ಆಧಾರ್ ಕಾರ್ಡಗಾಗಿ ಪರದಾಟ

ಚಿಂಚೋಳಿ: ಪ್ರಸ್ತುತ ದಿನಗಳಲ್ಲಿ ಸರ್ಕಾರದ ಪ್ರತಿಯೊಂದು ಕಾರ್ಯಕ್ಕೂ ಆಧಾರ್ ಕಾರ್ಡ ಅಗತ್ಯವಾಗಿದೆ. ಆದರೆ ಗ್ರಾಮೀಣ ಸೇರಿ ತಾಲೂಕು ಮಟ್ಟದಲ್ಲಿ ಆಧಾರ್ ನೋಂದಣಿ ಕೇಂದ್ರ ಇಲ್ಲದಿರುವುದು ಸಾಕಷ್ಟು ಸಮಸ್ಯೆಗೆ ಕಾರಣವಾಗಿದೆ.
ಹೌದು. ಚಿಂಚೋಳಿ ತಾಲೂಕಿನಲ್ಲಿ ಕೇವಲ ಒಂದು ನೋಂದಣಿ ಕೇಂದ್ರವಿದ್ದು, ಜನರು ಆಧಾರ್ ಪಡೆಯಲು ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಹಿಂದೆ ಸರ್ಕಾರ ಖಾಸಗಿ ಕಂಪ್ಯೂಟರ್ ಕೇಂದ್ರಗಳಿಗೆ ಆಧಾರ್ ನೋಂದಣಿ ಮಾಡಲು ಪರವಾನಿಗೆ ನೀಡಿತ್ತು. ಆದರೆ ಇದೀಗ ಪರವಾನಿಗೆ ರದ್ದುಗೊಳಿಸಿದ್ದು, ಸರ್ಕಾರದಿಂದಲೇ ಕೇಂದ್ರ ಆರಂಭಿಸಿದೆ. ಸರ್ಕಾರಿ ಕೇಂದ್ರಗಳಲ್ಲಿ ನಿತ್ಯವೂ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಿದ್ದು, ಜನತೆ ಆಧಾರ್ ಪಡೆಯದೆ ವಾಪಾಸ್ ಆಗುತ್ತಿದ್ದಾರೆ.
ಸದ್ಯ ಚಿಂಚೋಳಿ, ಐನಾಪುರದಲ್ಲಿ ಎರಡು ಕೇಂದ್ರಗಳಿದ್ದು, ನಿತ್ಯವೂ ಸಾಕಷ್ಟು ಜನರ ನೋಂದಣಿಗಾಗಿ ಬರುತ್ತಿದ್ದಾರೆ. ಎಷ್ಟೆ ಜನ ಸರದಿಯಲ್ಲಿ ನಿಂತರೂ ಕೇವಲ 10-12 ಜನಕ್ಕೆ ಮಾತ್ರ ಆಧಾರ್ ಭಾಗ್ಯ ಸಿಗುತ್ತಿದೆ. ಇನ್ನುಳಿದರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಾಸ್ ಆಗುತ್ತಿದ್ದಾರೆ. ಈ ಬಗ್ಗೆ ಸಂಬಂಧಿತರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಜನತೆ ದೂರುತ್ತಿದ್ದಾರೆ. ಈಗಲಾದರೂ ತಾಲೂಕು ಆಡಳಿತ, ಜನಪ್ರತಿನಿಧಿಗಳು ಗಮನಹರಿಸಿ ಆಧಾರ್ ನೋಂದಣಿ ಕೇಂದ್ರಗಳನ್ನು ಆರಂಭಿಸಿ, ಜನತೆಗೆ ಅನುಕೂಲ ಮಾಡಿಕೊಡಬೇಕಿದೆ ಎಂಬುದು ಎಲ್ಲರ ಒಕ್ಕೊರಲ ಒತ್ತಾಯವಾಗಿದೆ.

ಇಂದು ಪ್ರತಿಯೊಬ್ಬರಿಗೂ ಆಧಾರ್ ಅತ್ಯವಶ್ಯಕವಾಗಿದೆ. ಆದರೆ ಚಿಂಚೋಳಿಯಲ್ಲಿ ಮಾತ್ರ ಆಧಾರ್ ಪಡೆಯುವುದಕ್ಕಾಗಿ ಸರಿಯಾದ ವ್ಯವಸ್ಥೆಯಿಲ್ಲ. ಸಂಬಂಧಿತರು ಗಮನಹರಿಸಿ ತಾಲೂಕಿನಲ್ಲಿ ಹೆಚ್ಚೆಚ್ಚು ಆಧಾರ್ ನೋಂದಣಿ ಕೇಂದ್ರಗಳನ್ನು ಆರಂಭಿಸುವ ಮೂಲಕ ಜನತೆಗೆ ಅನುಕೂಲ ಕಲ್ಪಿಸಬೇಕು.| ಅಮರ ಲೊಡ್ಡನೂರ್, ಚಿಂಚೋಳಿ


ಐನಾಪುರದಲ್ಲಿ ತಹಸಿಲ್ ಕಚೇರಿಯಿಂದ ನೋಂದಣಿ ಕೇಂದ್ರ ಆರಂಭಿಸಲಾಗಿದೆ. ಇನ್ನು ಚಿಂಚೋಳಿ ತಹಸಿಲ್ ಕಚೇರಿಯಲ್ಲಿದ್ದ ಕೇಂದ್ರದ ಅವಧಿ ಡಿ.30ಕ್ಕೆ ಮುಗಿದಿದೆ. ಇದನ್ನು ಮತ್ತೇ ಆರಂಭಿಸಲು ಉನ್ನತ ಅಧಿಕಾರಿಗಳಿಗೆ ವರದಿ ಕಳಿಸಲಾಗಿದ್ದು, ಆದೇಶ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು.
| ಅರುಣಕುಮಾರ ಕುಲಕಣರ್ಿ, ತಹಸೀಲ್ದಾರ್, ಚಿಂಚೋಳಿ

Share This Article

ತೂಕ ಇಳಿಸಿಕೊಳ್ಳಬೇಕಾ? ಸುಮ್ಮನೆ ಈ ಹಣ್ಣು, ಸೊಪ್ಪಿನ ವಾಸನೆಯನ್ನು ಒಮ್ಮೆ ಉಸಿರಾಡಿದ್ರೆ ಸಾಕು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…

ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿದು ನೋಡಿ; ಆರೋಗ್ಯ ಸಮಸ್ಯೆಗೆ ಸಿಗುತ್ತೆ ಪರಿಹಾರ …

 ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…