ವಹಿವಾಟು ಹೊಂದಿದೆ ಎಂದು ಘಟಕದ ಉತ್ಪಾದನಾ ಉಸ್ತುವಾರಿ ರಮೇಶ್ ಸಂಸದರಿಗೆ ಮಾಹಿತಿ ನೀಡಿದರು.
ಇಲ್ಲಿ ತಯಾರಾಗುವ ಖಾದಿ ಕಚ್ಛಾ ವಸ್ತು ಕರ್ನಾಟಕ,ಆಂಧ್ರಪ್ರದೇಶ,ತಮಿಳುನಾಡು ಸೇರಿದಂತೆ ಅನೇಕ ರಾಜ್ಯಗಳಿಗೆ ವಿತರಣೆಯಾಗುತ್ತದೆ. ತ್ರಿವರ್ಣ ಧ್ವಜ ತಯಾರಿಸುವ ಗರಗ ಗ್ರಾಮ ಹಾಗೂ ಹುಬ್ಬಳ್ಳಿ ಬೆಂಗೇರಿಗೂ ಇಲ್ಲಿಂದಲೇ ಖಾದಿ ನೂಲು ಸರಬರಾಜಾಗುತ್ತದೆ ಎಂದರು. ಸೂಕ್ತ ಸವಲತ್ತುಗಳನ್ನು ಒದಗಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಸಿಬ್ಬಂದಿ ಸಂಸದರಿಗೆ ಮನವಿ ಮಾಡಿದರು. ಈ ಘಟಕಕ್ಕೆ ಭೇಟಿ ನೀಡುವಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಕೋರುವುದಾಗಿ ಹೇಳಿದ ಸಂಸದರು,ಬೇಡಿಕೆಗಳ ಕುರಿತು ಸಚಿವರ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಆರ್ಥಿಕ ಉನ್ನತಿಯಲ್ಲಿ ಎಂಎಸ್‌ಎಂಇ ಪಾತ್ರ ಮುಖ್ಯ
ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…
ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach ) ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…
Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..
ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan) ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…
ಹಾವು ಕಚ್ಚಿದಾಗ ಮಾಡುವ ಈ ಒಂದು ತಪ್ಪಿನಿಂದ ಪ್ರಾಣ ಹೋಗುತ್ತೆ ಎಚ್ಚರ! ಈ ರೀತಿ ಮಾಡೋದನ್ನು ತಪ್ಪಿಸಿ | Snakes
ಕೊಲ್ಲಂ: ಹಾವುಗಳು ( Snakes ) ಕಚ್ಚಿದ ಸಂದರ್ಭದಲ್ಲಿ ಯಾವ ಹಾವು ಕಚ್ಚಿತ್ತು ಎಂಬುದನ್ನು ತಿಳಿದುಕೊಳ್ಳಲು…