18 C
Bangalore
Thursday, December 5, 2019

ಆಟೋ ಪರ್ವಿುಟ್ ತಿಕ್ಕಾಟಕ್ಕೆ ಹತ್ತಾರು ಕಾರಣ

Latest News

ನೀರಿದೆ, ಪೂರೈಕೆ ವ್ಯವಸ್ಥೆ ಇಲ್ಲ

ಚಿಕ್ಕಮಗಳೂರು: ಈ ವರ್ಷ ಮಳೆ ಚೆನ್ನಾಗಿಯೇ ಆಗಿದೆ. ಎಲ್ಲ ನೀರಿನ ಮೂಲಗಳೂ ಭರ್ತಿಯಾಗಿವೆ. ನೀರು ಕೊಡಲು ಇನ್ನೇನು ಸಮಸ್ಯೆ? ನಾಗರಿಕರ ಇಂತಹ ಮಾತು,...

ಕುಕ್ಕರಹಳ್ಳಿ ಕೆರೆಯಲ್ಲಿ ಎರಡು ದ್ವೀಪ ನಿರ್ಮಿಸಿ

ಮೈಸೂರು: ಕುಕ್ಕರಹಳ್ಳಿ ಕೆರೆಯಲ್ಲಿ ಹೊಸದಾಗಿ ಎರಡು ದ್ವೀಪಗಳನ್ನು ನಿರ್ಮಾಣ ಮಾಡುವಂತೆ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಡಾ.ಕೆ.ಎಂ.ಜಯರಾಮಯ್ಯ ಮೈಸೂರು...

ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು

ಮೈಸೂರು: ತೀವ್ರ ಕುತೂಹಲ ಕೆರಳಿಸಿರುವ ಹುಣಸೂರು ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು ಮಾಡಿರುವುದರ ಜತೆಗೆ ಹೆಂಡದ ಘಾಟು ಹೆಚ್ಚು ವಿಜೃಂಭಿಸಿದೆ! ಮತದಾರರನ್ನು ಸೆಳೆಯಲು ಇಲ್ಲಿ...

ಯುವತಿ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ಸೆರೆ

ಮೈಸೂರು: ಪ್ರೀತಿಸಲು ನಿರಾಕರಿಸಿದ ಯುವತಿಯ ಮೇಲೆ ಹಲ್ಲೆ ನಡೆಸಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಪಿರಿಯಾಪಟ್ಟಣ ಮೂಲದ ಮಂಚೇಗೌಡನಕೊಪ್ಪಲು ನಿವಾಸಿ, ಖಾಸಗಿ ಕಂಪನಿಯ ಉದ್ಯೋಗಿ ಅಮೃತ್...

ಹುಣಸೂರು ಉಪಕದನ ಬಹುತೇಕ ಶಾಂತಿಯುತ

ಮೈಸೂರು: ಜಿದ್ದಾಜಿದ್ದಿನ ಕಣವಾಗಿರುವ ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಗುರುವಾರ ಶೇ.76ರಷ್ಟು ಮತದಾನವಾಗಿದೆ. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಶೇ.82.54ರಷ್ಟು ಮತ್ತು ಆರು ತಿಂಗಳ...

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ- ಧಾರವಾಡ ಮಹಾನಗರದಲ್ಲಿ ಒಟ್ಟು 18 ಸಾವಿರಕ್ಕೂ ಹೆಚ್ಚು ಆಟೋಗಳು ಸಂಚರಿಸುತ್ತಿದ್ದು, ಅದರಲ್ಲಿ 8 ಸಾವಿರ ಆಟೋಗಳು ಪರ್ವಿುಟ್ ಇಲ್ಲದೆ ಅನಧಿಕೃತವಾಗಿ ಸಂಚರಿಸುತ್ತಿವೆ. ಇದು ಅಚ್ಚರಿ ಎನಿಸಿದರೂ ಸತ್ಯ.

ಸ್ವತಃ ಪ್ರಾದೇಶಿಕ ಸಾರಿಗೆ ಅಧಿಕಾರಿಗಳೇ (ಆರ್​ಟಿಒ) ಈ ಅಂಕಿ ಅಂಶಗಳನ್ನು ನೀಡಿದ್ದಾರೆ.

