ಆಮಿರ್ ಕೈಯಲ್ಲಿ ಸಿಗರೇಟ್!

ಕಳೆದ ಒಂದು ವರ್ಷದಿಂದ ಆಮಿರ್ ಖಾನ್ ಧೂಮಪಾನಕ್ಕೆ ಬ್ರೇಕ್ ಹಾಕಿದ್ದರು. ಆದರೆ ಈಗ ಮತ್ತೆ ಧೂಮಪಾನಿಯಾಗಿದ್ದಾರೆ. ಅದಕ್ಕೆ ಕಾರಣ, ‘ದಂಗಲ್’ ಚಿತ್ರದ ರಿಲೀಸ್ ಟೆನ್ಷನ್! ಹೌದು, ಪ್ರತಿ ಬಾರಿಯೂ ಯಾವುದಾದರೂ ಚಿತ್ರ ರಿಲೀಸ್ಗೆ ಹತ್ತಿರವಾಗುತ್ತಿದ್ದಂತೆಯೇ ಆಮಿರ್ ಆತಂಕಕ್ಕೆ ಒಳಗಾಗುತ್ತಾರಂತೆ. ಅದರಿಂದ ಹೊರಬರಲು ಸಿಗರೇಟ್ ಸಹವಾಸ ಮಾಡುತ್ತಾರಂತೆ. ‘ಧೂಮ್ 3’, ‘ತಲಾಷ್’, ‘ಪಿಕೆ’ ಚಿತ್ರಗಳ ಬಿಡುಗಡೆ ಸಮಯದಲ್ಲಿ ಅವರು ಹೀಗೆಯೇ ಮಾಡಿದ್ದರು ಎಂಬ ಗುಟ್ಟು ಅವರ ಸ್ನೇಹಿತರು ವಲಯದಿಂದ ರಟ್ಟಾಗಿದೆ. ಹಾಗಂತ ಅವರು ರಾಜಾರೋಷವಾಗಿ ಧೂಮಪಾನ ಮಾಡುತ್ತಾರೆ ಎಂದುಕೊಳ್ಳಬೇಡಿ. ಯಾಕೆಂದರೆ ಅದು ಅವರ ಪುತ್ರ ಆಜಾದ್ಗೆ ಹಿಡಿಸುವುದಿಲ್ಲವಂತೆ. ಹಾಗಾಗಿ ಆತನ ಕಣ್ಣು ತಪ್ಪಿಸಿ, ಗುಟ್ಟಾಗಿ ಸಿಗರೇಟ್ ಸೇದುತ್ತಾರಂತೆ ಆಮಿರ್! ಕುಸ್ತಿಪಟು ಮಹಾವೀರ್ ಸಿಂಗ್ ಪೋಗತ್ ಜೀವನಾಧಾರಿತ ‘ದಂಗಲ್’ ಚಿತ್ರ ಡಿ.23ರಂದು ತೆರೆಕಾಣಲಿದೆ.

– ಏಜೆನ್ಸೀಸ್

Leave a Reply

Your email address will not be published. Required fields are marked *