ಆತಂಕದಲ್ಲಿ ಬೈಕ್ ಸವಾರರ ಸಂಚಾರ

ಹುಬ್ಬಳ್ಳಿ: ಇಲ್ಲಿನ ಚನ್ನಮ್ಮ ವೃತ್ತ ಬಳಿಯ ಮಿರ್ಜಾನಕರ ಪೆಟ್ರೋಲ್ ಬಂಕ್​ನಿಂದ ಗಬ್ಬೂರ ಕ್ರಾಸ್​ವರೆಗಿನ ರಸ್ತೆ ಅಭಿವೃದ್ಧಿ ಮಾಡಿದ್ದರೂ, ರಸ್ತೆ ಮಧ್ಯೆ ಮತ್ತು ಬದಿಯಲ್ಲಿ ಬಿಟ್ಟಿರುವ ಅಂತರದಿಂದಾಗಿ ಬೈಕ್ ಸವಾರರು ಆತಂಕದಲ್ಲಿ ಸಂಚರಿಸುವಂತ ಸ್ಥಿತಿ ನಿರ್ವಣವಾಗಿದೆ.

ಈ ಮಧ್ಯೆ ಆಟೋ, ಟೆಂಪೋ ಮತ್ತಿತರ ವಾಹನಗಳನ್ನು ರಸ್ತೆ ಬದಿ ನಿಲ್ಲಿಸುತ್ತಿರುವುದರಿಂದ ಈ ಮಾರ್ಗ ಮತ್ತಷ್ಟು ಇಕ್ಕಟ್ಟಾಗಿದೆ. ನಿತ್ಯ ಹತ್ತಾರು ಬೈಕ್ ಸವಾರರು ರಸ್ತೆ ಮಧ್ಯದ ಅಂತರದಲ್ಲಿ ಚಲಿಸುತ್ತಿರುವಾಗ ಅಥವಾ ಅಂತರದ ಮಧ್ಯದಿಂದ ದಾಟುತ್ತಿರುವಾಗ ಜಾರಿ ಬಿದ್ದು, ಆಸ್ಪತ್ರೆ ಸೇರಿದ್ದಾರೆ.

ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಿರ್ಲಕ್ಷತನ ದಿಂದಾಗಿ ಬೈಕ್ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವಂತಾಗಿದೆ. ಕಾಮಗಾರಿ ಪೂರ್ಣಗೊಳ್ಳುವ ಮುಂಚೆಯೇ ಅಧಿಕಾರಿಗಳು ಈ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿರುವುದು ಈ ಸಮಸ್ಯೆಗೆ ಪ್ರಮುಖ ಕಾರಣ. ಇನ್ನಾದರೂ ಲೋಕೋಪಯೋಗಿ ಅಧಿಕಾರಿಗಳು ರಸ್ತೆ ಮಧ್ಯದ ಅಂತರ ಸರಿಪಡಿಸಿ, ಸುಗಮ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂಬುದು ಸಾರ್ವಜನಿಕರ ಒತ್ತಾಸೆ.

Leave a Reply

Your email address will not be published. Required fields are marked *