ಆಟೋ ಪರ್ವಿುಟ್ ವಿಚಾರವಾಗಿ ಹು-ಧಾ ಸಂಚಾರ ಪೊಲೀಸರು, ಆರ್​ಟಿಒ ಹಾಗೂ ಆಟೋದವರ ನಡುವೆ ಆಟೋ ತಿಕ್ಕಾಟ ಮುಂದುವರಿದಿದೆ. ಇದಕ್ಕೆ ಅಂತ್ಯ ಯಾವಾಗ ? ಎಂಬ ಪ್ರಶ್ನೆ ಉದ್ಭವಿಸಿದೆ.

ಹುಬ್ಬಳ್ಳಿಯಲ್ಲಿ 12 ಸಾವಿರ, ಧಾರವಾಡದಲ್ಲಿ 6 ಸಾವಿರ ಆಟೋಗಳು ಸಂಚರಿಸುತ್ತಿವೆ. ಆದರೆ, ಇವುಗಳಲ್ಲಿ 8 ಸಾವಿರ ಆಟೋಗಳಿಗೆ ಪರ್ವಿುಟ್ ಇಲ್ಲ ಎಂಬುದನ್ನು ಆರ್​ಟಿಒ ಅಧಿಕಾರಿಗಳೇ ಸ್ಪಷ್ಟಪಡಿಸಿದ್ದಾರೆ. ಇಷ್ಟೊಂದು ಆಟೋಗಳು ಪರ್ವಿುಟ್ ಇಲ್ಲದೆ ಸಂಚರಿಸುತ್ತಿದ್ದರೂ ಆರ್​ಟಿಒ ಹಾಗೂ ಸಂಚಾರ ಪೊಲೀಸರು ಈವರೆಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲವೇಕೆ? ಇದರ ನಿಗೂಢತೆ ಅರ್ಥವಾಗುತ್ತಿಲ್ಲ. ಕಳೆದ ಒಂದು ವಾರದಿಂದ ಆಟೋ ತಪಾಸಣೆಗೆ ಮುಂದಾಗಿದ್ದು, ಹುಬ್ಬಳ್ಳಿಯಲ್ಲಿ 300, ಧಾರವಾಡದಲ್ಲಿ 100 ಆಟೋ ಸೇರಿ ಒಟ್ಟು 400 ಆಟೋಗಳನ್ನು ಜಪ್ತಿ ಮಾಡಿ, ಕಾರವಾರ ರಸ್ತೆಯ ಹಳೇ ಸಿಎಆರ್ ಮೈದಾನದಲ್ಲಿ ಇರಿಸಲಾಗಿದೆ.

ಹಾಗಿದ್ದರೆ ಈ ಪರ್ವಿುಟ್ ಗೊಂದಲಕ್ಕೆ ಕಾರಣವೇನು? ಎಂಬ ಪ್ರಶ್ನೆಗೆ ಆರ್​ಟಿಒ ಒಂದು ರೀತಿಯ ಉತ್ತರ ಕೊಡುತ್ತಾರೆ. ಪೊಲೀಸರು ಒಂದು ರೀತಿ ಉತ್ತರ ಕೊಡುತ್ತಾರೆ. ಆಟೋ ಚಾಲಕರ ಸಂಘದವರ ಸಮಜಾಯಿಷಿಯೇ ಬೇರೆ.

ಆಟೋ ದಟ್ಟಣೆ ಮತ್ತು ಸಂಬಂಧಿಸಿದ ಸಮಸ್ಯೆಗೆ ಬೇರೆ ಬೇರೆ ಆಯಾಮಗಳಿವೆ. ಫೈನಾನ್ಸ್ ಕಂಪನಿಗಳು ಮತ್ತು ಸರ್ಕಾರಿ ನಿಗಮ ಮಂಡಳಿಗಳು, ಆಟೋ ಡೀಲರ್​ಗಳು, ಕೆಲ ಸಂಘಟನೆಗಳು, ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಓಟ್ ಬ್ಯಾಂಕ್ ರಾಜಕಾರಣ… ಹೀಗೆ ನಾನಾ ಕಾರಣದಿಂದ ಸಮಸ್ಯೆ ಇದುವರೆಗೆ ಜಟಿಲವಾಗುತ್ತಲೇ ಬಂದಂತಿದೆ.

