ಹೊಸಪೇಟೆ: ಆಪರೇಷನ್ ಸಿಂದೂರ ಹೆಸರಿನಲ್ಲಿ ಕಾರ್ಯಚರಣೆ ನಡೆಸಿ, ಪಾಕಿಸ್ಥಾನದಲ್ಲಿರುವ ಉಗ್ರರ ನೆಲೆಗಳನ್ನು ಭಾರತೀಯ ಸೈನಿಕರು ಧ್ವಂಸ ಮಾಡಿದ ಕಾರ್ಯ ದೈವ ಕಾರ್ಯವಾಗಿದೆ ಎಂದು ಬಿಜೆಪಿ ಯುವಮೋರ್ಚಾ ಜಿಲ್ಲಾ ಆಧ್ಯಕ್ಷ ಕಿಚಿಡಿ ಕೊಟ್ರೇಶ ಹೇಳಿದರು,

ಆಪರೇಷನ್ ಸಿಂದೂರಕ್ಕೆ ಬೆಂಬಲಿಸಿ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರಿಂದ ನಗರದ ವಡಕರಾಯ ದೇಗುಲದಲ್ಲಿ ಬುಧವಾರ ನಡೆದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಳೆದ ಏ.22 ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಧರ್ಮ-ಜಾತಿಯನ್ನು ಕೇಳಿ 26 ಜನರನ್ನು ಉಗ್ರರು ಹತ್ಯೆ ಮಾಡಿರುವ ಘಟನೆ ಇಡೀ ಭಾರತೀಯರನ್ನು ತಲ್ಲಣಗೊಳಿಸಿದೆ. ಈ ಕೃತ್ಯ ನಡೆಸಿದ ಉಗ್ರರು ಎಲ್ಲಿ ಅಡಗಿ ಕುಳಿತಿರಲಿ, ಅವರನ್ನು ಸದೆ ಬಡೆಯುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಜ್ಞೆ ಮಾಡಿದ್ದರು. ಇದಕ್ಕೆ ಉತ್ತರ ಸಿಕ್ಕಿದ್ದು, 140 ಕೋಟಿ ಭಾರತೀಯರು ಹೆಮ್ಮೆ ಪಡುವಂತಾಗಿದೆ. ತಮ್ಮ ಪ್ರಾಣವನ್ನು ಲೆಕ್ಕಿಸದೇ, ನಮ್ಮ ಸೈನಿಕರು ಉಗ್ರರನ್ನು ಸದೆ ಬಡೆದಿದ್ದಾರೆ. ಈ ಘಟನೆಯಲ್ಲಿ ನಮ್ಮ ಸಹೋದರಿಯರು ತಮ್ಮ ಹಣೆಯ ಸಿಂಧೂರು ಹಳಸಿಕೊಂಡಿದ್ದಾರೆ. ಪಾಕಿಸ್ಥಾನದ ಉಗ್ರರ ಹಡುಗ ತಾಣಗಳ ಮೇಲೆ ನಡೆಸಲಾದ ಆಪರೇಶನ್ ಸಿಂದೂರ್‌ನಲ್ಲಿ ಉಗ್ರರನ್ನು ಧ್ವಂಶ ಮಾಡುವಲ್ಲಿ ಮಹಿಳಾ ಯುದ್ಧ ವಿಮಾನಗಳ ಪೈಲಟ್‌ಗಳ ತೋರಿದ ಸಾಹಸವನ್ನು ಭಾರತೀಯರು ಯಾರೂ ಮರೆಯುವಂತಿಲ್ಲ. ಭಾರತೀಯ ವಾಯುಸೇನೆ, ಭೂಸೇನೆ ಹಾಗೂ ನೌಕಸೇನೆಗೆ ಭಗವಂತ ಇನ್ನಷ್ಟು ಶಕ್ತಿ ಕರುಣಿಸಲಿ ಎಂದರು.
ಮೋರ್ಚಾದ ಉಪಾಧ್ಯಕ್ಷ ಸೂರಿ ಬಂಗಾರು, ಕಾರ್ಯದರ್ಶಿ ವ್ಯಾಸರಾಜ, ಮಂಡಲ ಯುವ ಮೋರ್ಚಾ ಅಧ್ಯಕ್ಷ ಎಚ್.ರಾಘವೇಂದ್ರ, ಪ್ರಮುಖರಾದ ಶಶಿಕುಮಾರ್, ವಿಷ್ಣು, ಮುರುಳಿ, ಹನುಮೇಶ್, ಅವಿನಾಶ್, ಬಸವ, ಅಭಿ, ಸತೀಶ್ ಇತರರಿದ್ದರು.