ಆನ್​ಲೈನ್ ವೇಶ್ಯಾವಾಟಿಕೆಯಲ್ಲಿ ತೊಡಗಿದ 7 ಮಂದಿ ಪೊಲೀಸರ ಬಲೆಗೆ: ಅಕ್ರಮ ದಂಧೆಗೆ ಬಾಡಿಗೆ ನೀಡಿದ ಮನೆ ಮಾಲೀಕನೂ ಜೈಲಿಗೆ

ಬೆಂಗಳೂರು: ಆನ್​ಲೈನ್​ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲದ ಸುಳಿವು ಪಡೆದ ಕಗ್ಗಲಿಪುರ ಠಾಣೆ ಪೊಲೀಸರು ಗಿರಾಕಿಗಳ ಸೋಗಿನಲ್ಲಿ ತೆರಳಿ ಮನೆ ಮಾಲೀಕ ಸೇರಿ ಏಳು ಮಂದಿಯನ್ನು ಬಂಧಿಸಿದ್ದಾರೆ.

ಬನಶಂಕರಿಯ ಸುಭಾಷ್, ನಾಗರಬಾವಿಯ ನರಸಿಂಹಮೂರ್ತಿ, ಪಶ್ಚಿಮ ಬಂಗಾಳದ ತಾನಿಯಾ ಇಸ್ಲಾಂ ಬಂಧಿತರು. ದಂಧೆಗೆ ಮನೆ ಬಾಡಿಗೆ ನೀಡಿದ ಮಾಲೀಕ ರಾಮನಗರದ ಚಿನ್ನಪ್ಪ ಎಂಬಾತನ ವಿರುದ್ಧವೂ ಕೇಸ್ ದಾಖಲಿಸಿ ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಲೋಕೆಂಟೊ ಆಪ್​ನಲ್ಲಿ ವಿಳಾಸ, ಹುಡುಗಿಯರ ಫೋಟೋ, ಮೊಬೈಲ್ ನಂಬರ್ ಹಾಕಿ ಗಿರಾಕಿಗಳಿಗೆ ಆಹ್ವಾನ ನೀಡುತ್ತಿದ್ದರು. ಖಚಿತ ಮಾಹಿತಿ ಪಡೆದ ರಾಮನಗರ ಎಸ್​ಪಿ ಡಾ. ಅನೂಪ್ ಎ. ಶೆಟ್ಟಿ ಅಕ್ರಮ ದಂಧೆ ಪತ್ತೆಹಚ್ಚಲು ಡಿವೈಎಸ್​ಪಿ ಪುರುಷೋತ್ತಮ್ೆ ಸೂಚನೆ ನೀಡಿದ್ದರು. ಇವರ ಮಾರ್ಗ ದರ್ಶನದಲ್ಲಿ ಇನ್​ಸ್ಪೆಕ್ಟರ್ ಪ್ರಕಾಶ್, ಪಿಎಸ್​ಐ ಗೋವಿಂದ್ ನೇತೃತ್ವದ ತಂಡ ಆರೋಪಿಗಳ ಪತ್ತೆಗೆ ಬಲೆಬೀಸಿತ್ತು.

ಫೋನ್ ಮಾಡಿದರು: ಲೋಕೆಂಟೊ ಆಪ್​ನಲ್ಲಿ ಕನಕಪುರ ರಸ್ತೆ ಎಂದು ಟೈಪ್ ಮಾಡಿದಾಗ ಮೊಬೈಲ್ ನಂಬರ್ ಬಂದಿದೆ. ಕರೆ ಮಾಡಿದಾಗ ರಾಜು ಎಂಬಾತ ಸ್ವೀಕರಿಸಿ ನಾಗರಾಜು ನಂಬರ್ ನೀಡಿದ್ದಾನೆ. ಆ ನಂಬರ್​ಗೆ ಕರೆ ಮಾಡಿದಾಗ ನಿಮ್ಮ ಮೊಬೈಲ್​ಗೆ ಕರೆ ಮಾಡುವುದಾಗಿ ಕರೆ ಕಟ್ ಮಾಡಿದ್ದರು.

ಸ್ವಲ್ಪ ಸಮಯದ ಬಳಿಕ ಮಫ್ತಿ ಪೊಲೀಸರಿಗೆ ಕರೆ ಮಾಡಿದ ಆರೋಪಿ, ತಾತಗುಣಿ ಬಳಿಯ ಖಾಸಗಿ ಕಾಲೇಜು ಬಳಿಗೆ ಬರುವಂತೆ ಹೇಳಿದ್ದರು. ಮಫ್ತಿ ಪೊಲೀಸರು ಅಲ್ಲಿಗೆ ಹೋದಾಗ ಕೈ ಸನ್ನೆ ಮಾಡಿ ನಾಗರಾಜು ಎಂಬಾತ ಕರೆದಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆತ ಅರಸಪ್ಪ ಲೇಔಟ್​ಗೆ ಕರೆದೊಯ್ದು ಮನೆ ತೋರಿಸಿದ್ದು, ಅಲಿದ್ದ ಉಳಿದ ಆರೋಪಿಗಳನ್ನು ಬಂಧಿಸಿ ಸಂತ್ರಸ್ತೆಯನ್ನು ರಕ್ಷಣೆ ಮಾಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕಗ್ಗಲಿಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಡಿಗೆ ನೀಡಿದ ಮನೆ ಮಾಲೀಕರ ವಿರುದ್ಧ ಕ್ರಮ

ಬೆಂಗಳೂರಿನಲ್ಲಿ ಕುಳಿತು ಆನ್​ಲೈನ್​ನಲ್ಲಿ ಗಿರಾಕಿಗಳನ್ನು ಸಂಪರ್ಕ ಮಾಡಿ ನಗರ ಹೊರ ವಲಯದಲ್ಲಿ ಮನೆಗಳ ಆಶ್ರಯ ನೀಡುತ್ತಿದ್ದಾರೆ. ಇದರಿಂದ ಹಳ್ಳಿಯ ಪರಿಸರಕ್ಕೂ ಧಕ್ಕೆ ಆಗುತ್ತಿತ್ತು. ಕೆಲವರು ಅಕ್ರಮ ಚಟುವಟಿಕೆಗಳಿಗೆ ಮನೆ ಬಾಡಿಗೆ ಕೊಡುತ್ತಿರುವ ವಿಚಾರ ಬೆಳಕಿಗೆ ಬಂದಿದ್ದು, ಕಟ್ಟಡ ಮಾಲೀಕರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *