ಆಯಿಲ್ ಟ್ಯಾಂಕ್ ಸ್ಫೋಟ ಐವರಿಗೆ ಗಾಯ

ಚಿಂಚೋಳಿ: ತಾಲೂಕಿನ ಚತ್ರಸಾಲ ಬಳಿಯಿರುವ ಕಲಬುರಗಿ ಸಿಮೇಂಟ್ ಕಂಪನಿಯ ಪ್ಲಾಂಟ್ನಲ್ಲಿರುವ ಕ್ಲಿನ್ ಹತ್ತಿರದ ಆಯಿಲ್ ಟ್ಯಾಂಕ್ ಸ್ಫೋಟದಿಂದ ಐದು ಕಾರ್ಮಿಕರಿಗೆ ಗಂಭೀರ ಗಾಯಗಳಾಗಿರುವ ಘಟನೆ ಜರುಗಿದೆ.
ಭಾನುವಾರ ರಾತ್ರಿ 11ಕ್ಕೆ ಕಾಮರ್ಿಕರು ಕಾರ್ಯನಿರ್ವಹಿಸುವ ವೇಳೆ ಸಿಮೇಂಟ್ ಪ್ಲಾಂಟ್ನಲ್ಲಿರುವ ಆಯಿಲ್ ಟ್ಯಾಂಕ್ ಸ್ಫೋಟಗೊಂಡಿದ್ದರಿಂದ ಆಂಧ್ರ ಮೂಲದ ದೇವಿದಾಸ (65) ಹಾಗೂ ಗರಗಪಳ್ಳಿ ಗ್ರಾಮದ ಮಹೇಶ (29) ಎನ್ನುವವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳು ನೆರೆಯ ತೆಲಂಗಾಣದ ಹೈದರಾಬಾದ್ನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಬ್ಬರ ಸ್ಥಿತಿಯೂ ಚಿಂತಾಜನಕವಾಗಿದೆ.
ಆಂಧ್ರ ಪ್ರದೇಶದ ನರಸ್ಮಿರೆಡ್ಡಿ, ತೆಲಂಗಾಣದ ಕರನಕೋಟ್ ಗ್ರಾಮದ ಕೃಷ್ಣಾ ಸೇರಿ ಬಿಹಾರಿ ಮೂಲದ ವ್ಯಕ್ತಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಕಂಪನಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಗಿದೆ ಎನ್ನಲಾಗಿದೆ. ಮಿರಿಯಾಣ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. ಸ್ಥಳಕ್ಕೆ ಕಾಮರ್ಿಕ ಅಧಿಕಾರಗಳ ಭೇಟಿ: ಬಳ್ಳಾರಿ ಮೂಲದ ಕೇಂದ್ರ ಸಕರ್ಾರದ ಕಾಮರ್ಿಕ ಅಧಿಕಾರಿಗಳು ಘಟನೆ ನಡೆದ ಕಲಬುರಗಿ ಸಿಮೆಂಟ್ ಕಂಪನಿಗೆ ಮಂಗಳವಾರ ಸಂಜೆ 5ಕ್ಕೆ ಭೇಟಿ, ನೀಡಿ ಪರಿಶೀಲನೆ ನಡೆಸಿದ್ದಾರೆ.


ಭಾನುವಾರ ರಾತ್ರಿ 11ಗಂಟೆ ವೇಳೆಗೆ ಆಯಿಲ್ ಟ್ಯಾಂಕ್ ಸ್ಫೋಟಗೊಂಡಿದೆ. ಈಗಾಗಲೇ ಹೈದರಾಬಾದ್ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಂಪನಿಯೇ ಆಸ್ಪತ್ರೆಯ ವೆಚ್ಚ ಭರಿಸುತ್ತಿದೆ. ಎಲ್ಲರೂ ಗುಣಮುಖರಾಗುತ್ತಾರೆ. ಕಂಪನಿಗಳ ಭದ್ರತಾ ಅಧಿಕಾರಿಗಳು ಬರುತ್ತಿರುವುದು ನಮ್ಮ ಗಮನಕ್ಕಿದೆ, ಬಂದಿಲ್ಲ.
| ಉದಯಕುಮಾರ ಕಂಪನಿಯ ಸೆಕ್ಯೂರೂಟಿ ಸುಪರವೇಜರ್

Leave a Reply

Your email address will not be published. Required fields are marked *