25.1 C
Bangalore
Friday, December 6, 2019

ಆಗಿಲ್ಲ ಸಾಲಮನ್ನಾ, ತುಂಬಿ ಹಣ

Latest News

ಮಲಗಿದ ಮೇಲೆ ಸಂಪೂರ್ಣ ಸುಖ ನಿದ್ದೆಗೆ ಇಲ್ಲಿವೆ ಕೆಲ ಟಿಪ್ಸ್​ಗಳು

ಸಂಪುರ್ಣ ಎಂಟು ತಾಸು ನಿದ್ದೆ..! - ನಿದ್ದೆ ಮಾಡಿದ ಮೇಲೆ ಮಧ್ಯೆ ಯಾವುದಕ್ಕೂ ಅಂದರೆ ಬಾತ್​ರೂಂಗೆ ಹೋಗಲು, ನೀರು ಕುಡಿಯಲು, ನಿಮ್ಮ ಮೊಬೈಲ್​ ಚೆಕ್​ ಮಾಡಲು...

ಗೊರಗುದ್ದಿ ಶಾಲೆ ಗೋಳು ಕೇಳೋರಿಲ್ಲ

|ಬೆಳ್ಳೆಪ್ಪ ಮ.ದಳವಾಯಿ ಕಡಬಿ ಸರ್ಕಾರ ಸರ್ವಶಿಕ್ಷಣ ಅಭಿಯಾನದ ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ. ಅಲ್ಲದೆ ಆ ಯೋಜನೆಗಳಿಗೆ ಸರ್ಕಾರ ಕೋಟ್ಯಂತರ ರೂ.ಹಣ ಖರ್ಚು...

ಅತ್ಯಾಚಾರ ಆರೋಪಿಗಳ ಎನ್​ಕೌಂಟರ್​ ಬಗ್ಗೆ ಇಂಚಿಂಚು ಮಾಹಿತಿ ಬಿಚ್ಚಿಟ್ಟ ಪೊಲೀಸ್​ ಆಯುಕ್ತ ವಿಶ್ವನಾಥ್​ ಸಜ್ಜನರ್​

ಹೈದರಾಬಾದ್​: ಪಶುವೈದ್ಯೆಯ ಮೇಲೆ ಅತ್ಯಾಚಾರವೆಸಗಿ, ಕೊಲೆಗೈದು ಮೃತದೇಹಕ್ಕೆ ಬೆಂಕಿಯಿಟ್ಟು ಕ್ರೂರತ್ವ ಮೆರೆದಿದ್ದ ನಾಲ್ವರು ಆರೋಪಿಗಳನ್ನು ಹೈದರಾಬಾದ್​ ಪೊಲೀಸರು ಶುಕ್ರವಾರ ಬೆಳ್ಳಂಬೆಳಗ್ಗೆ ಎನ್​ಕೌಂಟರ್​ ಮೂಲಕ...

ಯಾಂತ್ರಿಕ ಜೀವನಕ್ಕೆ ಮಾರುಹೋಗಿದ್ದಾರೆ ಜನ

ಕನಕಪುರ: ಯಾಂತ್ರಿಕ ಜೀವನಕ್ಕೆ ಮಾರುಹೋಗಿರುವ ಇಂದಿನ ಜನತೆ ಗ್ರಾಮೀಣ ಕಲೆ, ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ ಎಂದು ದೇಗುಲಮಠದ ಕಿರಿಯ ಶ್ರೀ ಚನ್ನಬಸವ ಸ್ವಾಮೀಜಿ ತಿಳಿಸಿದರು. ಕೋಡಿಹಳ್ಳಿ ರಂಗಮಂದಿರದಲ್ಲಿ ಕನ್ನಡ...

ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳ ಎನ್​ಕೌಂಟರ್​​ ಅನ್ನು ಸ್ವಾಗತಿಸಿದ ಗೋವಾ ಕಾಂಗ್ರೆಸ್​​

ಪಣಜಿ: ಹೈದರಾಬಾದ್​ನಲ್ಲಿ ಶುಕ್ರವಾರ ಮುಂಜಾನೆ ದಿಶಾ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದಿದ್ದ ಆರೋಪಿಗಳನ್ನು ಪೊಲೀಸರು ಎನ್​ಕೌಂಟರ್​​ನಲ್ಲಿ ಕೊಲೆ ಮಾಡಿದ್ದನ್ನು ಗೋವಾ ಕಾಂಗ್ರೆಸ್​ ಮಹಿಳಾ...

ವಿಜಯವಾಣಿ ಟೀಮ್ ಉತ್ತರ ಕನ್ನಡ:ಸಾಲ ಮನ್ನಾ ಆಗಿದೆ ಎಂದು ರಾಜ್ಯ ಸರ್ಕಾರ ಪ್ರಚಾರ ಮಾಡುತ್ತಿದೆ. ಈ ಬಾರಿ ಮಾರ್ಚ್ ಅಂತ್ಯಕ್ಕೆ ಸಾಲ ಮರುಪಾವತಿಗೆ ಹಣ ಹೊಂದಿಸುವ ಅವಶ್ಯಕತೆ ಇಲ್ಲ ಎಂದು ನಿರಾಳವಾಗಿದ್ದ ರೈತರು ಹೌಹಾರಿದ್ದಾರೆ. ಏಪ್ರಿಲ್ 15ರ ಒಳಗಡೆ ಸಾಲ ಪಾವತಿಸುವಂತೆ ಬಹುತೇಕ ರೈತರಿಗೆ ಸಹಕಾರಿ ಸಂಘಗಳು ಹಾಗೂ ಬ್ಯಾಂಕ್​ಗಳು ನೋಟಿಸ್ ನೀಡಿವೆ.

ಜಿಲ್ಲೆಯ ಹಳಿಯಾಳ ಹಾಗೂ ಕುಮಟಾ ತಾಲೂಕಿನ ಚಂದಾವರ ಭಾಗದಲ್ಲಿ ಕೆಲವು ರೈತರಿಗೆ ಬೆಳೆ ಸಾಲ ಮರುಪಾವತಿ ಮಾಡುವಂತೆ ಸೊಸೈಟಿಗಳು ನೋಟಿಸ್ ನೀಡಲಾರಂಭಿಸಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.

ಮೈತ್ರಿ ಸರ್ಕಾರ ಸಾಲಮನ್ನಾ ಮಾಡಲಾಗಿದೆ. ಸಾಲ ತುಂಬುವ ಅಗತ್ಯವಿಲ್ಲ ಎಂದು ಭರವಸೆ ನೀಡಿರುವುದು ಈಗ ಜಿಲ್ಲೆಯಲ್ಲಿ ಹುಸಿಯಾದಂತಾಗಿದೆ. ಸಹಕಾರಿ ಸಂಘಗಳು ಕೂಡಾ ಸರ್ಕಾರದಿಂದ ಸಾಲಮನ್ನಾ ಹಣ ಪಾವತಿ ಆಗದೇ ಇರುವುದಕ್ಕೆ ಅಸಹಾಯಕತೆಯನ್ನು ವ್ಯಕ್ತ ಪಡಿಸಿದೆ. ಏ. 15 ರೊಳಗೆ ಸಾಲಗಾರ ಸಾಲ ಮರುಪಾವತಿ ಮಾಡದೇ ಹೋದಲ್ಲಿ ಮುಂದಿನ ಹಂಗಾಮಿಗೆ ಆತ ಬಡ್ಡಿ ರಹಿತ ಬೆಳೆ ಸಾಲ ಪಡೆಯಲು ಅರ್ಹನಾಗುವುದಿಲ್ಲ. ಏ. 16 ರ ನಂತರ ಬಾಕಿ ಇರುವ ಸಾಲಕ್ಕೆ ಸಹಕಾರಿ ಸಂಘಗಳು ಶೇ. 12 ರ ಬಡ್ಡಿ ಆಕರಿಸಬೇಕಾಗುತ್ತದೆ.

