ಆರೋಗ್ಯಯುತ, ಸಮಾಜ, ನಿರ್ಮಾಣಕ್ಕೆ, ಸಹಕರಿಸಿ, ಸಚಿವೆ, ಶಶಿಕಲಾ, ಜೊಲ್ಲೆ, ಮನವಿ, ಚಿಕ್ಕೋಡಿಯಲ್ಲಿ, ರಾಷ್ಟ್ರೀಯ, ಪೋಷಣ, ಅಭಿಯಾನಕ್ಕೆ, ಚಾಲನೆ, ಚಿಕ್ಕೋಡಿ, ಬೆಳಗಾವಿ, Health, Social, Construction, Cooperation, Minister, Sasikala, Jolle, Appeal, Kikkodi, National, Nutrition, Campaign, Drive, Kikkodi, Belagavi
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ
ಗರ್ಭಿಣಿಯರು ಹಾಗೂ ಮಕ್ಕಳು ಪೌಷ್ಟಿಕಯುತ ಆಹಾರ ಸೇವಿಸಬೇಕು. ಈ ಮೂಲಕ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಅವರು ಸೋಮವಾರ ಪಟ್ಟಣದ ಕೇಶವ ಕಲಾಭವನದಲ್ಲಿ ತಾಲೂಕಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪೋಷಣ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಹಿಳೆಯರು ಪೌಷ್ಟಿಕ ಆಹಾರ ಸೇವಿಸಿದರೆ ಮಗು ಆರೋಗ್ಯವಾಗಿರುತ್ತದೆ. ಗರ್ಭಿಣಿಯರು ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಬೇಕು. ಆರೋಗ್ಯಯುತ ಸಮಾಜ ಕಟ್ಟಲು ಪ್ರಯತ್ನಿಸಬೇಕು. ರಾಜ್ಯದ 30 ಜಿಲ್ಲೆಗಳಲ್ಲಿ ಪೋಷಣ ಅಭಿಯಾನ ನಡೆಯುತ್ತಿದ್ದು ಅಂಗನವಾಡಿ ಕಾರ್ಯಕರ್ತೆಯರು ಮಹಿಳೆಯರಿಗೆ ತಿಳಿವಳಿಕೆ ನೀಡಬೇಕಾದ ಅವಶ್ಯಕತೆ ಇದೆ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಕೂಸು ಪೋಷಣ ಅಭಿಯಾನ. ಇದು 2018ರಲ್ಲಿ ಪ್ರಾರಂಭವಾದರೂ ನಮ್ಮ ರಾಜ್ಯದಲ್ಲಿ ಅನುಷ್ಠಾನಕ್ಕೆ ಬಂದಿರಲಿಲ್ಲ. ನಾನು ಸಚಿವೆಯಾದ ಬಳಿಕ ಈ ಯೋಜನೆಯನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅನುಷ್ಠಾನಕ್ಕೆ ತಂದು, ಪ್ರತಿ ಜಿಲ್ಲೆಯಲ್ಲಿ ಪೋಷಣ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ 600ಕ್ಕಿಂತ ಹೆಚ್ಚು ಭಾಗ್ಯಲಕ್ಷ್ಮೀ ಬಾಂಡ್‌ಗಳ ವಿತರಣೆ, ಬಾಣಂತಿಯರಿಗೆ ಸೀಮಂತ ಕಾರ್ಯ ಹಾಗೂ ಮಕ್ಕಳ ಹುಟ್ಟು ಹಬ್ಬ ಆಚರಣೆ ನಡೆಯಿತು. ಉಪನಿರ್ದೇಶಕ ಬಸವರಾಜ ವರವಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸದ ಅಣ್ಣಾಸಾಹೇಬ ಜೊಲ್ಲೆ, ಮಹಾಂತೇಶ ಕವಟಗಿಮಠ, ಬಾಬು ಮಿರಜೆ, ಸೋಮು ಗವನಾಳೆ, ಗುಲಾಬ ಬಾಗವಾನ, ಅನಿಲ ಮಾನೆ, ನಾಗರಾಜ ಮೇಧಾರ, ಸಿಡಿಪಿಒ ದೀಪಾ ಕಾಳೆ ಇದ್ದರು.
ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕೆಂಬ ಉದ್ದೇಶದಿಂದ ಪೋಷಣ ಅಭಿಯಾನ ಯೋಜನೆ ಜಾರಿಗೆ ತಂದಿದ್ದು, ಅದರ ಅನುಷ್ಠಾನಕ್ಕೆ ಕಾರ್ಯಕರ್ತರು ಶ್ರಮಿಸಬೇಕು.
ಮಹಾಂತೇಶ ಕವಟಗಿಮಠ ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