More

    ಆಮಿಷಗಳಿಗೆ ಒಳಗಾಗದೆ ಮತದಾನ ಮಾಡಿ ನ್ಯಾಯಾಧೀಶೆ ಭಾನುಮತಿ ಹೇಳಿಕೆ

    ಚಿಕ್ಕಬಳ್ಳಾಪುರ :  ಮತದಾರರು ಪ್ರಜಾಪ್ರಭುತ್ವ ಮೌಲ್ಯಗಳನ್ನು ಉಳಿಸುವ ಪ್ರಾಮಾಣಿಕತೆ, ಬದ್ಧತೆ ಹೊಂದಿರಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಅಮರನಾರಾಯಣ ಸಲಹೆ ನೀಡಿದರು.

    ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಕಮಿಟಿ, ಜಿಲ್ಲಾ ನ್ಯಾಯಾಲಯ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನ ಉದ್ಘಾಟಿಸಿ ಮಾತನಾಡಿದರು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತಮ ಸರ್ಕಾರ ಆಯ್ಕೆ ಮಾಡುವ ಅಧಿಕಾರ ಮತದಾರರಿಗೆ ಇದೆ. ಆದ್ದರಿಂದ ಯಾವುದೇ ಆಮಿಷಗಳಿಗೆ ಬಲಿಯಾಗದೆ ಪ್ರಾಮಾಣಿಕರನ್ನು ಚುನಾವಣೆಯಲ್ಲಿ ಆಯ್ಕೆ ಮಾಡಬೇಕು ಎಂದರು.

    ಪ್ರಜಾಪ್ರಭುತ್ವದಲ್ಲಿ ಉತ್ತಮ ಇಲ್ಲವೇ ಕೆಟ್ಟ ಆಡಳಿತ ವ್ಯವಸ್ಥೆ ರಚನೆಗೆ ಮತದಾರರೇ ನೇರೆ ಹೊಣೆ. ಮೊದಲು ನಿರ್ಲಕ್ಷೃ ತೋರಿ, ಬಳಿಕ ಅನ್ಯರನ್ನು ದೂಷಿಸಿದರೆ ಏನೂ ಲವಿಲ್ಲ. ಜನಪ್ರತಿನಿಧಿ ಆಯ್ಕೆಯ ಒಪ್ಪಿಗೆಗೆ ಯಾವುದೇ ಪ್ರತಿಲಾಪೇಕ್ಷೆಯಿಲ್ಲದೆ ನೀಡುವುದೇ ಮತದಾನ ಎಂದು ನ್ಯಾಯಾಧೀಶೆ ಬಿ.ಸಿ.ಭಾನುಮತಿ ತಿಳಿಸಿದರು.ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕಾಗಿ ಸಂವಿಧಾನ ಪ್ರಜೆಗಳಿಗೆ ಮತದಾನದ ಹಕ್ಕು ನೀಡಿದೆ. ಆದರೆ, ಬಹುತೇಕ ಕಡೆ ಆಮಿಷಗಳಿಗೆ ಬಲಿಯಾಗುತ್ತಿರುವುದು ಕಂಡು ಬರುತ್ತಿದೆ. ಸಮರ್ಥ ಜನಪ್ರತಿನಿಧಿಗಳ ಆಯ್ಕೆಗೆ ಮತದಾರ ಮೊದಲು ಪ್ರಾಮಾಣಿಕನಾಗಿರಬೇಕು ಎಂದು ವಕೀಲರ ಸಂಘದ ಅಧ್ಯಕ್ಷ ಕೆ.ಎಚ್.ತಮ್ಮೇಗೌಡ ಎಚ್ಚರಿಸಿದರು.

    ನ್ಯಾಯಾಧೀಶ ಎಚ್.ದೇವರಾಜ್, ಜಿಲ್ಲಾಧಿಕಾರಿ ಆರ್.ಲತಾ, ಅಪರ ಜಿಲ್ಲಾಧಿಕಾರಿ ಆರತಿ ಆನಂದ್, ಉಪ ವಿಭಾಗಾಧಿಕಾರಿ ಎ.ಎನ್.ರಘುನಂದನ್, ತಹಸೀಲ್ದಾರ್ ಕೆ.ನರಸಿಂಹಮೂರ್ತಿ ಮತ್ತಿತರರು ಇದ್ದರು.
    ಮತದಾರರ ಸಾಕ್ಷರತೆಯಲ್ಲಿ ಪ್ರಥಮ: ಮತದಾರ ಸಾಕ್ಷರತಾ ಜಾಗೃತಿ ಸಂಘದ ಕಾರ್ಯನಿರ್ವಹಣೆಯಲ್ಲಿ ಚಿಕ್ಕಬಳ್ಳಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜು ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ. ಬೆಂಗಳೂರಿನ ಪುಟ್ಟಣ್ಣಚಟ್ಟಿ ಪುರಭವನದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮತದಾರ ದಿನ ಕಾರ್ಯಕ್ರಮದಲ್ಲಿ ರಾಜ್ಯಪಾಲರಿಂದ ಪ್ರಶಸ್ತಿ ಸ್ವೀಕರಿಸುತ್ತಿರುವುದು ಶ್ಲಾಘನೀಯ ಎಂದು ಜಿಪಂ ಸಿಇಒ ಬಿ ೌಜೀಯಾ ತರುನ್ನುಮ್ ಮೆಚ್ಚುಗೆ ವ್ಯಕ್ತಪಡಿಸಿದರು.

