More

    ಆದರ್ಶ ಪುರುಷರ ಪುತ್ಥಳಿಗಳೇ ಸಂದೇಶ

    ಕಡೂರು: ಆದರ್ಶ ಪುರುಷರ ಪುತ್ಥಳಿಗಳ ಸ್ಥಾಪನೆಯಿಂದ ಅವರ ತತ್ವಾದರ್ಶಗಳು ಮುಂದಿನ ಪೀಳಿಗೆಗೂ ಉಳಿಸುವ ಕಾರ್ಯವಾಗಲಿದೆ ಎಂದು ಶಾಸಕ ಬೆಳ್ಳಿಪ್ರಕಾಶ್ ಅಭಿಪ್ರಾಯಪಟ್ಟರು. ಪಟ್ಟಣದ ಎನ್.ಎಚ್.ರಸ್ತೆಯ ಉಳುಕಿನಕಲ್ಲು ಬಳಿ ಭಾನುವಾರ ಭಗೀರಥ ವೃತ್ತದ ಫಲಕ ಅನಾವರಣಗೊಳಿಸಿ ಮಾತನಾಡಿದ ಅವರು, ಕನಕದಾಸರು, ಬಸವಣ್ಣ, ಕೆಂಪೇಗೌಡರು, ಸಂಗೊಳ್ಳಿರಾಯಣ್ಣ, ಭಗೀರಥ, ಅಂಬೇಡ್ಕರ್ ಹಿಗೇ ಹಲವು ಗಣ್ಯರ ಸಮಾನತೆಯ ಬದುಕಿನ ಸಂದೇಶ ಸಾರಲು ಪುತ್ಥಳಿಗಳ ನಿರ್ಮಾಣ ಅಗತ್ಯ. ಇದರಿಂದ ಉತ್ತಮ ಸಂದೇಶ ನೀಡಲು ಸಾಧ್ಯ. ಎಲ್ಲರೂ ಸೇರಿ ಸೌಹಾರ್ದತೆ ಸಮಾಜ ಸ್ಥಾಪಿಸುವ ಮೂಲಕ ಉತ್ತಮ ಕಾರ್ಯಗಳಿಗೆ ಪ್ರತಿಯೊಬ್ಬರು ಸಹಕರಿಸಬೇಕಿದೆ ಎಂದರು.

    ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರರ ಪುತ್ಥಳಿಯನ್ನು ಸೆಪ್ಟೆಂಬರ್​ನಲ್ಲಿ ಅನಾವರಣಗೊಳಿಸಲು ಸಿದ್ಧತೆ ನಡೆಸಲಾಗಿದೆ. ಕೆಂಪೇಗೌಡರ ಪುತ್ಥಳಿ ಪ್ರತಿಷ್ಠಾಪನೆಗೆ ಕೆ.ಎಂ.ರಸ್ತೆಯಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿರುವ ಸಂಗೊಳ್ಳಿರಾಯಣ್ಣ ಪ್ರತಿಮೆಯನ್ನು ಇರುವ ಪ್ರದೇಶದಲ್ಲಿಯೇ ಉಳಿಸಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗಿದೆ ಎಂದರು.

    ಗಂಗೆಯನ್ನು ಧರೆಗಿಳಿಸಿದ ಮಹಾನ್ ಪುರುಷ ಭಗೀರಥರ ಪುತ್ಥಳಿ ಅನಾವರಣಗೊಳಿಸಬೇಕೆಂಬ ಮಹಾದಾಸೆಗೆ ಭಗೀರಥ ಪ್ರಯತ್ನ ನಡೆಸಿದ್ದರೂ ಕಾಲಕೂಡಿ ಬಂದಿರಲ್ಲಿಲ್ಲ. ಸದ್ಯ ಪ್ರಯತ್ನ ಕೂಡಿರುವುದು ಸಂತಸ ತಂದಿದೆ. ಪುತ್ಥಳಿ ನಿರ್ವಣಕ್ಕೆ ಶಾಸಕ ಬೆಳ್ಳಿ ಪ್ರಕಾಶ್ ಸಹಕಾರ ಪ್ರಮುಖವಾದದ್ದು. ಪಕ್ಷಾತೀತವಾಗಿ ಎಲ್ಲ ಸಮಾಜಗಳ ಮುಖಂಡರು ಸಹಕರಿಸಬೇಕು. ಜನವರಿಯಲ್ಲಿ ಪುತ್ಥಳಿ ಅನಾವರಣಗೊಳಿಸಲಾಗುವುದು. ಪುತ್ಥಳಿ ನಿರ್ವಣಕ್ಕೆ ಕೆಪಿಸಿಸಿ ಸದಸ್ಯ ಕೆ.ಎಸ್.ಆನಂದ್ 3 ಲಕ್ಷ ರೂಪಾಯಿ ವೈಯಕ್ತಿಕವಾಗಿ ನೀಡಿದ್ದಾರೆ. ಅವರನ್ನು ಸಮಾಜದಿಂದ ಅಭಿನಂದಿಸಲಾಗುವುದು ಎಂದು ಉಪ್ಪಾರ ಸಮಾಜದ ತಾಲೂಕು ಅಧ್ಯಕ್ಷ ಎನ್.ಕೆ.ಲೋಕೇಶ್ ಬಾಬು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts