ಆಟೊಮೊಬೈಲ್ ಅಂಗಡಿಗೆ ಬೆಂಕಿ

ಕೋಲಾರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಹೊತ್ತಿಕೊಂಡು ಅಂಗಡಿಯಲ್ಲಿದ್ದ 58 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ಆಟೊಮೊಬೈಲ್ ಸಲಕರಣೆ, ಟೈರುಗಳು ಶನಿವಾರ ರಾತ್ರಿ ಬೆಂಕಿಗಾಹುತಿಯಾಗಿವೆ.

ಕೋಲಾರ- ಬೆಂಗಳೂರು ರಸ್ತೆಯ ಮಾಲೂರು ಬೈಪಾಸ್ ಬಳಿ ಮುಸ್ತಾಫ್ ಎಂಬುವರ ಮಾಲೀಕತ್ವದ ವಾಜೀದ್ ಆಟೊಮೊಬೈಲ್ಸ್ ಅಂಗಡಿಯಲ್ಲಿ ಈ ಅನಾಹುತ ಸಂಭವಿಸಿದೆ.

ಮುಸ್ತಾಫ್ ಶನಿವಾರ ರಾತ್ರಿ ಅಂಗಡಿ ಬಾಗಿಲು ಮುಚ್ಚಿ ಪ್ರಾರ್ಥನೆಗೆ ತೆರಳಿದ್ದರು. ರಾತ್ರಿ 9.45ಕ್ಕೆ ಬಾಗಿಲಲ್ಲಿ ಹೊಗೆ ಹೊರ ಬರುತ್ತಿದೆ ಎಂದು ಸ್ಥಳೀಯರು ದೂರವಾಣಿ ಕರೆ ಮಾಡಿ ತಿಳಿಸಿದ ತಕ್ಷಣ ಧಾವಿಸಿ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದರು.

ಮೂರು ಅಂತಸ್ತಿನ ಕಟ್ಟಡ ಪೂರ್ತಿ ಹೊಗೆಯಿಂದ ಆವರಿಸಿದೆ. ಅಗ್ನಿಶಾಮಕದಳ 10.30ರ ವೇಳೆಗೆ ಸ್ಥಳಕ್ಕೆ ಬಂದರೂ ವಾಹನದಲ್ಲಿ ನೀರು ಸಂಗ್ರಹಣೆ ಇರಲಿಲ್ಲ. ನಂತರ ಬೇರೆ ಅಗ್ನಿ ಶಾಮಕ ವಾಹನ ಕರೆಸಿಕೊಂಡು ಬೆಂಕಿ ನಂದಿಸುವ ಪ್ರಯತ್ನ ಮಾಡಿದರೂ ಆಯಿಲ್, ಟೈರ್, ಇನ್ನಿತರ ಸಲಕರಣೆಗಳಿಗೆ ಬೆಂಕಿ ವ್ಯಾಪಿಸಿತ್ತು. ಪಕ್ಕದ ಅಂಗಡಿಯ ಗೋಡೆ ಒಡೆದ ಸಿಬ್ಬಂದಿ ಸತತ 5 ಗಂಟೆ ಶ್ರಮಿಸಿದರು. ಆ ವೇಳೆಗೆ ಲಕ್ಷಾಂತರ ರೂ. ಮೌಲ್ಯದ ಸಲಕರಣೆಗಳು ಬೆಂಕಿಗಾಹುತಿಯಾಗಿತ್ತು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *