ಆರೋಗ್ಯಕ್ಕಾಗಿ ಯೋಗ 21ರಂದು

ಹುಬ್ಬಳ್ಳಿ: ವಿಶ್ವ ಯೋಗ ದಿನಾಚರಣೆ ನಿಮಿತ್ತ ಕನ್ನಡದ ನಂಬರ್ 1 ದಿನಪತ್ರಿಕೆ ವಿಜಯವಾಣಿ, ದಿಗ್ವಿಜಯ ಸುದ್ದಿವಾಹಿನಿ ಹಾಗೂ ವಿಆರ್​ಎಲ್ ಲಾಜಿಜಿಸ್ಟಿಕ್ ಸಹಯೋಗದಲ್ಲಿ ಶ್ರೀ ದುರ್ಗಾ ಡೆವೆಲಪರ್ಸ್ ಆಂಡ್ ಪ್ರಮೋಟರ್ಸ್ ವತಿಯಿಂದ ದೇಶಪಾಂಡೆ ನಗರದ ಹುಬ್ಬಳ್ಳಿ ಸ್ಪೋರ್ಟ್ಸ್ (ಜಿಮ್ಖಾನಾ) ಮೈದಾನದಲ್ಲಿ ಜೂನ್ 21ರಂದು ಬೆಳಗ್ಗೆ 6 ಗಂಟೆಗೆ ‘ಆರೋಗ್ಯಕ್ಕಾಗಿ ಯೋಗ’ ಏರ್ಪಾಟಾಗಿದೆ.

ಮುಖ್ಯ ಅತಿಥಿಗಳಾಗಿ ಪತಂಜಲಿ ಯೋಗ ಪೀಠದ ಕರ್ನಾಟಕ ಪ್ರಭಾರಿ ಭವರಲಾಲ್ ಆರ್ಯ, ಬಾಲಾಜಿ ಆಸ್ಪತ್ರೆಯ ಡಾ. ಕ್ರಾಂತಿಕಿರಣ ಆಗಮಿಸುವರು. ಪತಂಜಲಿ, ರುಚಿ ಸಿಲ್ಕ್ಸ್, ಸ್ಪ್ಪೂರ್ತಿ ಹರ್ಬಲ್ಸ್, ಇಯರ್ ಸೈನ್ಸ್ ಸೆಂಟರ್ ಪ್ರಾಯೋಜಕತ್ವ ವಹಿಸಲಿವೆ.

ಇವೆಂಟ್ ಪಾರ್ಟನರ್ ಆಸ್ಟೆರಿಕ್ಸ್, ಫುಡ್ ಪಾರ್ಟನರ್ ಅದಮ್ಯ ಚೇತನ, ಹೆಲ್ತ್ ಡ್ರಿಂಕ್ ಪಾರ್ಟನರ್ ಕೋಕಮ್ ಪಾನಿ, ರೇಡಿಯೋ ಪಾರ್ಟನರ್ ರೆಡ್ ಎಫ್​ಎಂ ಆಗಿ ಸಹಕರಿಸಲಿವೆ. ಯೋಗ ತಜ್ಞರು, ಶಿಕ್ಷಕರು, ಮಾರ್ಗದರ್ಶಕರು ಸಾರ್ವಜನಿಕರು ಪಾಲ್ಗೊಳ್ಳುವರು. ನೀವೂ ಹೆಸರು ನೋಂದಾಯಿಸಿ ಈ ಬೃಹತ್ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ. ಮಾಹಿತಿಗೆ ಮೊ.ಸಂ. 8884411688, 8884432301ಗೆ ಸಂರ್ಪಸಬಹುದು.