ಆಟೋ ಪರ್ವಿುಟ್ ಗೊಂದಲದ ಸ್ವರೂಪ ಬೇರೆಯೇ ಆಗಿದೆ. ಆಟೋ ಖರೀದಿಸಿದ 5 ವರ್ಷಗಳ ನಂತರ ಪರ್ವಿುಟ್ ನವೀಕರಣ (ರಿನಿವಲ್) ಮಾಡಬೇಕು. ಅದಕ್ಕೆ ಆಟೋ ಫಿಟ್​ನೆಸ್ ಸರ್ಟಿಫಿಕೇಟ್ ಬೇಕು. ಇದನ್ನು ಪಡೆಯಲು ಆಟೋ ಮೀಟರ್ ಇರಬೇಕು. ಆಟೋ ಮೀಟರ್ ಹಾಕಬೇಕೆಂದರೆ ವಿಮೆ ಕಟ್ಟಿರಬೇಕು. ಇನ್ಶೂರೆನ್ಸ್​ಗೆ ವರ್ಷಕ್ಕೆ 8 ಸಾವಿರ ರೂ. ಕಟ್ಟಬೇಕು. ಹೀಗಾಗಿ, ಹಲವು ಆಟೋ ಚಾಲಕರು ಪರ್ವಿುಟ್ ನವೀಕರಣದ ಗೋಜಿಗೇ ಹೋಗುವುದಿಲ್ಲ !

ಬೇರೆ ಜಿಲ್ಲೆ ವಾಹನಗಳು: ಗದಗ, ಹಾವೇರಿ, ಕೊಪ್ಪಳ, ಶಿವಮೊಗ್ಗ ಮತ್ತಿತರ ನಗರಗಳಲ್ಲಿ ಆಟೋ ಪರ್ವಿುಟ್ ಪಡೆದುಕೊಂಡು ಹುಬ್ಬಳ್ಳಿಗೆ ಬಂದು ಬಾಡಿಗೆ ಮಾಡುವವರೂ ಇದ್ದಾರೆ. ಸಾರಿಗೆ ಕಾಯ್ದೆ ಪ್ರಕಾರ ಪರ್ವಿುಟ್ ಪಡೆದ ನಗರಗಳಲ್ಲಿ ಮಾತ್ರ ಸಂಚರಿಸಬೇಕು. ಆದರೆ, ಅದನ್ನೆಲ್ಲ ಗಾಳಿಗೆ ತೂರಿರುವವರನ್ನು ಇದುವರೆಗೆ ಯಾರೂ ಪ್ರಶ್ನಿಸಿಲ್ಲ.

ನೂತನ ಪರ್ವಿುಟ್ ಬಂದ್ ಮಾಡಿ: ಹುಬ್ಬಳ್ಳಿ- ಧಾರವಾಡದ ಜನಸಂಖ್ಯೆ 12 ಲಕ್ಷ ಇದೆ. ಬೇರೆ ಬೇರೆ ಊರುಗಳಿಂದ ಸುಮಾರು 1 ಲಕ್ಷ ಜನ ಬಂದು ಹೋಗುತ್ತಾರೆ. ಜನಸಂಖ್ಯೆಗೆ ಅನುಗುಣವಾಗಿ ಎಷ್ಟು ಆಟೋಗಳು ಇರಬೇಕು ಎಂಬ ಮಾನದಂಡವಿದೆ. ಆ ಪ್ರಕಾರ ಒಂದು ಲಕ್ಷ ಜನಸಂಖ್ಯೆಗೆ ಒಂದು ಸಾವಿರ ಆಟೋ ಎಂದುಕೊಂಡರೂ ಅವಳಿ ನಗರಕ್ಕೆ 12 ಸಾವಿರ ಆಟೋ ಸಾಕಾಗುತ್ತವೆ. ಆದರೆ, ಸದ್ಯ 18 ಸಾವಿರ ಆಟೋಗಳು ಸಂಚರಿಸುತ್ತಿವೆ. ಇದರಿಂದಾಗಿ ಆಟೋವನ್ನೇ ನಂಬಿ ಜೀವನ ಸಾಗಿಸುವವರು ತುತ್ತಿನ ಚೀಲ ತುಂಬಿಸುವುದೂ ಕಷ್ಟಕರವಾಗಿದೆ. ಹಾಗಾಗಿ, ಇಷ್ಟೆಲ್ಲ ಆಟೋ ಓಡಾಡಲು ಬಿಟ್ಟಿರುವುದು ಏಕೆ ? ಎಂಬ ಪ್ರಶ್ನೆ ಮೂಡುತ್ತಿದೆ. ಆ ನಿಟ್ಟಿನಲ್ಲಿ ನೋಡಿದರೆ ಆಟೋ ಚಾಲಕರ ಸಂಘದ ಬೇಡಿಕೆಯಾದ ಐದು ವರ್ಷಗಳ ಕಾಲ ಹೊಸ ಪರ್ವಿುಟ್ ನೀಡುವುದನ್ನು ಸ್ಥಗಿತಗೊಳಿಸಬೇಕು ಎಂಬ ವಾದಕ್ಕೆ ಅರ್ಥವಿದೆ.