ನೋಟಿಸ್ ನೀಡುವಂತಿಲ್ಲ

ಸಾಲಗಾರರಿಗೆ ನೋಟಿಸ್ ನೀಡದಂತೆ ಸರ್ಕಾರ ಆದೇಶ ಹೊರಡಿಸಿದೆ. ಸಾಲ ಮನ್ನಾ ಆಗಿದೆ ಎಂದು ರೈತರು ಸೊಸೈಟಿ ಕಡೆಗೆ ಮುಖ ಹಾಕುತ್ತಿಲ್ಲ. ಸಾಲವನ್ನೂ ತುಂಬುತ್ತಿಲ್ಲ. ಇದರಿಂದ ಸಹಕಾರಿ ಸಂಘಗಳು ಇಕ್ಕಟ್ಟಿಗೆ ಸಿಲುಕಿವೆ. ಸಹಕಾರಿ ಸಂಘಗಳು ತಾವು ಡಿಸಿಸಿ ಹಾಗೂ ಇತರ ಬ್ಯಾಂಕ್​ಗಳಿಂದ ಪಡೆದ ಸಾಲ ತುಂಬಲು ಪರದಾಡುವ ಪರಿಸ್ಥಿತಿ ಎದುರಾಗಿದೆ. ಹಾಗಾದರೆ ನೋಟಿಸ್ ನೀಡದೇ ರೈತರಿಂದ ಸಾಲ ಮರುಪಾವತಿ ಆದೇಶ ಹೊರಡಿಸುವುದು ಹೇಗೆ ಎಂಬ ಗೊಂದಲದಲ್ಲಿ ಸಹಕಾರಿ ಸಂಘಗಳಿವೆ.

ಎಷ್ಟು ಸಾಲ?

ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಮಾರು 87 ಸಾವಿರ ರೈತರು ಬೆಳೆ ಸಾಲ ಪಡೆದಿದ್ದಾರೆ. ಅದರಲ್ಲಿ ಸುಮಾರು 80 ಸಾವಿರಕ್ಕೂ ಅಧಿಕ ರೈತರು ಸರ್ಕಾರದ ನಿಯಮಾವಳಿಯಂತೆ ಸಾಲ ಮನ್ನಾಕ್ಕೆ ಅರ್ಹರಾಗಿದ್ದಾರೆ. ಡಿಸೆಂಬರ್​ನಲ್ಲಿ ತಹಸೀಲ್ದಾರ್ ಕಚೇರಿಯ ಮೂಲಕ ಆರ್​ಟಿಸಿ, ರೇಶನ್ ಕಾರ್ಡ್ ಆಧಾರ ಕಾರ್ಡ್ ಜೊತೆ ರೈತರಿಂದ ಬೆಳೆ ಸಾಲಕ್ಕೆ ಅರ್ಜಿ ಪಡೆಯಲಾಗಿತ್ತು. ಆಗ 86 ಸಾವಿರ ರೈತರು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಗಳನ್ನು ಸಹಕಾರಿ ಸಂಘಗಳ ಇಲಾಖೆಯಲ್ಲಿ ಪರಿಶೀಲಿಸಲಾಗಿದೆ. ಸುಮಾರು 5 ಸಾವಿರ ರೈತರ ಅರ್ಜಿಗಳಲ್ಲಿ ಕೆಲವು ದಾಖಲೆಗಳ ಕೊರತೆ ಇದೆ.

ನೀತಿ ಸಂಹಿತೆಯಿಂದ ತೊಂದರೆ?

ಸಾಲಮನ್ನಾ ಆದ ಫಲಾನುಭವಿಗಳ ಪಟ್ಟಿ ಬಿಡುಗಡೆಗೆ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಅಡ್ಡಿಯಾಗಿದೆ ಎನ್ನಲಾಗುತ್ತಿದೆ. ಆದರೂ ಸಿದ್ದಾಪುರ ತಾಲೂಕಿನ ಹೇರೂರಿನ ರೈತರೊಬ್ಬರಿಗೆ ಸಾಲ ಮನ್ನಾ ಆದ ಬಗೆಗೆ ಸಿಎಂ ಕುಮಾರಸ್ವಾಮಿ ಅವರ ಚಿತ್ರವಿರುವ ಲಕೋಟೆ ಮಾ. 18 ರಂದು ಬಂದು ತಲುಪಿದೆ.

