More

  ಆಡಂಬರದ ಭಕ್ತಿಯಿಂದ ಪ್ರಯೋಜನ ಇಲ್ಲ

  ಸಿದ್ದಾಪುರ: ನಾಮದಿಂದ ಪ್ರೀತಿಯಿಂದ ಕರೆದರೆ ಮಾತ್ರ ಭಗವಂತ ಒಲಿಯುತ್ತಾನೆ. ಭಗವಂತನ ಕರುಣೆ ಇದ್ದಾಗ ಮಾತ್ರ ಮಾಡಿದ ಕೆಲಸ ಸಾರ್ಥಕವಾಗುತ್ತದೆ. ಆಡಂಬರದ ಭಕ್ತಿಯಿಂದ ಏನೂ ಪ್ರಯೋಜನ ಇಲ್ಲ ಎಂದು ಹಾಸನದ ಶ್ರೀ ರಾಮಾವಧೂತ ಮಹಾಸ್ವಾಮಿಗಳು ಹೇಳಿದರು.

  ತಾಲೂಕಿನ ಕಲಗದ್ದೆ ನಾಟ್ಯವಿನಾಯಕ ದೇವಸ್ಥಾನದಲ್ಲಿ ಭಾನುವಾರ ಮಹಾಯೋಗ ಪಟ್ಟಾಭಿಷೇಕದ ಸಮಾರೋಪದ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.

  ಯಲ್ಲಾಪುರ ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಅಯೋಧ್ಯಾ ರಾಮನ ಪಟ್ಟಾಭಿಷೇಕ ಕೇಳಿದ್ದೇವೆ.ಯೋಗದ ಮೂಲಕ ಇಲ್ಲಿ ನಾಟ್ಯ ವಿನಾಯಕನ ಮೂಲಕ ಬಿಂಬ ಪ್ರತಿಬಿಂಬವಾಗಿದೆ ಎಂದರು.

  ಸಾಹಿತಿ ಭುವನೇಶ್ವರಿ ಹೆಗಡೆ ಮಾತನಾಡಿ, ಜಗತ್ತಿನಲ್ಲಿ ಎಲ್ಲಿಯೂ ಇಲ್ಲದ ಏಕೈಕ ನಾಟ್ಯ ವಿನಾಯಕ ದೇವಸ್ಥಾನ ಇದಾಗಿದೆ. ಅದರಂತೆ ಭಕ್ತರ ಇಷ್ಟ ಈಡೇರಿಸುವವನೂ ಆಗಿದ್ದಾನೆ ಎಂದು ನಾಟ್ಯವಿನಾಯಕನ ಕುರಿತು ಮಾತನಾಡಿದರು.

  ಡಾ. ಶಶಿಭೂಷಣ ಹೆಗಡೆ ದೊಡ್ಮನೆ, ಡಾ.ಕೆ. ಶ್ರೀಧರ ವೈದ್ಯ, ಸಹಕಾರಿ ಎಂ.ಗಂಗಣ್ಣ, ವಿ.ಎಂ. ಭಟ್ಟ ಶಿರಸಿ, ಎಂ.ಎಂ. ಭಟ್ಟ ಕಾರೇಕೊಪ್ಪ, ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಜಿ.ಎಸ್. ಹೆಗಡೆ ಬೆಳ್ಳೆಮಡಕೆ, ಜಿ.ಪಿ.ಎನ್, ಹೆಗಡೆ ಹರಗಿ, ಎನ್.ಆರ್. ಭಟ್ಟ ಇಟಗಿ (ಬೆಂಗಳೂರು), ಸದಾಶಿವರಾವ್, ದೀಪಕ ದೊಡ್ಡೂರು, ದೀಪಕ ರೇವಣಕರ್, ವಿನಯ ಹೆಗಡೆ ಭವಂತಿಮನೆ, ವಿನಯ ಬೈಲಳ್ಳಿ ಸೋಮನಾಥಪುರ ಇತರರಿದ್ದರು.

  ದೇವಸ್ಥಾನದ ಮೊಕ್ತೇಸರ ವಿನಾಯಕ ಹೆಗಡೆ ಕಲಗದ್ದೆ ಹಾಗೂ ರಶ್ಮಿ ಹೆಗಡೆ ದಂಪತಿ ಪಟ್ಟಾಭಿಷೇಕದ ಯಜಮಾನತ್ವವಹಿಸಿದ್ದರು.

  ಗೋಕರ್ಣದ ಷಡಕ್ಷರಿ ಕೃಷ್ಣ ಭಟ್ಟ ಅವರ ಮಾರ್ಗದರ್ಶನದಲ್ಲಿ ನಡೆದ ಮಹಾಗಣಪತಿ ಯೋಗ ಪಟ್ಟಾಭಿಷೇಕ ಮಹೋತ್ಸವದಲ್ಲಿ ವಿ. ಕೃಷ್ಣ ಭಟ್ಟ ಅಡವಿತೋಟ, ವಿ. ಮಹೇಶ ಭಟ್ಟ ಅಗ್ಗೇರೆ ಅವರ ನೇತೃತ್ವದಲ್ಲಿ ಕಪ್ಪಕಾಣಿಕೆ, ಸಾವಿರ ಕುಂಬದಿಂದ ಜಲಾಭಿಷೇಕ ಸೇರಿ ವಿವಿಧ ಧಾರ್ವಿುಕ ಕಾರ್ಯಕ್ರಮ ನಡೆಸಿಕೊಟ್ಟರು.

  ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯ ಭಕ್ತರು ಪಾಲ್ಗೊಂಡಿದ್ದರು. ವಿನಾಯಕ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು, ಗಣಪತಿ ಹೆಗಡೆ ಗುಂಜಗೋಡ, ವಿಜಯ ಹೆಗಡೆ ಭವಂತಿಮನೆ, ವೆಂಕಟೇಶ ಹೆಗಡೆ ಬೊಗ್ರಿಮಕ್ಕಿ, ನಿತಿನ್ ಹೆಗಡೆ ಕಲಗದ್ದೆ ಕಾರ್ಯಕ್ರಮ ನಿರ್ವಹಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts