ಆರೋಪಿ ಸುಳಿವು ನೀಡಿದ ಸಂಜು! ನಿವೃತ್ತ ಪೇದೆ ಬಲಿ ಪಡೆದಿದ್ದ ಆಟೋ ಪತ್ತೆ

ಬೆಂಗಳೂರು: ನಿವೃತ್ತ ಪೊಲೀಸ್ ಪೇದೆಗೆ ಡಿಕ್ಕಿ ಹೊಡೆದು ಬಲಿ ತೆಗೆದುಕೊಂಡ ಆಟೋ ಚಾಲಕನನ್ನು ಬಾಲಿವುಡ್ ನಟ ಸಂಜಯ್ ದತ್ ಪೋಸ್ಟರ್ ಸುಳಿವಿನಿಂದ ಮಡಿವಾಳ ಪೊಲೀಸರು ಬಂಧಿಸಿದ್ದಾರೆ.

ಮಡಿವಾಳ ಕೆಎಸ್​ಆರ್​ಪಿ ವಸತಿ ಗೃಹದಲ್ಲಿ ವಾಸಿಸುತ್ತಿದ್ದ ರಾಜ್ಯ ಮೀಸಲು ಪಡೆಯ ನಿವೃತ್ತ ಪೇದೆ ರಾಮದಾಸ್ (65) ಮೃತರು. ಆಟೋಚಾಲಕ ಶೋಯೆಬ್ (30) ಬಂಧಿತ.

ಮಡಿವಾಳ ಮಾರುಕಟ್ಟೆ ಬಳಿ ಜೂ.17ರ ಮಧ್ಯಾಹ್ನ ರಾಮ್ಾಸ್ ರಸ್ತೆ ದಾಟುತ್ತಿದ್ದರು. ಆ ಸಂದರ್ಭದಲ್ಲಿ ವೇಗವಾಗಿ ಬಂದ ಆಟೋ ರಾಮ್ಾಸ್​ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ರಾಮ್ಾಸ್ ಅವರನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು.

ಮಡಿವಾಳ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆಟೋಚಾಲಕನಿಗೆ ಶೋಧ ನಡೆಸುತ್ತಿದ್ದರು. ದುರ್ಘಟನೆ ನಡೆದ ಸ್ಥಳದ ಸಮೀಪದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ರಸ್ತೆ ಅಪಘಾತ ನಡೆದ ದೃಶ್ಯ ಸೆರೆಯಾಗಿತ್ತಾದರೂ ಆಟೋದ ಸಂಖ್ಯೆ ಕಾಣಿಸಿರಲಿಲ್ಲ. ಆದರೆ, ಆಟೋದ ಮುಂಭಾಗದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಪೋಸ್ಟರ್ ಇರುವುದು ಕಂಡುಬಂದಿತ್ತು.

ಸುಳಿವು ನೀಡಿದ ಪೋಸ್ಟರ್: ಈ ಸುಳಿವಿನ ಮೇರೆಗೆ ಮಡಿವಾಳ ಮಾರುಕಟ್ಟೆ ಸುತ್ತಮುತ್ತಲಿದ್ದ 20ಕ್ಕೂ ಅಧಿಕ ಆಟೋವನ್ನು ಮಡಿವಾಳ ಸಂಚಾರ ಪೊಲೀಸರು ಪರಿಶೀಲಿಸಿದರೂ ಪ್ರಯೋಜನವಾಗಿರಲಿಲ್ಲ. ಜೂ.18ರಂದು ಲಾಲ್​ಬಾಗ್ ಸಿದ್ದಾಪುರದ ಬಳಿ ಮನೆಯೊಂದರ ಮುಂದೆ ನಿಂತಿದ್ದ

ಆಟೋದಲ್ಲಿ ಸಂಜಯ್ದತ್ ಪೋಸ್ಟರ್ ಇರುವ ಬಗ್ಗೆ ಸಂಚಾರ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಕೂಡಲೇ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲಿಸಿದರು. ಸಿಸಿ ಕ್ಯಾಮರಾದಲ್ಲಿ

ಸೆರೆಯಾಗಿದ್ದ ಆಟೋ ಜತೆಗೆ ಹೋಲಿಕೆಯಾಗಿರುವುದು ಬೆಳಕಿಗೆ ಬಂದಿತು. ಆಟೋ ಚಾಲಕ ಶೋಯೆಬ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾನೇ ಡಿಕ್ಕಿ ಹೊಡೆದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *