ಗಂಗಾವತಿ: ನಗರದ ಶಾರದಾನಗರದ ಶ್ರೀಶಂಕರಮಠದಲ್ಲಿ ಜಗದ್ಗುರು ಶಂಕರಾಚಾರ್ಯ ಸೇವಾ ಟ್ರಸ್ಟ್‌ನಿಂದ ಶಂಕರಾಚಾರ್ಯ ಜಯಂತ್ಯುತ್ಸವ ಭಾನುವಾರ ಹಮ್ಮಿಕೊಳ್ಳಲಾಗಿತ್ತು.
ದೇವಾಲಯದ ಮೂರ್ತಿಗಳಿಗೆ ಅಭಿಷೇಕ, ಹೂವಿನ ಅಲಂಕಾರ ವಿಶೇಷ ಪೂಜೆ, ಅಷ್ಟೋತ್ತರ ಪಾರಾಯಣ, ತೊಟ್ಟಿಲು, ಪಲ್ಲಕ್ಕಿ ಉತ್ಸವ, ಮಕ್ಕಳಿಗಾಗಿ ವೇಷಭೂಷಣ ಸ್ಪರ್ಧೆ ಮತು ್ತ ಸಾಧಕರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿತ್ತು.
ಶಂಗೇರಿ ಪೀಠದ ಶ್ರೀಭಾರತಿ ತೀರ್ಥ ಮಹಾಸ್ವಾಮಿಗಳ ಸನ್ಯಾಸತ್ವ ಪಡೆದ ಸುವರ್ಣ ಮಹೋತ್ಸವ ನಿಮಿತ್ತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. ಹೆಲ್ತ್ ಟೆಕ್ನಿಶಿಯನ್ ಜಿ.ವೆಂಕಣ್ಣ ತಂಡದಿಂದ ರಕ್ತದ ಗುಂಪು ಪರೀಕ್ಷೆ ನಡೆಯಿತು. ಶಿಬಿರದಲ್ಲಿ 180ಕ್ಕೂ ಹೆಚ್ಚು ಜನರನ್ನು ಪರಿವೀಕ್ಷಿಸಿ, ರಕ್ತದ ಗುಂಪಿನ ಗುರುತಿನ ಚೀಟಿ ವಿತರಿಸಲಾಯಿತು.
ಶ್ರೀಶಂಕರ ಮಠದ ಧರ್ಮಾಧಿಕಾರಿ ನಾರಾಯಣರಾವ್ ವೈದ್ಯ ಮಾತನಾಡಿ, ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳ ಜತೆಗೆ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲಾಗಿದೆ. ಸಮಾಜಮುಖಿ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುವುದು ಎಂದರು.
ಶ್ರೀಶಂಕರಾಚಾರ್ಯರ ಜೀವನ ಮತ್ತು ಸಾಧನೆ ಕುರಿತು ರಾಜ್ಯಪ್ರಶಸ್ತಿ ಪುರಸ್ಕೃತ ಶಿಕ್ಷಕಿ ವೇದಾಬಾಯಿ ಬಾಲಕಷ್ಣದೇಸಾಯಿಉಪನ್ಯಾಸ ನೀಡಿದರು. ಶಾರದಾ ಶಂಕರ ಭಕ್ತ ಮಂಡಳಿಯಿಂದ ಭಜನೆ ನಡೆಯಿತು.
ದೇವಾಲಯ ಅರ್ಚಕ ಕುಮಾರ್ ಭಟ್, ಬ್ರಾಹ್ಮಣ ಸಮುದಾಯದ ಪ್ರಮುಖರಾದ ರಾಘವೇಂದ್ರ ಅಳವಂಡಿಕರ್, ವೇಣುಗೋಪಾಲ್, ಶೇಷಗಿರಿ ಗಡಾದ್, ಜಗನ್ನಾಥ ಅಳವಂಡಿಕರ್, ಶಂಕರ ಹೊಸಳ್ಳಿ, ಶ್ರೀಪಾದ ಮುಧೋಳಕರ್, ದತ್ತಾತ್ರೇಯ ಹೊಸಳ್ಳಿ, ಸುದರ್ಶನ ವೈದ್ಯ, ಶಿಕ್ಷಕಿ ಕವಿತಾ ದಿಗ್ಗಾವಿ, ಅಂಜನಾ ಅಳವಂಡಿಕರ್ ಇತರರಿದ್ದರು.
ತಾಲೂಕಾಡಳಿತ ಸೌಧ: ನಗರದ ತಾಲೂಕಾಡಳಿತ ಸೌಧದ ಕಚೇರಿಯಲ್ಲಿ ತಾಲೂಕಾಡಳಿತದಿಂದ ಶ್ರೀಶಂಕರಾಚಾರ್ಯರ ಜಯಂತಿ ಆಚರಿಸಲಾಯಿತು. ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದ ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡ ಗೌಡರ್ ಮಾತನಾಡಿದರು. ಶಿರಸ್ತೇದಾರ್ ಶ್ರೀಕಂಠೇಶ