ಯಾದಗಿರಿ: ಗ್ರಾಮೀಣ ಭಾಗದ ಮಹಿಳೆಯರು ಆರ್ಥಿಕ ಮತ್ತು ಸಾಮಾಜಿಕವಾಗಿ ಸಬಲರಾಗುವ ನಿಟ್ಟಿನಲ್ಲಿ ಸರಕಾರ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುತ್ತಿದೆ ಎಂದು ಜಿಪಂ ಸಿಇಒ ಗರೀಮಾ ಪನ್ವಾರ ತಿಳಿಸಿದರು.
ನಗರದ ತಾಪಂ ಕಚೇರಿಯ ಸಾಮಥ್ರ್ಯ ಸೌಧದಲ್ಲಿ ಕೂಸಿನ ಮನೆಗಳ ಆರೈಕೆದಾರರಿಗಾಗಿ ಹಮ್ಮಿಕೊಂಡ 2ನೇ ಹಂತದ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿ, ಮನೆಯಲ್ಲಿ ದಾಖಲಾಗುವ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಸೂಕ್ಷ್ಮ ಮನಸ್ಥಿತಿ ಅರಿತುಕೊಳ್ಳುವ ಜಾಣ್ಮೆ ಜತೆಗೆ ಮಕ್ಕಳ ತುಂಟಾಟ ನಿಯಂತ್ರಿಸಲು ತಾಳ್ಮೆಯ ಸಹನೆ ಗುಣ ಮಕ್ಕಳ ನಿಮ್ಮಲ್ಲಿರಬೇಕು ಎಂದು ಸಲಹೆ ನೀಡಿದರು.
ಪ್ರತಿ ನಿತ್ಯ ಯಾವುದಾದರೂ ಒಂದು ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿರುವ ಗುಣ ಮಕ್ಕಳಲ್ಲಿ ಇರುತ್ತದೆ. ಹೀಗಾಗಿ, ತುಂಟ ಚಟುವಟಿಕೆ ನಿಯಂತ್ರಿಸಿ, ತಿದ್ದುವ ಜತೆಗೆ ಪಾಲನೆ-ಪೋಷಣೆ ಮಾಡಲು ಹೃದಯವಂತಿಕೆ ಗುಣ ಹೊಂದಬೇಕು. ನರೇಗಾ ಯೋಜನೆಯಡಿ ನೋಂದಾಯಿತ ಕೂಲಿಕಾರರ, ಗ್ರಾಮೀಣ ಕೃಷಿ ಕೂಲಿ ಕಾರ್ಮಿಕ ಹಾಗೂ ರೈತರ ಕುಟುಂಬಗಳ ನಿರ್ವಹಣೆ ಹಾಗೂ ಆಥರ್ಿಕ ಬಲವರ್ಧನೆಗೆ ಮಹಿಳಾ ಕೂಲಿ ಕಾರ್ಮಿಕ 3 ವರ್ಷದೊಳಗಿನ ಮಕ್ಕಳ ದೈಹಿಕ ಮಾನಸಿಕ ಆರೋಗ್ಯ, ಪೌಷ್ಟಿಕತೆ ಹಾಗೂ ಸುರಕ್ಷತೆಗೆ ಗ್ರಾಪಂಗಳಲ್ಲಿ ಸರಕಾರ ಕೂಸಿನ ಮನೆಗಳನ್ನು ಆರಂಭಿಸಿದೆ ಎಂದು ಹೇಳಿದರು..