ರಿಕ್ಷಾ ಚಾಲಕರ ಬದುಕು ಅತಂತ್ರ !

ಅನಧಿಕೃತ ಆಟೋಗಳು ಹೆಚ್ಚಾದ ಕಾರಣ ಆಟೋ ಚಾಲಕರು ಸಾಕಷ್ಟು ಬಾಡಿಗೆ ಸಿಗದೇ ಕಂಗಾಲಾಗಿದ್ದಾರೆ. ಪರ್ವಿುಟ್ ಇಲ್ಲದ ಆಟೋಗಳಿಂದಾಗಿ, ಪರ್ವಿುಟ್ ಪಡೆದು ಎಲ್ಲ ದಾಖಲೆ ಹೊಂದಿರುವ ಆಟೋದವರ ಬದುಕು ಅತಂತ್ರವಾಗಿದೆ. ಅಂಥವರು ನಿತ್ಯ 200 ರೂ. ಗಳಿಸುವುದೂ ಕಷ್ಟ ಸಾಧ್ಯವಾಗಿದೆ. ಪೆಟ್ರೋಲ್, ಗ್ಯಾಸ್ ಬೆಲೆ ಹೆಚ್ಚಾಗಿದೆ. ರಸ್ತೆ ಹಾಳಾದ್ದರಿಂದ ನಿರ್ವಹಣೆ ಹೆಚ್ಚಾಗಿದೆ. ಇಷ್ಟೆಲ್ಲ ಸಮಸ್ಯೆಗಳ ಮಧ್ಯೆ ಆಟೋಗಳ ಸಂಖ್ಯೆ ಹೆಚ್ಚಾದ್ದರಿಂದ ಸಿಕ್ಕವರಿಗೆ ಸೀರುಂಡೆ ಎಂಬಂತಾಗಿ ಅನೇಕ ಚಾಲಕರ ಹೊಟ್ಟೆ ತುಂಬುತ್ತಿಲ್ಲ.

ಸರಿಯಾಗಿ ನಡೆಯುತ್ತಿಲ್ಲ ಆರ್​ಟಿಎ ಸಭೆ

ಜಿಲ್ಲಾಧಿಕಾರಿ ನೇತೃತ್ವದ ರಸ್ತೆ ಸಾರಿಗೆ ಪ್ರಾಧಿಕಾರ (ಆರ್​ಟಿಎ) ಮೂರು ತಿಂಗಳಿಗೊಮ್ಮೆ ಸಭೆ ನಡೆಸಬೇಕು ಎಂಬ ನಿಯಮವಿದೆ. ಆದರೆ, ಧಾರವಾಡ ಜಿಲ್ಲೆಯ ಆರ್​ಟಿಎ ಸಭೆಗಳು ಸರಿಯಾಗಿ ನಡೆಯುತ್ತಿಲ್ಲ. ಚುನಾವಣೆ ಮತ್ತಿತರ ಕಾರಣ ಹೇಳಿ ಸಭೆ ಮುಂದೂಡುತ್ತ ಕಾಲಹರಣ ಮಾಡಿರುವ ಆರೋಪ ಕೇಳಿ ಬಂದಿದೆ. ಇತ್ತೀಚೆಗೆ ಜೂನ್ 29ರಂದು ಆರ್​ಟಿಎ ಸಭೆ ನಡೆಸಿದ್ದು, ಅಕ್ರಮ ಆಟೋಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಹಾಗಿದ್ದರೆ ಈ ಅಕ್ರಮ ಆಟೋಗಳು ಬಂದಿರುವುದು ಹೇಗೆ ? ಅಧಿಕಾರಿಗಳು ಕಾಲಕಾಲಕ್ಕೆ ತಪಾಸಣೆ ಕೈಗೊಂಡಿದ್ದರೆ ಇಂತಹ ಸಮಸ್ಯೆ ಉಂಟಾಗುತ್ತಿರಲಿಲ್ಲ. 

