25.5 C
Bangalore
Monday, December 16, 2019

ಆಯುಷ್ಮಾನ್ ಭಾರತಕ್ಕೆ ಸರ್ವರ್ ರೋಗ

Latest News

ರಾಜರಾಜೇಶ್ವರಿ ನಗರದ ಸಮಸ್ಯೆ ಬಗೆಹರಿಸುವಂತೆ ಬಿಜೆಪಿ ನಾಯಕರ ಬೆನ್ನುಹತ್ತಿರುವ ಅನರ್ಹ ಶಾಸಕ ಮುನಿರತ್ನ

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಸಮಸ್ಯೆ ಬಗೆ ಹರಿಸಿ ಶೀಘ್ರವೇ ಉಪ ಚುನಾವಣೆ ನಡೆಯುವಂತೆ ಮಾಡಬೇಕು ಎಂದು ಅನರ್ಹ ಶಾಸಕ ಮುನಿರತ್ನ...

ಪೌರತ್ವ ತಿದ್ದುಪಡಿ ಕಾಯ್ದೆ, ಎನ್​ಆರ್​ಸಿ ವಿರುದ್ಧ ಕೋಲ್ಕತ್ತದಲ್ಲಿ ಬೃಹತ್​ ರ‍್ಯಾಲಿ; ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವ

ಕೋಲ್ಕತ್ತ: ಪೌರತ್ವ ತಿದ್ದುಪಡಿ ಕಾಯ್ದೆ ಈಗಾಗಲೇ ದೇಶದ ಕೆಲವು ರಾಜ್ಯಗಳಲ್ಲಿ ಕಿಡಿ ಹೊತ್ತಿಸಿದೆ. ದೇಶದ ಈಶಾನ್ಯ ಭಾಗದಲ್ಲಿ ಪ್ರಾರಂಭವಾದ ಪ್ರತಿಭಟನೆ ಈಗ ದೆಹಲಿ, ಉತ್ತರ ಪ್ರದೇಶ...

ಅಯ್ಯಪ್ಪ ಮಾಲಾಧಾರಿಗಳಿಗೆ ಅನ್ನದಾನ ಮಾಡಿದ : ಸಾಮರಸ್ಯದ ಕಾರ್ಯಕ್ರಮ

ಬಳ್ಳಾರಿ: ನಗರದ ಹೊಸಪೇಟೆ ರಸ್ತೆಯಲ್ಲಿರುವ ಏಳು ಮಕ್ಕಳ ದೇವಸ್ಥಾನದಲ್ಲಿ ಅಯ್ಯಪ್ಪ ಮಾಲಾಧಾರಿಗಳಿಗೆ ಸೋಮವಾರ ಮುಸ್ಲಿಂರು ಊಟ ಬಡಿಸುವ ಮೂಲಕ ಸಾಮರಸ್ಯಕ್ಕೆ ಮುನ್ನುಡಿ ಬರೆದರು....

ಒಂದೂವರೆ ತಾಸು ಶಸ್ತ್ರಚಿಕಿತ್ಸೆ ನಡೆಸಿ ಎದೆಗೆ ನಾಟಿದ್ದ ಕಬ್ಬಿಣ ರಾಡ್​ ಹೊರತೆಗೆದ ವೈದ್ಯರು: ಪ್ರಾಣಾಪಾಯದಿಂದ ವ್ಯಕ್ತಿ ಪಾರು

ರಾಯಚೂರು: ಎದೆಗೆ ಕಬ್ಬಿಣದ ರಾಡ್ ತೂರಿದ್ದ ವ್ಯಕ್ತಿಗೆ ರಾಯಚೂರಿನ ಖಾಸಗಿ ಆಸ್ಪತ್ರೆಯ ವೈದ್ಯರು ಸತತ ಒಂದೂವರೆ ತಾಸು ಶಸ್ತ್ರಚಿಕಿತ್ಸೆ ನಡೆಸಿ ಪ್ರಾಣಾಪಾಯದಿಂದ ಪಾರು...

ಹಿಂದು ರಾಷ್ಟ್ರದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ಮಿತಿಮೀರಿದೆ

ಕೊಡಗು: ಹಿಂದು ರಾಷ್ಟ್ರದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ಮಿತಿಮೀರಿದೆ ಎಂದು ವಕೀಲ ಪಿ. ಕೃಷ್ಣಮೂರ್ತಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಹಿಂದು ಜನಜಾಗೃತಿ ಸಮಿತಿಯಿಂದ ಕುಶಾಲನಗರದ ಗಾಯತ್ರಿ ಕಲ್ಯಾಣ...

