ಮುಧೋಳ : ಸಸ್ಯಗಳ ಪ್ರಯೋಜನ ಅರಿತು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಸಾಪ ವಲಯ ಘಟಕದ ಅಧ್ಯಕ್ಷ ಡಾ.ಸಂತೋಷ ಶೆಟ್ಟರ್ ಹೇಳಿದರು.
ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕ, ಮಲ್ಲಪ್ಪಣ್ಣ ನೀಲಿ ಪ್ರೌಢಶಾಲೆ ಹಾಗೂ ರಾಮಣ್ಣ ಸೊನ್ನದ ಸರ್ಕಾರಿ ಪ್ರೌಢಶಾಲೆ ಸಂಯುಕ್ತಾಶ್ರಯದಲ್ಲಿ ಮಲ್ಲಪ್ಪಣ್ಣ ನೀಲಿ ಶಾಲೆಯಲ್ಲಿ ಆಯೋಜಿಸಿದ್ದ ಪರಿಸರ ಹಾಗೂ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷೆ ವಿಜಯಲಕ್ಷ್ಮೀ ಕಗಲಗೊಂಬ ಮಾತನಾಡಿ, ಮಕ್ಕಳ ಮಾನಸಿಕ ಹಾಗೂ ಬೌದ್ಧಿಕ ವ್ಯಕ್ತಿತ್ವ ವಿಕಾಸದ ಮೂಲವೇ ನಮ್ಮ ಪರಿಷತ್ತಿನ ಧ್ಯೇಯವಾಗಿದೆ ಎಂದರು.
ಮುಖ್ಯಶಿಕ್ಷಕ ಶಿವು ನೀಲಿ, ಸಂಗಮೇಶ ಜಾನಮಟ್ಟಿ, ಬಿ.ಆರ್. ಬಿರಾದಾರ ಮಾತನಾಡಿದರು. ಜ್ಯೋತಿ ಬಿರಾದಾರ, ಲೋಕಣ್ಣ ಗಣಾಚಾರಿ, ಚನವೀರಪ್ಪ್ಪ ಮುದ್ದಾಪುರ ಇದ್ದರು.