ಜಿಲ್ಲಾಡಳಿತ ಸಮಸ್ಯೆ ಬಗೆಹರಿಸಲಿ

ನಾಲ್ಕೈದು ದಿನಗಳಿಂದ ಆರ್​ಟಿಒ ಹಾಗೂ ಸಂಚಾರ ಪೊಲೀಸರು ಆಟೋ ತಪಾಸಣೆ ನಡೆಸುತ್ತಿದ್ದಾರೆ. ಇದು ತಾತ್ಕಾಲಿಕ ಕಾರ್ಯಾಚರಣೆ ಅಷ್ಟೇ ಆಗಬಹುದು. ಪರ್ವಿುಟ್ ಇಲ್ಲದಿರುವ ಆಟೋ ಚಾಲಕರಿಂದ ಒಂದಷ್ಟು ದಂಡ ವಸೂಲಿ ಆಗಬಹುದು. ಸಮಸ್ಯೆ ಪೂರ್ತಿಯಾಗಿ ಪರಿಹಾರವಾಗುವುದು ಅನುಮಾನ. 18 ಸಾವಿರ ಆಟೋ ಚಾಲಕರಲ್ಲಿ ಸ್ವಂತ ಆಟೋ ಹೊಂದಿರುವವರಿಗಿಂತ ಬೇರೆಯವರಿಂದ ಬಾಡಿಗೆ ಪಡೆದು ಓಡಿಸುವರೇ ಹೆಚ್ಚಿದ್ದಾರೆ. ಒಂದು ಆಟೋಕ್ಕೆ 200 ರೂ. ಬಾಡಿಗೆ ನೀಡಬೇಕು. ನಾಲ್ಕಾರು ಆಟೋ ಇಟ್ಟುಕೊಂಡು ಬಾಡಿಗೆ ಕೊಡುವವರು ಹಲವರಿದ್ದಾರೆ. ಆಟೋ ದಟ್ಟಣೆ, ಪರ್ವಿುಟ್ ರಹಿತ ಓಡಾಟ ಸೇರಿ ಒಟ್ಟಾರೆ ಗೊಂದಲವನ್ನು ಜಿಲ್ಲಾಡಳಿತ, ಆರ್​ಟಿಒ ಹಾಗೂ ಸಂಚಾರ ಪೊಲೀಸರು ಸಮನ್ವಯದಿಂದ ಪರಿಹರಿಸಬೇಕು ಎಂಬುದು ಆಟೋ ಚಾಲಕರ ಒತ್ತಾಯವಾಗಿದೆ.

ಹು-ಧಾ ಅವಳಿ ನಗರದಲ್ಲಿ ಪರ್ವಿುಟ್ ಇಲ್ಲದ 8 ಸಾವಿರ ಆಟೋಗಳಿವೆ. ಅಂಥ ಆಟೋಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಲಾಗಿದೆ. ಸದ್ಯ 400 ಆಟೋಗಳನ್ನು ಜಪ್ತಿ ಮಾಡಲಾಗಿದೆ. ಪರ್ವಿುಟ್ ಪಡೆಯಲು ಇಚ್ಛಿಸುವವರು ನೇರವಾಗಿ ಕಚೇರಿಗೆ ಸಂರ್ಪಸಿದರೆ ಪರ್ವಿುಟ್ ನೀಡಲಾಗುವುದು.

ಆರ್. ಕವಳಿ, ಆರ್​ಟಿಒ, ಧಾರವಾಡ

ಪರ್ವಿುಟ್ ಇಲ್ಲದ ಆಟೋಗಳ ತಪಾಸಣೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಹಗಲು, ರಾತ್ರಿ ಆಟೋ ತಪಾಸಣೆ ನಡಸುವ ಮೂಲಕ ಅಂತಹ ಆಟೋಗಳನ್ನು ಜಪ್ತಿ ಮಾಡುತ್ತಿದ್ದೇವೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಆರ್​ಟಿಒಗೆ ತಿಳಿಸಿದ್ದೇವೆ.