ಧಾರವಾಡ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ಜನ್ ಆರೋಗ್ಯ ಯೋಜನೆ ಜಾರಿಯಲ್ಲಿ ಧಾರವಾಡ ಜಿಲ್ಲೆ ಆಂಶಿಕ ಪ್ರಗತಿಯನ್ನಷ್ಟೇ ಸಾಧಿಸಿದ್ದು, ಎಲ್ಲರಿಗೂ ಕಾರ್ಡ್ ವಿತರಿಸಲು ಸರ್ವರ್ ಅಸಹಕಾರವೇ ದೊಡ್ಡ ತೊಡಕಾಗಿದೆ.

- Advertisement -

ಜಿಲ್ಲೆಯಲ್ಲಿ ಸುಮಾರು 5 ಲಕ್ಷ ಜನರು ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್) ಕುಟುಂಬಕ್ಕೆ ಸೇರಿದವರಿದ್ದಾರೆ. ಇದುವರೆಗೆ 1.42 ಲಕ್ಷ ಜನರಿಗೆ ‘ಆಯುಷ್ಮಾನ್ ಭಾರತ’ ಆರೋಗ್ಯ ಕಾರ್ಡ್ ವಿತರಿಸಲಾಗಿದೆ.

‘ಆಯುಷ್ಮಾನ್ ಭಾರತ’ ಕಾರ್ಡ್ ಪಡೆದವರು ನೋಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ಜಿಲ್ಲಾ ಆಸ್ಪತ್ರೆ, ಹುಬ್ಬಳ್ಳಿ ಕಿಮ್್ಸ ಆಸ್ಪತ್ರೆ ಕುಂದಗೋಳ, ನವಲಗುಂದ, ಕಲಘಟಗಿ ತಾಲೂಕು ಆಸ್ಪತ್ರೆ, ಅವಳಿನಗರದ ಹು-ಧಾ ಒನ್ ಕೇಂದ್ರಗಳು, ಜಿಲ್ಲೆಯಾದ್ಯಂತ 42 ಸೇವಾ ಸಿಂಧು ಕೇಂದ್ರಗಳಲ್ಲಿ ‘ಆಯುಷ್ಮಾನ್ ಭಾರತ’ ಕಾರ್ಡ್ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ.

ಪ್ರತಿದಿನ ತಲಾ 50 ಬಿಪಿಎಲ್ ಕುಟುಂಬಗಳಿಗೆ ‘ಆಯುಷ್ಮಾನ್ ಭಾರತ’ ಕಾರ್ಡ್ ವಿತರಿಸಲಾಗುತ್ತಿದೆ. ಮೊದಲು ಬಂದವರಿಗೆ ಮೊದಲ ಆದ್ಯತೆ. ಜನ ಬೆಳ್ಳಂಬೆಳಗ್ಗೆ ಕೇಂದ್ರಗಳ ಎದುರು ಕಾದು ನಿಂತು ಟೋಕನ್ ಪಡೆಯುತ್ತಿದ್ದಾರೆ. ಹು-ಧಾ ಒನ್ ಕೇಂದ್ರಗಳಲ್ಲಿ ಪ್ರತಿದಿನ 50 ಬಿಪಿಎಲ್ ಕುಟುಂಬಗಳಿಗೆ ಕಾರ್ಡ್ ವಿತರಿಸಲಾಗುತ್ತಿದೆ. ಬಿಪಿಎಲ್ ಕಾರ್ಡ್​ದಾರ ಕುಟುಂಬದ ಎಲ್ಲ ಸದಸ್ಯರ ಬಯೋಮೆಟ್ರಿಕ್ ಪಡೆದು ವಿವರ ಅಪ್​ಲೋಡ್ ಮಾಡಿ ಕಾರ್ಡ್ ವಿತರಿಸಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ತಲಾ ಕಾರ್ಡ್​ಗೆ 10 ರೂ. ಶುಲ್ಕ ಆಕರಿಸುತ್ತಿದ್ದು, ಹು-ಧಾ ಒನ್ ಕೇಂದ್ರಗಳಲ್ಲಿ 35 ರೂ. ಶುಲ್ಕ ನಿಗದಿಯಾಗಿದೆ. ಬಿಪಿಎಲ್ ಕುಟುಂಬದ ಎಲ್ಲ ಸದಸ್ಯರು ‘ಆಯುಷ್ಮಾನ್ ಭಾರತ’ ಕಾರ್ಡ್ ಪಡೆಯಲು ಕನಿಷ್ಠ ಒಂದು ದಿನವಾದರೂ ಬೇಕು. ಸರ್ವರ್ ಸಮಸ್ಯೆಯಿಂದಾಗಿ ಇದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದೂ ಇದೆ.