ಗೊಂದಲದಲ್ಲಿ ಸಂಘಗಳು

ಸಹಕಾರಿ ಸಂಘಗಳಲ್ಲಿ 1 ಲಕ್ಷದವರೆಗೆ ರೈತರು ಪಡೆದ ಬೆಳೆ ಸಾಲಮನ್ನಾ ಮಾಡುವುದಾಗಿ ಸರ್ಕಾರ 2018 ರ ಸೆಪ್ಟೆಂಬರ್​ನಲ್ಲಿ ಆದೇಶ ಹೊರಡಿಸಿತ್ತು. ಡಿಸೆಂಬರ್​ನಲ್ಲಿ ಫಲಾನುಭವಿಗಳಿಂದ ಅರ್ಜಿ ಹಾಗೂ ದಾಖಲೆಗಳನ್ನು ಪಡೆಯಲಾಗಿದೆ. ಆದರೆ, ಸಾಲ ಮನ್ನಾ ಸೌಲಭ್ಯಕ್ಕೆ ಅರ್ಹರಾದ ರೈತರ ಪಟ್ಟಿ ಬಿಡುಗಡೆ ಮಾಡಿಲ್ಲ. ಏಪ್ರಿಲ್ 15 ಕ್ಕೆ ಬೆಳೆ ಸಾಲದ ಅವಧಿ ಮುಕ್ತಾಯವಾಗುತ್ತಿದೆ. ಸಾಲಗಾರರಿಗೆ ನೋಟಿಸ್ ನೀಡಲೂ ಆಗದೇ ಸಹಕಾರಿ ಸಂಘಗಳು ಗೊಂದಲದಲ್ಲಿವೆ. ಈ ಕುರಿತು ಸ್ಪಷ್ಟನೆ ನೀಡಿರುವ ಸೊಸೈಟಿಗಳ ಪ್ರಮುಖರು ನಾವು ಸಾಲ ನೀಡುವಂತೆ ಮನವಿ ಮಾಡುತ್ತಿದ್ದೇವೆ. ಒತ್ತಾಯ ಮಾಡುತ್ತಿಲ್ಲ ಎಂದಿದ್ದಾರೆ.

ಯಾರಿಗೆ ಸಿಗುವುದಿಲ್ಲ ಸೌಲಭ್ಯ

ಸೆಪ್ಟೆಂಬರ್​ನಲ್ಲಿ ಸರ್ಕಾರ ಹೊರಡಿಸಿದ ಸಾಲಮನ್ನಾ ನಿಯಮಾವಳಿಗಳ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ ಒಮ್ಮೆಯಾದರೂ ಆದಾಯ ತೆರಿಗೆ ಪಾವತಿಸಿದವರು. ಸರ್ಕಾರಿ ನೌಕರರು, ಮಾಸಿಕ 20 ಸಾವಿರಕ್ಕಿಂತ ಹೆಚ್ಚಿಗೆ ವೇತನ ಇರುವವರು. ಸಾಲ ಮನ್ನಾ ವ್ಯಾಪ್ತಿಗೆ ಬರುವುದಿಲ್ಲ. ಜುಲೈ 10ಕ್ಕೆ ಅನುಗುಣವಾಗಿ ಗರಿಷ್ಠ 1 ಲಕ್ಷ ಬೆಳೆ ಸಾಲ ಹಾಗೂ ಅದರ ಬಡ್ಡಿ ಮನ್ನಾ ಆಗಲಿದೆ. ಸುಸ್ತಿಸಾಲದ ಬಡ್ಡಿ ಮನ್ನಾ ಆಗದು.