ಬಿ.ಎಸ್. ನೇಮಗೌಡ, ಡಿಸಿಪಿ

ಆಟೋಗಳಿಗೆ ಹೊಸದಾಗಿ ಪರ್ವಿುಟ್ ಕೊಡುವುದನ್ನು ಸಾರಿಗೆ ಇಲಾಖೆ ನಿಲ್ಲಿಸಬೇಕು. ವೈಟ್ ಬೋರ್ಡ್ ಪರ್ವಿುಟ್ ಪಡೆದು ಬಾಡಿಗೆ ಓಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

ದೇವಾನಂದ ಜಗಾಪುರ, ಪ್ರಧಾನ ಕಾರ್ಯದರ್ಶಿ, ಆಟೋ ರಿಕ್ಷಾ ಚಾಲಕರ ಸಂಘ

Stay connected

278,730FansLike
580FollowersFollow
619,000SubscribersSubscribe

ವಿಡಿಯೋ ನ್ಯೂಸ್

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...

VIDEO| 3ನೇ ಮಹಡಿಯಿಂದ ಬಿದ್ದರೂ ಗಾಯವಾಗದೇ ಬದುಕುಳಿದ 2 ವರ್ಷದ...

ಪಂಜಿಮ್​: ದಮನ್ ಮತ್ತು ದಿಯುನಲ್ಲಿರುವ ಹೌಸಿಂಗ್​ ಕಾಂಪ್ಲೆಕ್ಸ್​ನ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಎರಡು ವರ್ಷದ ಮಗುವೊಂದು ಪವಾಡ ರೀತಿಯಲ್ಲಿ ಬದುಕುಳಿದಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ...

‘ಅಬುಧಾಬಿ ಯುವರಾಜ ಮತ್ತು ಪುಟ್ಟ ಬಾಲಕಿ’ಯ ಭಾವನಾತ್ಮಕ ಕತೆಯಿದು…; ನಿರಾಸೆಗೊಂಡ...

ಈ ಸುದ್ದಿ ಓದಿ, ವಿಡಿಯೋ ನೋಡಿದರೆ ಒಂದು ಕ್ಷಣ ಹೃದಯಕ್ಕೆ ತಟ್ಟುತ್ತದೆ. ಪುಟ್ಟ ಹುಡುಗಿಯ ನಿರಾಸೆ ಮತ್ತು ಅಬುಧಾಬಿಯ ಯುವರಾಜ ಶೇಖ್​ ಮೊಹಮ್ಮದ್​ ಬಿನ್​​ ಜಾಯೇದ್​ ಅವರ ಮೃದು ಮನಸು ಇಲ್ಲಿ ಅನಾವರಣಗೊಂಡಿದೆ. ಸೌದಿ...

VIDEO| ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ವಿಚಾರವಾಗಿ ಪ್ರಧಾನಿ...

ಮುಂಬೈ: ತೆಲಂಗಾಣದಲ್ಲಿ ನಡೆದ ಮಹಿಳಾ ಪಶುವೈದ್ಯಾಧಿಕಾರಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಇಡೀ ದೇಶವೇ ಖಂಡಿಸಿದ್ದು, ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕೆಂಬ ಒಕ್ಕೊರಲು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಭಾರತೀಯ ಸಿನಿಮಾ ರಂಗದ ತಾರೆಯರು ಕೂಡ...

VIDEO| ಸಫಾರಿ ವಾಹನವನ್ನು ಹಿಮ್ಮೆಟ್ಟಿ ಬಂದ ಹುಲಿ ವಿಡಿಯೋ ವೈರಲ್​:...

ಸವಾಯಿ ಮಧೊಪುರ್​: ರಾಜಸ್ಥಾನದ ರಣಥಂಬೋರ್​ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಣ್ಣು ಹುಲಿಯೊಂದು ಪ್ರವಾಸಿಗರಿದ್ದ ಸಫಾರಿ ಜೀಪ್​ ಅನ್ನು ಹಿಮ್ಮೆಟ್ಟಿಸಿಕೊಂಡು ಬಂದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿರುವ ಹುಲಿಯನ್ನು ಕೋಡ್​...