ಆಧ್ಯಾತ್ಮಿಕ ಸಾಧಕರಿಗೂ ಮನ್ನಣೆ ಸಿಗಲಿ

ಶಿರಸಿ: ನಮ್ಮ ಇತಿಹಾಸದಲ್ಲಿ ರಾಜರಿಗೆ ನೀಡಿದ ಮನ್ನಣೆಯನ್ನ ಆಧ್ಯಾತ್ಮಿಕ ಸಾಧಕರು, ಪ್ರಾಚೀನ ವಿಜ್ಞಾನಿಗಳು ಮತ್ತು ಕಲಾವಿದರಿಗೂ ನೀಡಬೇಕು ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಆಶಿಸಿದರು.

ತಾಲೂಕಿನ ಸ್ವರ್ಣವಲ್ಲಿಯಲ್ಲಿ ಜಾಗೃತ ವೇದಿಕೆ ಸೋಂದಾ ಹಾಗೂ ವಿವಿಧ ಸಂಘ ಸಂಸ್ಥೆಗಳು ಹಮ್ಮಿಕೊಂಡಿದ್ದ ಎರಡು ದಿನಗಳ ರಾಜ್ಯ ಮಟ್ಟದ ಇತಿಹಾಸ ಸಮೆ್ಮೕಳನ ಮತ್ತು ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನ ಮತ್ತು ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ನಮ್ಮ ಇತಿಹಾಸದಲ್ಲಿ ನಿರ್ವಣವಾದ ಹಲವು ಸಾರ್ಮಜ್ಯಗಳಿಗೆ ಅಧ್ಯಾತ್ಮ ಸಾಧಕರು ಪ್ರೇರಣೆಯಾಗಿದ್ದಾರೆ. ಅವರು ತಪಸ್ಸುಗಳ ಮೂಲಕ ಹಲವು ಜ್ಞಾನವನ್ನು ಲೋಕಕ್ಕೆ ನೀಡಿದ್ದಾರೆ. ಅವರ ಸ್ಮರಣೆ ಆಗಬೇಕು. ತಮ್ಮ ಪುರಾತನ ವಿಜ್ಞಾನಿಗಳು ತಮ್ಮದೇ ಆದ ಕೊಡುಗೆಯನ್ನ ವಿಶ್ವಕ್ಕೆ ನೀಡಿದ್ದಾರೆ. ಕಲಾವಿದರೂ ಇತಿಹಾಸ ನಿರ್ವಣದಲ್ಲಿ ಪ್ರಮುಖ ಕಾರಣಿಕರ್ತರು ಎಂದರು.

ಸ್ವಾದಿ ಜೈನ ಮಠದ ಶ್ರೀ ಭಟ್ಟಾಕಳಂಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಮತನಾಡಿ, ಕರ್ನಾಟಕ ಶಬ್ದಾನುಶಾನ ರಚನೆ ಮಾಡಿದ ಕೀರ್ತಿ ಮಠಕ್ಕೆ ಸಲ್ಲುತ್ತದೆ. ಧರ್ಮದ ಜತೆ ಜತೆಗೆ ಇತಿಹಾಸ ಬೆಳೆಯುತ್ತ ಬಂದಿದೆ. ಸಣ್ಣ ಸಂಗತಿಗಳೂ ಇತಿಹಾಸದಲ್ಲಿ ದಾಖಲಾಗಬಹುದು. ನಿಮ್ಮ ಸಾಧನೆಗಳನ್ನೂ ದಾಖಲಿಸಿ ಮುಂದಿನವರಿಗೆ ಇದು ಮಹತ್ವದ ದಾಖಲೆ ಆಗಲಿದೆ ಎಂದರು.