ಸಾಲ ಮನ್ನಾ ಫಲಾನುಭವಿಗಳ ಪಟ್ಟಿ ಬಿಡುಗಡೆ ಆಗದ ಕಾರಣ ಇಕ್ಕಟ್ಟಿಗೆ ಸಿಲುಕಿದ್ದೇವೆ. ವಿವಿಧೆಡೆ ಸಹಕಾರಿ ಸಂಘಗಳ ಮುಖಂಡರ ಸಭೆ ಮಾಡಿ 1 ಲಕ್ಷ ರೂ.ಮೀರಿ ಸಾಲ ಹೊಂದಿರುವವರು ಅದನ್ನು ಮರುಪಾವತಿ ಮಾಡುವಂತೆ ನೆನಪಿನ ಪತ್ರ ನೀಡಿ ರೈತರ ಮನವೊಲಿಸುವಂತೆ ಸೂಚಿಸಿದ್ದೇವೆ.

| ಎಸ್.ಪಿ.ಚೌವ್ಹಾಣ್ ಕೆಡಿಸಿಸಿ ಬ್ಯಾಂಕ್ ಎಂಡಿ

ಸಾಲ ಮರುಪಾವತಿ ಮಾಡುವಂತೆ ನೋಟಿಸ್ ನೀಡಲು ಬರುವುದಿಲ್ಲ. ಆದರೆ, ತಿಳಿವಳಿಕೆ ಪತ್ರ ನೀಡಬಹುದು. ಸೊಸೈಟಿಗಳು ತಿಳಿವಳಿಕೆ ಪತ್ರ ನೀಡುತ್ತಿವೆ ಎಂದು ಕೇಳಿದ್ದೇನೆ.

| ಜಯಪ್ರಕಾಶ ಸಹಕಾರಿ ಸಂಘಗಳ ಉಪನಿಬಂಧಕರು, ಕಾರವಾರ

Stay connected

278,739FansLike
580FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...

VIDEO| 3ನೇ ಮಹಡಿಯಿಂದ ಬಿದ್ದರೂ ಗಾಯವಾಗದೇ ಬದುಕುಳಿದ 2 ವರ್ಷದ...

ಪಂಜಿಮ್​: ದಮನ್ ಮತ್ತು ದಿಯುನಲ್ಲಿರುವ ಹೌಸಿಂಗ್​ ಕಾಂಪ್ಲೆಕ್ಸ್​ನ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಎರಡು ವರ್ಷದ ಮಗುವೊಂದು ಪವಾಡ ರೀತಿಯಲ್ಲಿ ಬದುಕುಳಿದಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ...

‘ಅಬುಧಾಬಿ ಯುವರಾಜ ಮತ್ತು ಪುಟ್ಟ ಬಾಲಕಿ’ಯ ಭಾವನಾತ್ಮಕ ಕತೆಯಿದು…; ನಿರಾಸೆಗೊಂಡ...

ಈ ಸುದ್ದಿ ಓದಿ, ವಿಡಿಯೋ ನೋಡಿದರೆ ಒಂದು ಕ್ಷಣ ಹೃದಯಕ್ಕೆ ತಟ್ಟುತ್ತದೆ. ಪುಟ್ಟ ಹುಡುಗಿಯ ನಿರಾಸೆ ಮತ್ತು ಅಬುಧಾಬಿಯ ಯುವರಾಜ ಶೇಖ್​ ಮೊಹಮ್ಮದ್​ ಬಿನ್​​ ಜಾಯೇದ್​ ಅವರ ಮೃದು ಮನಸು ಇಲ್ಲಿ ಅನಾವರಣಗೊಂಡಿದೆ. ಸೌದಿ...

VIDEO| ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ವಿಚಾರವಾಗಿ ಪ್ರಧಾನಿ...

ಮುಂಬೈ: ತೆಲಂಗಾಣದಲ್ಲಿ ನಡೆದ ಮಹಿಳಾ ಪಶುವೈದ್ಯಾಧಿಕಾರಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಇಡೀ ದೇಶವೇ ಖಂಡಿಸಿದ್ದು, ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕೆಂಬ ಒಕ್ಕೊರಲು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಭಾರತೀಯ ಸಿನಿಮಾ ರಂಗದ ತಾರೆಯರು ಕೂಡ...