ಆಫ್ಘನ್ ವೇಗಿ ಅಫ್ತಾಬ್​ಗೆ 1 ವರ್ಷ ನಿಷೇಧ

ಲಂಡನ್: ವಿಶ್ವಕಪ್ ಟೂರ್ನಿ ವೇಳೆ ಅಶಿಸ್ತು ತೋರಿದ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದ ವೇಗ ಬೌಲರ್ ಅಫ್ತಾಬ್ ಅಲಮ್ ಅವರನ್ನು ಒಂದು ವರ್ಷಗಳ ಕಾಲ ದೇಶೀಯ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿಷೇಧಿಸಲಾಗಿದೆ. ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಶಿಸ್ತು ಸಮಿತಿ ನೀಡಿದ ವರದಿಯನ್ನು ಕಳೆದ ವಾರ ಕಾಬೂಲ್​ನಲ್ಲಿ ನಡೆದ ಮಂಡಳಿಯ ವಾರ್ಷಿಕ ಮಹಾಸಭೆ ವೇಳೆ ಅಂಗೀಕರಿಸಲಾಯಿತು. ಅಫ್ತಾಬ್ ಅಲಮ್ ಅವರನ್ನು ಜೂನ್ 27ರಂದು ವಿಶ್ವಕಪ್ ಟೂರ್ನಿ ಮಧ್ಯದಲ್ಲಿಯೇ ತವರಿಗೆ ಕಳುಹಿಸಲಾಗಿತ್ತು.

ಸೌಥಾಂಪ್ಟನ್​ನಲ್ಲಿ ಆಫ್ಘನ್ ತಂಡ ಉಳಿದುಕೊಂಡಿದ್ದ ಹೋಟೆಲ್​ನಲ್ಲಿ ಮಹಿಳಾ ಅತಿಥಿ ಬಳಿ ಅಸಭ್ಯವಾಗಿ ವರ್ತಿಸಿದ್ದ ಆರೋಪ ಅಫ್ತಾಬ್ ಅಲಮ್ ಮೇಲಿತ್ತು. ಜೂನ್ 11 ರಂದು ಭಾರತದ ಎದುರು ಅಫ್ತಾಬ್ ಕಡೇ ವಿಶ್ವಕಪ್ ಪಂದ್ಯವಾಡಿದ್ದರು. ಬಳಿಕ ಅವರನ್ನು 2 ಪಂದ್ಯಗಳ ಮಟ್ಟಿಗೆ ಅಮಾನತುಗೊಳಿಸಲಾಗಿತ್ತು. ಈ ಕುರಿತು ಜೂನ್ 23ರಂದು ಅಫ್ತಾಬ್ ಅವರನ್ನು ಐಸಿಸಿ ಭ್ರಷ್ಟಾಚಾರ ನಿಗ್ರಹ ದಳ ವಿಚಾರಣೆ ನಡೆಸಿತ್ತು. ವಿಶ್ವಕಪ್​ನಲ್ಲಿ ಆಫ್ಘನ್ ಪರ ಆಡಿದ 3 ಪಂದ್ಯಗಳಿಂದ 4 ವಿಕೆಟ್ ಕಬಳಿಸಿದ್ದರು.

Leave a Reply

Your email address will not be published. Required fields are marked *