ಸಮ್ಮೇಳನದ ಸಂಯೋಜಕ ಲಕ್ಷ್ಮೀಶ ಹೆಗಡೆ ಸೋಂದಾ ಮಾತನಾಡಿ, ಸೋದೆ ಸದಾಶಿವ ರಾಯ ಬ್ರಿಟಿಷರನ್ನ ಸೋಲಿಸಿದ್ದ, ಟಿಪ್ಪುವನ್ನೂ ಆತ ಹಿಮ್ಮೆಟ್ಟಿಸಿದ್ದ. ಅಂಥವರ ಹೆಸರಲ್ಲಿ ಪ್ರಶಸ್ತಿ ನೀಡುತ್ತಿರುವುದು ಸಂತೋಷದ ಸಂಗತಿ. ಸಮೆ್ಮೕಳನದಲ್ಲಿ 23 ಜಿಲ್ಲೆಯ ಇತಿಹಾಸ ತಜ್ಣರು ಉಪನ್ಯಾಸ ನೀಡಿದ್ದಾರೆ. ರಾಜಕೀಯ ಇತಿಹಾಸ ಚರ್ಚೆ ಮಾತ್ರ ನಡೆಸದೆ, ವಿಜ್ಞಾನ, ಕೃಷಿಯ ಕೊಡುಗೆಗಳನ್ನ ಮುಂದಿನ ದಿನಗಳಲ್ಲಿ ರ್ಚಚಿಸೋಣ. ಇತಿಹಾಸ ಸಮೆ್ಮೕಳನ ಜನಸಾಮಾನ್ಯರಲ್ಲಿ ಸಣ್ಣ ಸ್ಮಾರಕವನ್ನೂ ರಕ್ಷಿಸುವ ಚಿಂತನೆ ಹುಟ್ಟಿಸಿದರೆ ಸಾಕು. ಅದು ನಮ್ಮ ಫಲಶೃತಿ ಎಂದೇ ಭಾವಿಸುತ್ತೇವೆ ಎಂದು ಹೇಳಿದರು.

ಸಮ್ಮೇಳನದಲ್ಲಿ ಸದಾಶಿವರಾಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಚಿತ್ರದುರ್ಗದ ಸಾಹಿತಿ ಪೊ›. ಲಕ್ಷ್ಮಣ ತೆಲಗಾವಿ, ‘ನಮ್ಮ ಇತಿಹಾಸ ಅಧ್ಯಯನಕ್ಕೆ ವಿಭಿನ್ನ ವೈಚಾರಿಕ ದೃಷ್ಟಿಕೋನ ಅವಶ್ಯಕತೆ ಇದೆ. ಕರ್ನಾಟಕದ ಸಂಸ್ಕೃತಿಗೆ ಸಾಮಂತರ ಕೊಡುಗೆ ಅಪಾರವಾಗಿದೆ ಎಂದರು.

ವೇದಿಕೆಯಲ್ಲಿ ಸಮೆ್ಮೕಳನದ ಸರ್ವಾದ್ಯಕ್ಷ ಪೊ›.ಎಚ್.ಎಸ್. ಗೋಪಾಲರಾವ್, ವಿಜಯ ನಗರ ಸಾಮ್ರಾಜ್ಯದ ಕೃಷ್ಣದೇವರಾಯರ ವಂಶಸ್ತ ರಾಜಾ ಕೃಷ್ಣದೇವರಾಯರು, ಪ್ರಾಚ್ಯವಸ್ತು ಇಲಾಖೆ ನಿದೆಶಕ ಆರ್.ಗೋಪಾಲ್, ಹಂಪಿ ಕನ್ನಡ ವಿ.ವಿ. ಸಾಹಿತ್ಯ ವಿಭಾಗದ ಮುಖ್ಯಸ್ತ ವೆಂಕಟಗಿರಿ ದಳವಾಯಿ, ಸಮಾಜ ಶಾಸ್ತ್ರ ತಜ್ಞ ಅಮರೇಶ ಯತಗಲ್, ಐಸಿಎಎಚ್​ರ್ ಪ್ರಾದೇಶಿಕ ಎಸ್.ಕೆ. ಅರುಣಿ, ಚಿಂತಕ ದಿವಾಕರ ಹೆಗಡೆ ಕೆರೆಹೊಂಡಾ ಇತರರು ಇದ್ದರು.

ಟಿಪ್ಪು ಸುಲ್ತಾನ ಮಠಗಳ ಬಗ್ಗೆ ವಿಶೇಷ ಗೌರವ ಹೊಂದಿದ್ದ ಎನ್ನುವುದಕ್ಕೆ ಆತ ಮಠ ಹಾಗೂ ಗುರುಗಳ ಆಶೀರ್ವಾದವೇ ನಮ್ಮ ಗೆಲುವಿಗೆ ಕಾರಣ ಎಂದು ಉಲ್ಲೇಖಿಸಿದ ಸಾಲುಗಳೇ ಸಾಕ್ಷಿ. ಆತ ಶ್ರೀಮಠಕ್ಕೂ ಗೌರವ ಪೂರ್ವಕವಾಗಿ ನಡೆದುಕೊಂಡಿದ್ದ.

ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ

Leave a Reply

Your email address will not be published. Required fields are marked *