ಸಾಮೂಹಿಕ ಯೋಗಾಭ್ಯಾಸ 21 ರಂದು: ಧಾರವಾಡ: ಹೃದಯಕ್ಕಾಗಿ ಯೋಗ ಎಂಬ ಘೊಷವಾಕ್ಯದಡಿಯ 5ನೇ ಅಂತಾರಾಷ್ಟ್ರೀಯ ಯೋಗ ದಿನ ನಿಮಿತ್ತ ಇಲ್ಲಿನ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಜೂ. 21ರಂದು ಸಾಮೂಹಿಕ ಯೋಗಾಭ್ಯಾಸ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಸಂಗಮೇಶ ಕಲಹಾಳ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲಾಡಳಿತ, ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾ ಪಂಚಾಯಿತಿ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಅಂದು ಬೆಳಗ್ಗೆ 6.45ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಕಾರ್ಯಕ್ರಮ ಉದ್ಘಾಟಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕರಾದ ಜಗದೀಶ ಶೆಟ್ಟರ್, ಪ್ರಸಾದ ಅಬ್ಬಯ್ಯ, ಅರಬೈಲ್ ಶಿವರಾಮ ಹೆಬ್ಬಾರ, ಶಂಕರ ಪಾಟೀಲ ಮುನೇನಕೊಪ್ಪ, ಅಮೃತ ದೇಸಾಯಿ, ಕುಸುಮಾವತಿ ಶಿವಳ್ಳಿ, ಸಿ.ಎಂ. ನಿಂಬಣ್ಣವರ, ಬಸವರಾಜ ಹೊರಟ್ಟಿ, ಶ್ರೀನಿವಾಸ ಮಾನೆ, ಪ್ರದೀಪ ಶೆಟ್ಟರ್, ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ, ಜಿ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ ಅತಿಥಿಗಳಾಗಿ ಪಾಲ್ಗೊಳ್ಳುವರು. ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಯೋಗ ಪರಿಣತರು ಶೀತಲೀಕರಣ, ವ್ಯಾಯಾಮ ಆಸನಗಳು, ಕಪಾಲಭಾತಿ, ಪ್ರಾಣಾಯಾಮ, ಧ್ಯಾನ ಮತ್ತು ಶಾಂತಿ ಮಂತ್ರ ಕುರಿತು ಯೋಗ ಪ್ರಾತ್ಯಕ್ಷಿಕೆ ನೀಡುವರು. 3000ಕ್ಕೂ ಅಧಿಕ ಜನರು ಆಗಮಿಸುವ ನಿರೀಕ್ಷೆ ಇದೆ. ಪಾಲ್ಗೊಳ್ಳುವವರು ಯೋಗಾ ಮ್ಯಾಟ್​ಗಳನ್ನು ತರಬೇಕು ಎಂದರು.

ಜೂ. 20ರಂದು ಬೆಳಗ್ಗೆ 7.45ಕ್ಕೆ ಆರ್.ಎನ್. ಶೆಟ್ಟಿ ಕ್ರೀಡಾಂಗಣದಿಂದ ಯೋಗ ನಡಿಗೆ ಜಾಥಾ ನಡೆಯಲಿದೆ. ಜಿಲ್ಲಾಧಿಕಾರಿ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸುವರು. ಜಾಥಾ ಆರ್.ಎನ್. ಶೆಟ್ಟಿ ಕ್ರೀಡಾಂಗಣದಿಂದ ಜ್ಯುಬಿಲಿ ವೃತ್ತ, ಜಿಲ್ಲಾ ಆಸ್ಪತ್ರೆ, ಕೊಂಡವಾಡ ಓಣಿ, ವಿಜಯಾ ರಸ್ತೆ, ಸಿಬಿಟಿ ಮಾರ್ಗವಾಗಿ ಕ್ರೀಡಾಂಗಣ ತಲುಪಲಿದೆ ಎಂದರು. ಡಾ. ಬಿ.ಪಿ. ಪೂಜಾರ, ಡಾ. ಮಲ್ಲಿಕಾರ್ಜುನ ಆನಿಶೆಟ್ಟರ, ಡಾ. ನಿಂಗಪ್ಪ ಕಿನ್ನಾಳ, ಅಶೋಕ ಅಕ್ಕೇರಿ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ಯೋಗ ನಮ್ಮ ಪ್ರಾಚೀನ ಆರೋಗ್ಯ ಪದ್ಧತಿ. ಅದರ ಮಹತ್ವ ಮತ್ತು ಪ್ರಾಮುಖ್ಯತೆ ಈಗೀಗ ವಿಸ್ತಾರಗೊಳ್ಳುತ್ತಿದೆ. ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕವಾಗಿ ಸಮರ್ಥರನ್ನಾಗಿ ಮಾಡುವುದೇ ಯೋಗ. ವಿಜಯವಾಣಿ ಮತ್ತು ದಿಗ್ವಿಜಯ ಸುದ್ದಿವಾಹಿನಿ ಸಹಭಾಗಿತ್ವದಲ್ಲಿ ಯೋಗ ದಿನ ಏರ್ಪಡಿಸುತ್ತಿರುವುದು ಸ್ತುತ್ಯರ್ಹ. ಇಂಥ ಕಾರ್ಯಕ್ರಮದಲ್ಲಿ ಹೆಚ್ಚು ಜನರು ಪಾಲ್ಗೊಳ್ಳಬೇಕು. | ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತ

Leave a Reply

Your email address will not be published. Required fields are marked *