ಕಿಮ್್ಸ ನಲ್ಲಿ 10 ನಿಮಿಷ: ಹುಬ್ಬಳ್ಳಿ ಕಿಮ್ಸ್​ನಲ್ಲಿ ಅರ್ಜಿ ಸಲ್ಲಿಸಿದ 10 ನಿಮಿಷದಲ್ಲಿ ಕಾರ್ಡ್ ಕೈಗೆ ಲಭಿಸುತ್ತಿದೆ. ಬಿಪಿಎಲ್, ಎಪಿಎಲ್, ಅಂತ್ಯೋದಯ ಕಾರ್ಡ್​ಗಳನ್ನು ಆಧಾರ್ ಜೊತೆಗೆ ತೆಗೆದುಕೊಂಡು ಹೋದರೆ ಸಾಕು, ಕೆಲಸ ಸಲೀಸು. ಹಾಗಾಗಿ ಅಲ್ಲಿ ಸರತಿ ಸಾಲಿನಲ್ಲಿ ನಿಂತು ಕಾರ್ಡ್ ಪಡೆಯುವವರ ಸಂಖ್ಯೆ ಕುಸಿದಿದೆ.

ಮೊದಲೆಲ್ಲ ಚಿಕಿತ್ಸೆಗೆ ದಾಖಲಾದ ಬಳಿಕ ಮಂಜೂರಿಗೆ ಪ್ರಸ್ತಾವನೆ ಕಳುಹಿಸಲಾಗುತ್ತಿತ್ತು. ಒಪ್ಪಿಗೆ ಬಂದ ನಂತರ ಚಿಕಿತ್ಸೆ ಕೊಡಲಾಗುತ್ತಿತ್ತು,. ಈಗ ಹಾಗೇನಿಲ್ಲ, ದಾಖಲಾದ ಕೂಡಲೇ ಚಿಕಿತ್ಸೆ ಆರಂಭಿಸಬಹುದು. 48 ಗಂಟೆಯಲ್ಲಿ ಸಂಬಂಧಿಸಿದ ಆಸ್ಪತ್ರೆಗಳು ದಾಖಲೆಗಳನ್ನು ಸಲ್ಲಿಸಿದರೆ ಹಣ ಮಂಜೂರಾಗುತ್ತದೆ. ಹೀಗಾಗಿ, ನೋಂದಾಯಿತ ಆಸ್ಪತ್ರೆಯಲ್ಲಿ ಸಹ ಕೂಡಲೇ ಚಿಕಿತ್ಸೆ ಸಿಗುತ್ತದೆ. 1652 ರೋಗಗಳಿಗೆ ಆಯುಷ್ಮಾನ್ ಕಾರ್ಡ್ ಅಡಿಯಲ್ಲಿ ಚಿಕಿತ್ಸೆ ಲಭ್ಯ. ಸರ್ಕಾರಿ ಆಸ್ಪತ್ರೆಯಲ್ಲಿಯೂ ಹಲವು ಚಿಕಿತ್ಸೆಗೆ, ಸಲಕರಣೆಗಳಿಗೆ ಹಣ ಆಕರಿಸಬೇಕಾಗುತ್ತದೆ. ಆಯುಷ್ಮಾನ್ ಕಾರ್ಡ್ ಇದ್ದವರಿಗೆ ಸರ್ಕಾರವೇ ಚಿಕಿತ್ಸಾ ವೆಚ್ಚ ಭರಿಸುತ್ತದೆ. ರಾಜ್ಯ ಸರ್ಕಾರದ ಮಹಾತ್ವಕಾಂಕ್ಷೆಯ ಯಶಸ್ವಿನಿ ಹಾಗೂ ಕೇಂದ್ರ ಸರ್ಕಾರದ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ ಕಾರ್ಡ್​ಗಳನ್ನು ತೆಗೆದುಕೊಂಡು ಹೋದರೆ ಸೇವೆ ಸಿಗುವುದಿಲ್ಲ. ಬದಲಾಗಿ ಬಿಪಿಎಲ್, ಎಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ತೆಗೆದುಕೊಂಡು ಹೋದರೆ ಮಾತ್ರ ಆಯುಷ್ಮಾನ್ ಕಾರ್ಡ್ ಹಾಗೂ ಚಿಕಿತ್ಸೆ ಸಿಗುತ್ತಿದೆ. ಕಿಮ್ಸ್​ನಲ್ಲಿ ಕಳೆದ ಮಾರ್ಚ್​ನಿಂದ ಜುಲೈ 2ರವರೆಗೆ 25,949 ಜನರಿಗೆ ಆಯುಷ್ಮಾನ್ ಕಾರ್ಡ್ ವಿತರಿಸಲಾಗಿದೆ. ಸತ್ತೂರಿನ ಎಸ್​ಡಿಎಂ ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ ಕಾರ್ಡ್​ಗೆ ಮಾನ್ಯತೆ ಇದೆ.

