ಕಾರವಾರ: ಆರು ಜನ ಕರೊನಾದಿಂದ ಗುಣ ಹೊಂದಿದ್ದು, ಅವರನ್ನು ಶನಿವಾರ ನಗರದ ಕ್ರಿಮ್್ಸ ನಿಂದ ಬಿಡುಗಡೆ ಮಾಡಲಾಯಿತು. ಕಾರವಾರ ಕಾಜುಬಾಗದ 24 ವರ್ಷದ ಮಹಿಳೆ, ಹಳಿಯಾಳದ 14 ವರ್ಷದ ಬಾಲಕ, 25 ವರ್ಷದ ಮಹಿಳೆ, ದಾಂಡೇಲಿಯ 24 ಹಾಗೂ 34 ವರ್ಷದ ಇಬ್ಬರು ಪುರುಷರು, ಕುಮಟಾದ 56 ವರ್ಷದ ವ್ಯಕ್ತಿ ಬಿಡುಗಡೆಯಾಗಿದ್ದಾರೆ. ಕ್ರಿಮ್್ಸ ನಿರ್ದೇಶಕ ಡಾ.ಗಜಾನನ ನಾಯಕ ಎಲ್ಲರಿಗೂ ಪ್ರಮಾಣಪತ್ರ, ಪುಷ್ಪ ನೀಡಿ ಶುಭ ಹಾರೈಸಿದರು.
ಬುಲೆಟಿನ್ನಲ್ಲಿ ಮಾಹಿತಿ: ಶುಕ್ರವಾರ ಕರೊನಾ ದೃಢಪಟ್ಟ ಭಟ್ಕಳದ ಮೂವರು ಹಾಗೂ ಕುಮಟಾದ ಒಬ್ಬ ವ್ಯಕ್ತಿಯ ಮಾಹಿತಿಯನ್ನು ಶನಿವಾರ ರಾಜ್ಯ ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ನಲ್ಲಿ ಪ್ರಕಟಿಸಲಾಗಿದೆ. ಮಹಾರಾಷ್ಟ್ರದಿಂದ ಆಗಮಿಸಿದ ಕುಮಟಾ ಧಾರೇಶ್ವರದ 26 ವರ್ಷದ ಮಹಿಳೆ(ಯುಕೆ-130), ದುಬೈನಿಂದ ಆಗಮಿಸಿದ ಭಟ್ಕಳ ನ 36 ವರ್ಷದ ಮಹಿಳೆ (ಯುಕೆ-127), ಮಹಾರಾಷ್ಟ್ರದಿಂದ ಹಿಂತಿರುಗಿದ 24 ವರ್ಷದ ಭಟ್ಕಳ ಆಝಾದ್ ನಗರದ ಯುವಕ(ಯುಕೆ-128), ಹಾಗೂ ಶಿರಾಲಿಯ 45 ವರ್ಷದ ಪುರುಷ(ಯುಕೆ-129)ನಲ್ಲಿ ರೋಗ ಇದೆ ಎಂದು ವಿವರಿಸಲಾಗಿದೆ.