    ಬಹುಮಾನ ವಿತರಣೆ :  ಮತದಾರ ಸಾಕ್ಷರತಾ ಸಂಘದಲ್ಲಿ ತಾಲೂಕು ಮಟ್ಟದಲ್ಲಿ ಚಿಕ್ಕಬಳ್ಳಾಪುರದ ಪೆರೇಸಂದ್ರ, ದಿಬ್ಬೂರು, ಆವಲಗುರ್ಕಿ, ಶಿಡ್ಲಘಟ್ಟದ ತುಮ್ಮನಹಳ್ಳಿ, ಬಶೆಟ್ಟಹಳ್ಳಿ, ನಡಿಪಿನಾಯಕನಹಳ್ಳಿ, ಗುಡಿಬಂಡೆಯ ತಿರುಮಣಿ, ಚೆಂಡೂರು, ಹಂಪಸಂದ್ರ, ಗೌರಿಬಿದನೂರಿನ ಗೆದರೆ ಮತ್ತು ಎಚ್.ನಾಗಸಂದ್ರ, ಚಿಂತಾಮಣಿಯ ವೆಂಕಟಗಿರಿಕೋಟೆ, ಚಿನ್ನಸಂದ್ರ ಸರ್ಕಾರಿ ಪ್ರೌಢಶಾಲೆ, ಮಹಾತ್ಮ ಗಾಂಧಿ ಸರ್ಕಾರಿ ಬಾಲಕರ ಪ್ರೌಢಶಾಲೆ, ಬಾಗೇಪಲ್ಲಿಯ ಕಾನಗಮಾಕಲಪಲ್ಲಿ, ಘಂಟವಾರಿಪಲ್ಲಿ ಸರ್ಕಾರಿ ಪ್ರೌಢಶಾಲೆ ಮತ್ತು ಶಾಂತಿನಿಕೇತನ ಪ್ರೌಢಶಾಲೆ, ಪಿಯು ಕಾಲೇಜಿನ ವಿಭಾಗದಲ್ಲಿ ಗೌರಿಬಿದನೂರಿನ ಜ್ಞಾನಮಂದಿರ, ಚಿಂತಾಮಣಿಯ ತಳಗವಾರ ಮತ್ತು ಗುಡಿಬಂಡೆಯ ಸರ್ಕಾರಿ ಕಾಲೇಜ್, ಪ್ರಥಮ ದರ್ಜೆ ಕಾಲೇಜ್ ವಿಭಾಗದಲ್ಲಿ ಗೌರಿಬಿದನೂರು ಮತ್ತು ಚಿಕ್ಕಬಳ್ಳಾಪುರ ಸರ್ಕಾರಿ ಕಾಲೇಜಿಗೆ ಬಹುಮಾನ ನೀಡಲಾಯಿತು. ವಿವಿಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ಮತ್ತು ಯುವ ಮತದಾರರಿಗೆ ಗುರುತಿನ ಚೀಟಿ ವಿತರಿಸಲಾಯಿತು.

    ಗಮನ ಸೆಳೆದ ಅಸ್ತಿತ್ವ ನಾಟಕ :  ಚಿಕ್ಕಬಳ್ಳಾಪುರ ತಾಲೂಕು ನಂದಿಯ ಸರ್ಕಾರಿ ಪ್ರೌಢಶಾಲೆಯಿಂದ ಭಿಕ್ಷುಕರಿಗೂ ಮತದಾನದ ಹಕ್ಕು, ಅರ್ಹರು ಮತದಾರ ಪಟ್ಟಿಗೆ ಹೆಸರು ನೋಂದಣಿ ಬಗ್ಗೆ ಜಾಗೃತಿ ಮೂಡಿಸುವ ಅಸ್ತಿತ್ವ ನಾಟಕ ಪ್ರದರ್ಶನ ಗಮನ ಸೆಳೆಯಿತು. ಉತ್ತಮ ಅಭಿನಯದ ಮೂಲಕ ವಿದ್ಯಾರ್ಥಿಗಳು ಮೆಚ್ಚುಗೆಗೆ ಪಾತ್ರರಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts