ಚಿತ್ರದುರ್ಗ: ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರಿಗೆ ಸಂತಾಪ ಸೂಚಿಸುವ ವೇಳೆ, ಉಪಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್, ಮೊದಲು ನಾನು ವಡ್ಡವಡ್ಡಾಗಿದ್ದೆ ಎಂದು ಹೇಳಿರುವುದು ತೀವ್ರ ಬೇಸರವನ್ನು ಉಂಟು ಮಾಡಿದೆ ಎಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾಂವಿಧಾನಿಕ ಹುದ್ದೆ ಜವಾಬ್ದಾರಿಯಲ್ಲಿರುವಂಥ ಡಿಸಿಎಂ, ಸದನದಲ್ಲಿ ಈ ರೀತಿ ಹೇಳಿರುವುದು ಬೈಗುಳ, ಅಸಹ್ಯಕರ ಶಬ್ದವಾಗಿ ಬಳಕೆಯಾಗುವ ಅಪಾಯವಿದೆ. ಮಾನಸಿಕ ಅಸ್ಪಶ್ಯತೆಯ ಈ ನಡೆ ತಮಗೆ ತೀವ್ರ ಆಘಾತ ಉಂಟು ಮಾಡಿದ್ದು, ಅವರಾಡಿದ ಈ ಪದವನ್ನು ಸದನದ ಕಡತದಿಂದ ತೆಗೆದು ಹಾಕಬೇಕೆಂದರು.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಅವರ ಈ ಮಾತುಗಳಿಂದ ಬೇಸರಗೊಂಡಿರುವ ಸಮುದಾಯದ ಜನರು, ಸಂಘಟ ನೆಗಳ ಪ್ರಮುಖರು ಜಾತಿ ನಿಂದನೆ ಪ್ರಕರಣ ದಾಖಲಿಸಲು ಮುಂದಾಗಿದ್ದು, ಶಾಂತಿಯಿಂದ ಇರುವಂತೆ ತಿಳಿಸಿದ್ದೇನೆ. ಆದ್ದರಿಂದ ಡಿಸಿಎಂ ತಮ್ಮ ಈ ಮಾತಿಗೆ ಕ್ಷಮೆ ಕೇಳಿದರೆ ತಪ್ಪಿಲ್ಲ. ಕ್ಷಮೆ ಕೇಳುವ ಮೂಲಕ ಅವರು ದೊಡ್ಡವರಾಗಬೇಕೆಂದರು.
ಶಿವಕುಮಾರ್ ಮತ್ತು ಶ್ರೀ ಮಠದ ನಡುವೆ ಅವಿನಾಭಾವ ಸಂಬಂಧವಿದೆ. ಸಿದ್ದರಾಮಯ್ಯ ಅವರ ಮೊದಲ ಸರ್ಕಾರದಲ್ಲಿ ತಮಗೆ ಸ ಚಿವ ಸ್ಥಾನ ಸಿಗದಿದ್ದರೂ, ಸಮುದಾಯದ ಶಿವರಾಜ್ ತಂಗಡಗಿ ಅವರು ಸಚಿವರಾಗಲು ಕಾರಣರಾಗಿದ್ದವರು. ಸಮುದಾಯದವರಿಗೆ ಪಕ್ಷದ ಹುದ್ದೆಗಳು ಸಿಗಲೂ ಕಾರಣರಾಗಿರುವ ಅವರು, ಸಮುದಾಯದ ಪರ ಹಲವು ಬಾರಿ ನಿಂತು ನ್ಯಾಯವನ್ನೂ ಒದಗಿಸಿದ್ದಾರೆ. ಆದರೆ ಈಗ ಶಿವಕುಮಾರ್ ಆಡಿದ ಮಾತು ಬೈಗುಳವಾಗಿ ಉಳಿದು ಬಿಡುವ ಅಪಾಯವಿದೆ ಎಂದು ಶ್ರೀಗಳು ತಮ್ಮ ಆತಂಕ, ನೋವನ್ನು ವ್ಯಕ್ತಪಡಿಸಿದರು.
ಭೋವಿ ಸಮುದಾಯ ಸಾಂಸ್ಕೃತಿಕ, ಸ್ವಾಭಿಮಾನದಿಂದ ಕೂಡಿದೆ ಹಾಗೂ ನಾಗರಿಕತೆ ಬೆಳವಣಿಗೆಗೆ ಕಾರಣವೂ ಆಗಿದೆ ಎಂದರು. ಭೋವಿ ಸಮಾಜದ ಜಿಲ್ಲಾ ಮಾಜಿ ಅಧ್ಯಕ್ಷ ಡಿ.ತಿಮಣ್ಣ, ಪ್ರಧಾನ ಕಾರ‌್ಯದರ್ಶಿ ಎಚ್.ಲಕ್ಷ್ಮಣ್ ಇದ್ದರು.
ಆಘಾತ ತಂದ ಡಿಸಿಎಂ ಶಿವಕುಮಾರ್ ಮಾತು
You Might Also Like
ಕೇವಲ 10 ನಿಮಿಷದಲ್ಲಿ ಮನೆಯಲ್ಲೇ ಮಾಡಿ ಬ್ರೆಡ್ ಪಿಜ್ಜಾ; ಇಲ್ಲಿದೆ ಸಿಂಪಲ್ ವಿಧಾನ | Recipe
ಮನೆಯಲ್ಲಿದ್ದಾಗ ಕೆಲವೊಮ್ಮೆ ಬಹಳ ಹಸಿವಾಗುತ್ತಿರುತ್ತದೆ ಆದರೆ ಆ ಸಮಯದಲ್ಲಿ ಏನು ತಿನ್ನಬೇಕು ಎಂಬುದೆ ನಮಗೆ ತಿಳಿಯುವುದಿಲ್ಲ.…
ಊಟದ ಬಳಿಕ ಬೆಲ್ಲದ ಸೇವನೆಯಿಂದಾಗುವ ಪ್ರಯೋಜನ ಗೊತ್ತಾ?; ತಿಳಿದ್ರೆ ನೀವು ಮಿಸ್ ಮಾಡೋದೆ ಇಲ್ಲ | Health Tips
ಭಾರತದಲ್ಲಿ ಬೆಲ್ಲವನ್ನು ಸಾಮಾನ್ಯವಾಗಿ ಊಟದ ನಂತರ ತಿನ್ನಲಾಗುತ್ತದೆ. ನಿಮ್ಮ ಹಸಿವನ್ನು ನೀಗಿಸಲು ಇದನ್ನು ಸಿಹಿಯಾಗಿ ಸೇವಿಸಬಹುದು.…
ಟೊಮೆಟೊ ಸೇವನೆ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆಯೇ; ಈ ಬಗ್ಗೆ ತಜ್ಞರು ಹೇಳೋದೇನು? | Health Tips
ಕ್ಯಾನ್ಸರ್ ಚಿಕಿತ್ಸೆಯು ಇನ್ನೂ ಅತ್ಯಂತ ದುಬಾರಿ ಮತ್ತು ಅಸಾಧ್ಯವಾಗಿದೆ. ಇತ್ತೀಚೆಗೆ ಯುವಕರನ್ನೂ ಕಾಡುತ್ತಿರುವ ರೋಗ ಕ್ಯಾನ್ಸರ್.…