ಆಮಿಷಗಳಿಗೆ ಒಳಗಾಗದೇ ಅಭಿವೃದ್ಧಿಗೆ ಮತ ನೀಡಿ

ಕುಂದಗೋಳ: ಕಾಂಗ್ರೆಸ್​ನವರು ಹಣ- ಹೆಂಡ ಹಾಗೂ ಬಲ ಪ್ರದರ್ಶನದೊಂದಿದೆ ಉಪಚುನಾವಣೆ ಮಾಡಲು ಪಣ ತೊಟ್ಟಿದ್ದಾರೆ. ಸ್ವಾಭಿಮಾನಿಗಳಾದ ಕುಂದಗೋಳ ತಾಲೂಕಿನ ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೇ ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡರ ಅವರನ್ನು ಬಹá-ಮತದಿಂದ ಆಯ್ಕೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದರು.

ಪಟ್ಟಣದ ಶಿವಾನಂದ ಮಠದ ಶಾಲೆ ಆವರಣದಲ್ಲಿ ಭಾನುವಾರ ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡ್ರ ಪರ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ, ಬೃಹತ್ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕಳೆದ ವಿಧಾನಸಭೆ ಚá-ನಾವಣೆಯಲ್ಲಿ ಮೈಮರೆತಂತೆ ಉಪಚá-ನಾವಣೆಯಲ್ಲಿ ಮೈಮರೆಯಬೇಡಿ. ಹಿಂದಿನ ಸಲ ಸ್ವಲ್ಪವೇ ಅಂತರದಿಂದ ಬಿಜೆಪಿ ಸೋತಿದ್ದಕ್ಕೆ ಜನ ಬೇಸರ ಮಾಡಿಕೊಂಡಿದ್ದಾರೆ. ಈ ಸಲ ಹಾಗಾಗಬಾರದು ಎಂದರು.

ಕಾಂಗ್ರೆಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ವರ್ಗಾವಣೆ, ಭ್ರಷ್ಟಾಚಾರದಲ್ಲಿ ಮುಳುಗಿದ್ದು ಅಭಿವೃದ್ಧಿಯನ್ನು ನಿರ್ಲಕ್ಷಿಸಿದೆ ಎಂದು ತೀವ್ರ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ಅಧಿಕಾರದಲ್ಲಿದ್ದಾಗ ಸಾಮಾಜಿಕ ನ್ಯಾಯದಡಿ ಸರ್ವ ಸಮುದಾಯಕ್ಕೂ ಆದ್ಯತೆ ನೀಡಿ ರಾಜ್ಯದ ಪ್ರಗತಿಗೆ ಶ್ರಮಿಸಿದೆ. ರೈತರಿಗಾಗಿಯೇ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ಸರ್ಕಾರ ನಮ್ಮದು ಎಂದರು.

ಜೆಡಿಎಸ್ ಪಕ್ಷದ ಅಪ್ಪ- ಮಕ್ಕಳು ರಾಜ್ಯದ ಜನತೆಗೆ ಮೋಸ ಮಾಡಿದ್ದಾರೆ. ಈ ಹಿಂದೆ ಕುಮಾರಸ್ವಾಮಿಯವರಿಗೆ ಮೊದಲು ಮುಖ್ಯಮಂತ್ರಿಯಾಗಲು ಬೆಂಬಲ ನೀಡಿದ್ದು ಬಿಜೆಪಿ. 20 ತಿಂಗಳು ಮುಖ್ಯ ಮಂತ್ರಿಯಾಗಿ ನಂತರ ವಚನ ಭ್ರಷ್ಟರಾದರು ಎಂದು ಆರೋಪಿಸಿದ ಅವರು, ಬಿಜೆಪಿ ಸರ್ಕಾರ ಇದ್ದಾಗ ಕುಂದಗೋಳ ಕ್ಷೇತ್ರ ಸೇರಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ನೀಡಿದೆ. ಜನರ ಕಷ್ಟಕ್ಕೆ ಸ್ಪಂದಿಸಿದೆ ಎಂದು ನೆನಪಿಸಿದರು.

ಎಸ್.ಐ. ಚಿಕ್ಕನಗೌಡರ- ಎಂ.ಆರ್.ಪಾಟೀಲ ಅವರು ಕ್ಷೇತ್ರದಲ್ಲಿ ಅಣ್ಣ- ತಮ್ಮಂದಿರಂತೆ ಇದ್ದಾರೆ. ಚಿಕ್ಕನಗೌಡರ ಅವರು ಬಹಳ ಕಡಿಮೆ ಅಂತರದಲ್ಲಿ ಕಳೆದ ಸಲ ಸೋತ ಬಗ್ಗೆ ಕ್ಷೇತ್ರದ ಜನರಲ್ಲಿ ಅನುಕಂಪವಿದೆ. ಈ ಸಲ ಅವರನ್ನು ಬಹುಮತದೊಂದಿಗೆ ಗೆಲ್ಲಿಸಬೇಕು. ಎಂ.ಆರ್. ಪಾಟೀಲ ಅವರಿಗೂ ಸೂಕ್ತ ಸ್ಥಾನಮಾನ ನೀಡಲು ಬಿಜೆಪಿ ಬದ್ಧವಾಗಿದೆ ಎಂದು ಭರವಸೆ ನೀಡಿದರು.

ಅಭ್ಯರ್ಥಿ ಎಸ್.ಐ. ಚಿಕ್ಕನಗೌಡ್ರ, ಮುಖಂಡ ಎಂ.ಆರ್. ಪಾಟೀಲ ಮಾತನಾಡಿದರು. ಮಾಜಿ ಸಚಿವ ರೇಣುಕಾಚಾರ್ಯ, ಶಾಸಕರಾದ ಸಿ.ಎಂ. ನಿಂಬಣ್ಣವರ, ಅಭಯ ಪಾಟೀಲ, ಪ್ರದೀಪ ಶೆಟ್ಟರ್, ಕೋಟ ಶ್ರೀನಿವಾಸ ಪೂಜಾರಿ, ಶಂಕರ ಪಾಟೀಲ ಮುನೇನಕೊಪ್ಪ, ಅಮೃತ ದೇಸಾಯಿ, ನೆಹರು ಓಲೇಕಾರ, ಮಹಾಂತೇಶ ಶಾಗೋಟಿ, ಮುಖಂಡರಾದ ಈರಣ್ಣ ಜಡಿ, ಮಹೇಶ ಟೆಂಗಿನಕಾಯಿ, ಮಲ್ಲಿಕಾರ್ಜುನ ಕಿರೇಸೂರ, ರಮೇಶ ಕೊಪ್ಪದ ಮೊದಲಾದವರು ವೇದಿಕೆಯಲ್ಲಿದ್ದರು.

Leave a Reply

Your email address will not be published. Required fields are marked *