ಕೂಪನ್ ಪಡೆದವರದ್ದೇ ಮುಗಿದಿಲ್ಲ: ಕುಂದಗೋಳ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಡ್ ವಿತರಣೆಗೆ ಕೌಂಟರ್ ತೆರೆಯಲಾಗಿದ್ದು, ಈವರೆಗೆ ಒಟ್ಟು 5 ಸಾವಿರ ಫಲಾನá-ಭವಿಗಳಿಗೆ ವಿತರಿಸಲಾಗಿದೆ.

2 ತಿಂಗಳ ಹಿಂದೆಯೇ ಕೂಪನ್ ವಿತರಿಸಲಾಗಿದೆ. ಕೂಪನ್ ಪಡೆದವರ ಸರದಿಯೇ ಜುಲೈ 15ರವರೆಗೆ ಆಗಬಹುದು. ನಂತರ ಕೂಪನ್ ನೀಡಲಾಗುವುದಿಲ್ಲ. ನಿತ್ಯವೂ ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡುವ ಸಾಧ್ಯತೆ ಇದೆ.

ಒಂದೇ ಕೌಂಟರ್ ಇರá-ವುದರಿಂದ ಫಲಾನುಭವಿಯಾಗುವವರು ಬೆಳಗಿನ ಜಾವ ಆಸ್ಪತ್ರೆ ಮುಂದೆ ಬಂದು ಸರದಿ ಸಾಲಿನಲ್ಲಿ ನಿಲ್ಲುವ ಸ್ಥಿತಿಯಿದೆ. ಅಲ್ಲಿ ಸರದಿಗಾಗಿ ಆಗಾಗ ಜಗಳ ಉಂಟಾಗುವುದಿದೆ. ದಾಖಲೆ ಸಲ್ಲಿಸಿದ ಅರ್ಧ ಗಂಟೆಯಲ್ಲಿ ಕಾರ್ಡ್​ಗಳನ್ನು ವಿತರಿಸಲಾಗುತ್ತದೆ.

ಹೊಸ ತಾಲೂಕಲ್ಲಿಲ್ಲ ಸೌಲಭ್ಯ: ಅಳ್ನಾವರ ನೂತನ ತಾಲೂಕು ಆಗಿ 18 ತಿಂಗಳಾಗಿವೆ. ಆದರೆ, ಈವರೆಗೂ

ತಾಲೂಕು ಕೇಂದ್ರದಲ್ಲಿ ಇರಬೇಕಾದ ಸೌಲಭ್ಯಗಳು ಮಾತ್ರ ಇಲ್ಲ. ಆಯá-ಷ್ಮಾನ್

ಭಾರತ ಕಾರ್ಡ್ ಪಡೆಯಲು ಅಳ್ನಾವರ ಪಟ್ಟಣ ಹಾಗೂ 13 ಹಳ್ಳಿಗಳ ಜನರು ಈಗಲೂ ಧಾರವಾಡ ಸರ್ಕಾರಿ ಆಸ್ಪತ್ರೆಗೆ ತೆರಳಬೇಕಾಗಿದೆ. ಈಗಾಗಲೇ 2005 ಫಲಾನá-ಭವಿಗಳಿಗೆ ಕಾರ್ಡ್​ಗಳನ್ನು ನೀಡಲಾಗಿದೆ. ನಿತ್ಯ 15-20 ಜನರು ಹೆಸರು ನೋಂದಾಯಿಸಿಕೊಳ್ಳುತ್ತಿದ್ದಾರೆ. ಸರ್ಕಾರದ ಅಧಿಕೃತ ಕೇಂದ್ರ ತಾಲೂಕಿನ ಯಾವ ಭಾಗದಲ್ಲೂ ಇಲ್ಲ. ಜತೆಗೆ ಒಂದೇ ಕೇಂದ್ರದಲ್ಲಿ ವಿತರಣೆ ಮಾಡುತ್ತಿರá-ವ ಕಾರಣ ಹೆಚ್ಚು ನೋಂದಣಿ ವಿಳಂಬವಾಗುತ್ತಿದೆ.

