ಆಯತಪ್ಪಿ ಬಿದ್ದು ಬಾಲಕಿ ಸಾವು

ಝಳಕಿ: ಸಮೀಪದ ಗುಂದವಾನ ಗ್ರಾಮದ ಪೂಜಾರಿ ವಸ್ತಿ ಕ್ರಾಸ್ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಗುರುವಾರ ಟ್ರಾೃಕ್ಟರ್‌ನಿಂದ ಬಿದ್ದು ಬಾಲಕಿ ಮೃತಪಟ್ಟಿದ್ದಾಳೆ.
ಮಹಾರಾಷ್ಟ್ರ ರಾಜ್ಯದ ಹುಮನಾಬಾದ್ ಗ್ರಾಮದ ಕೋಮಲ ತುಕಾರಾಮ ಬೀಸೆ (6) ಮೃತಪಟ್ಟ ಬಾಲಕಿ.
ಬೀಳಗಿ ಬಾಡಗಂಡಿ ಕಬ್ಬಿನ ಕಾರ್ಖಾನೆಗೆ ಕಬ್ಬು ಕಟಾವು ಕಾರ್ಯ ಮುಗಿಸಿಕೊಂಡು ಟ್ರಾೃಕ್ಟರ್‌ನಲ್ಲಿ ತಂದೆ ತಾಯಿಯೊಂದಿಗೆ ಸ್ವಗ್ರಾಮಕ್ಕೆ ತೆರಳುತ್ತಿದ್ದಾಗ ಆಯತಪ್ಪಿ ಬಿದ್ದಿದ್ದಾಳೆ. ಟ್ರಾೃಕ್ಟರ್ ಚಾಲಕ ರಸ್ತೆಯಲ್ಲಿದ್ದ ಗುಂಡಿಯಲ್ಲಿ ಟ್ರಾೃಕ್ಟರ್ ಸಂಚರಿಸುವುದನ್ನು ತಪ್ಪಿಸುವ ವೇಳೆ ಈ ಘಟನೆ ನಡೆದಿದೆ. ಈ ಕುರಿತು ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.