ಆಡಳಿತ ನಡೆಸಲು ಆಗದಿದ್ದರೆ ರಾಜೀನಾಮೆ ಕೊಡಲಿ

blank

ಚಿತ್ರದುರ್ಗ: ಮೈಸೂರು ಉದಯಗಿರಿ ಪ್ರಕರಣದಲ್ಲಿ ತಪ್ಪಿತಸ್ಥ ಯಾರನ್ನೂ ಬಿಡುವುದಿಲ್ಲವೆಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ. ಆದರೆ ಈ ಪ್ರಕರಣದಲ್ಲಿ ಸಾವಿರ ಮಂದಿ ಇದ್ದರೆಂದು ಎಫ್‌ಐಆರ್‌ನಲ್ಲಿದ್ದರೂ ಈವರೆಗೆ 10-20 ಆರೋಪಿಗಳನ್ನಷ್ಟೇ ಬಂಧಿಸಲಾಗಿದೆ ಎಂದು ಸಂಸದ ಗೋವಿಂದ ಎಂ. ಕಾರಜೋಳ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹುಬ್ಬಳ್ಳಿಯಲ್ಲೂ ಗಲಾಟೆ ಆಗಿದೆ. ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಅಧಿಕಾರ ನಡೆಸಬೇಕಿತ್ತು. ಆದರೆ, ಗೂಂಡಾಗಳನ್ನು ಪ್ರೋತ್ಸಾಹಿಸುವ ಸರ್ಕಾರ ಅಧಿಕಾರದಲ್ಲಿದೆ. ಯಾರನ್ನು ಬಿಡುವುದಿಲ್ಲ ಎಂಬ ತಮ್ಮ ಮಾತನ್ನು ರಾಜ್ಯ ಸರ್ಕಾರ ಸಾಬೀತು ಪಡಿಸಬೇಕು ಎಂದು ಸವಾಲು ಹಾಕಿದರು. ಆಡಳಿತ ನಡೆಸಲು ಆಗದೆ ಇದ್ದರೆ ರಾಜೀನಾಮೆ ಕೊಟ್ಟು ಸಾರ್ವಜನಿಕರ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.
ಕುರ್ಚಿಗೆ ಕಂಟಕ ಬಂದಾಗಲೆಲ್ಲ ಕಾಂಗ್ರೆಸ್ ನಾಯವಕರು ಹೊಸ ನಾಟಕ ಶುರು ಮಾಡುತ್ತಾರೆ. ಉದ್ದೇಶಿತ ದಲಿತ/ಶೋಷಿತರ ಸಮಾವೇಶ ಕಾಂಗ್ರೆಸ್‌ನ ಗಿಮಿಕ್. ಅದೆಂದೂ ದಲಿತರನ್ನು ಸಿಎಂ ಮಾಡುವುದಿಲ್ಲ. ದೀರ್ಘಾವಧಿ ಅಧಿಕಾರದಲ್ಲಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಆಗಿಲ್ಲ. ದಲಿತರೆಲ್ಲರೂ ಸೇರಿ ಚಿಂದಿ ಮಾಡಿದರೆ ಕಾಂಗ್ರೆಸ್ಸಿಗೆ ಬುದ್ಧಿ ಬರಲಿದೆ. ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನ ಅನ್ಯ ಉದ್ದೇಶಗಳಿಗೆ ಬಳಸಿರುವ ಕಾಂಗ್ರೆಸ್‌ಗೆ ದಲಿತರ ಸಮಾವೇಶ ನಡೆಸುವ ನೈತಿಕತೆ ಇಲ್ಲ. ಈ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎನ್ನುವುದಕ್ಕೆ 9ವಿಶ್ವವಿದ್ಯಾಲಯಗಳನ್ನು ಮುಚ್ಚಲು ಹೊರಟಿರುವುದೇ ಸಾಕ್ಷಿಯಾಗಿದೆ ಎಂದರು.
ಕೇಂದ್ರ ರಸ್ತೆ ನಿಧಿ(ಸಿಆರ್‌ಐಎಫ್) ಜಿಲ್ಲೆಗೆ 2023-24ನೇ ಸಾಲಿನಲ್ಲಿ 48 ಕೋಟಿ ರೂ. ಮಂಜೂರಾಗಿದೆ. ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನ ಸಭಾ ಕ್ಷೇತ್ರಗಳಿಗೆ ತಲಾ ಆರು ಕೋಟಿ ರೂ. ಮಂಜೂರಾಗಿದೆ ಎಂದು ತಿಳಿಸಿದರು.

Share This Article

ಬೆಣ್ಣೆಯಂತೆ ಕೊಬ್ಬು ಕರಗಬೇಕೆ; ಉತ್ತಮ ಫಲಿತಾಂಶಕ್ಕಾಗಿ ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ | Health Tips

ಕೆಲವರು ಹೊರಗೆ ಊಟ ಮಾಡಿದ ನಂತರವೂ ತೆಳ್ಳಗಿರುತ್ತಾರೆ. ಯಾವುದೇ ಜಿಮ್ ಅಥವಾ ವ್ಯಾಯಾಮವನ್ನೂ ಮಾಡುವುದಿಲ್ಲ. ಏಕೆಂದರೆ…

ಶೀತ & ಜ್ವರವಿದ್ದಾಗ ಹುಳಿ ಮೊಸರು ಸೇವಿಸಬಹುದೇ?; ಇಲ್ಲಿದೆ ಉಪಯುಕ್ತ ಮಾಹಿತಿ | Health Tips

ಶೀತ ಮತ್ತು ಜ್ವರದ ಚಿಕಿತ್ಸೆಯ ಜತೆಗೆ ಹಲವು ರೀತಿಯ ಮುನ್ನೆಚ್ಚರಿಕೆಗಳನ್ನು ಸಹ ತೆಗೆದುಕೊಳ್ಳಬೇಕಾಗುತ್ತದೆ. ಮೊಸರು ಸೇವಿಸದಿರುವುದು…

ವೇಜ್​, ನಾನ್​ವೆಜ್ ಖಾದ್ಯ​ ‘ಟೊಮ್ಯಾಟೋ’ ಇಲ್ಲದೆ ಆಗೋದೆ ಇಲ್ವಾ? ಹೆಚ್ಚು Tomato ತಿನ್ನುವ ನಿಮಗಾಗಿ ಈ ಸುದ್ದಿ!

Tomato :  ನಾವು ನಮ್ಮ ದೈನಂದಿನ ಅಡುಗೆಗಳಲ್ಲಿ ಟೊಮ್ಯಾಟೋವನ್ನು ಬಳಸುತ್ತೇವೆ. ಟೊಮ್ಯಾಟೋಗಳನ್ನು  ಕರಿ, ಗ್ರೇವಿ, ಸೂಪ್…