ಕೆಲವೇ ಜನರಿಗೆ ಸಿಕ್ಕಿದೆ ಕಾರ್ಡ್: ಕಲಘಟಗಿ ತಾಲೂಕಿನಲ್ಲಿ ಕಾರ್ಡ್ ವಿತರಣೆಗೆ ವಿದ್ಯುತ್ ವ್ಯತ್ಯಯ, ಇಂಟರ್​ನೆಟ್ ಸೌಲಭ್ಯದ ತೊಂದರೆಯಿಂದ ಹಲವು ಸಮಸ್ಯೆ ಎದುರಾಗಿವೆ. ತಾಲೂಕು ಆಸ್ಪತ್ರೆಯಲ್ಲಿ ಸ್ಮಾರ್ಟ್ ಕಾರ್ಡ್ ವಿತರಿಸಲು ಪ್ರತ್ಯೇಕ ಕೊಠಡಿಯಿದೆ. ಜನವರಿಯಿಂದ ಜೂನ್ ಅಂತ್ಯದವರೆಗೆ 480 ಫಲಾನುಭವಿಗಳಿಗೆ ಕಾರ್ಡ್ ಮಾಡಿಕೊಡಲಾಗಿದೆ. ನಿತ್ಯ 25-30 ಜನರಿಗೆ ಕೊಡಲಾಗುತ್ತಿದೆ. ಇಂಟರ್​ನೆಟ್ ಸರ್ವರ್ ಸಹಕರಿಸಿದರೆ ಇನ್ನೂ ಸ್ವಲ್ಪ ಹೆಚ್ಚು ಜನರಿಗೆ ಕೊಡಬಹುದು. ಕೆಲ ದಿನಗಳಿಂದ ಸರ್ವರ್ ಸಮಸ್ಯೆ ಹೆಚ್ಚಿದೆ ಎಂದು ಆಪರೇಟರ್ ಶೀಲಾ ಎಂಬುವವರು ಪ್ರತಿಕ್ರಿಯಿಸಿದರು. ಸಿಎಸಿ (ಕಾಮನ್ ಸರ್ವಿಸ್ ಸೆಂಟರ್)ನಲ್ಲಿ 35 ರೂ. ಪಡೆದು ದಿನಕ್ಕೆ 15-20 ಜನರಿಗೆ ಕಾರ್ಡ್​ ನೋಂದಣಿ ಮಾಡಿಕೊಡಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಯಲ್ಲಿನ ಒಳ ರೋಗಿಗಳು ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲಿಯೇ ವೈದ್ಯರು ನೀಡಿದ ರೋಗ ನಿರ್ಣಯದ ದಾಖಲೆಗಳನ್ನು ಪರಿಶೀಲಿಸಿ ಹಾಗೂ ಅವರ ಬಡತನ ರೇಖೆಗಿಂತ ಕೆಳಗಿರುವುದನ್ನು ಖಚಿತ ಪಡಿಸಿಕೊಂಡು ಈ ಯೋಜನೆಯ ಫಲಾನುಭವಿಗಳನ್ನಾಗಿ ಪರಿಗಣಿಸಲಾಗುತ್ತಿದೆ ಎಂದು ಸುವರ್ಣಾ ಆರೋಗ್ಯ ಸುರಕ್ಷಾ ಟ್ರಸ್ಟ್​ನ ಆರೋಗ್ಯ ಮಿತ್ರ ಎಂ.ರಾಜೇಶ್ವರಿ ತಿಳಿಸಿದ್ದಾರೆ.

ಇಲ್ಲೂ ಅದೇ ಕತೆ: ನವಲಗುಂದದ ಸರ್ಕಾರಿ ಆಸ್ಪತ್ರೆ ಮತ್ತು ಕೆಲವು ಸೇವಾ ಕೇಂದ್ರಗಳಲ್ಲಿ ಕಾರ್ಡ್ ವಿತರಿಸಲಾಗುತ್ತಿದೆ. ಆದರೆ, ತಾಂತ್ರಿಕ ತೊಂದರೆಯಿಂದಾಗಿ ಜನರು ಸರದಿಯಲ್ಲಿ ನಿಲ್ಲುವ, ಕಾರ್ಡ್ ಸಿಗದೇ ವಾಪಸ್ ಹೋಗುವ ಸಂದರ್ಭಗಳಿವೆ. ಅಣ್ಣಿಗೇರಿ ಯಲ್ಲೂ ಇದೇ ಪರಿಸ್ಥಿತಿಯಾಗಿದೆ.

Stay connected

278,752FansLike
588FollowersFollow
629,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...