ಮುಂಡಗೋಡ: ತಾಲೂಕಿನ ಮೈನಳ್ಳಿ ಗ್ರಾಮದಲ್ಲಿ ಕಟಾವಿಗೆ ಬಂದ ಕಬ್ಬಿನ ಗದ್ದೆಗೆ ಸೋಮವಾರ ಮೇನ್ ಲೈನ್ನ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಆಕಸ್ಮಿಕ ಬೆಂಕಿ ತಗುಲಿ ಹಾನಿಯಾಗಿದೆ.
ಆನಂದ ಇಂಗೋಲೆ ಎಂಬುವರ ಗದ್ದೆ ಇದಾಗಿದ್ದು, ಮೂರುವರೆ ಎಕರೆ ಕಬ್ಬಿನ ಗದ್ದೆಯಲ್ಲಿ 2 ಎಕರೆ ಕಬ್ಬು ಹಾಗೂ ನೀರುಣಿಸುವ 35 ರಬ್ಬರ್ ಪೈಪ್ಗಳು ಸುಟ್ಟಿವೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ನಾರಾಯಣ ತಳೇಕರ, ಸ್ವಪ್ನಿಲ್ ಪೆಡ್ನೇಕರ, ಅಭಿ ಕುರುವಿನಕೊಪ್ಪ, ಬಸವರಾಜ ನಾಣಾಪೂರ, ಸಂತೋಷ ಪಾಟೀಲ, ದುರ್ಗಪ್ಪ ಹರಿಜನ, ಮಂಜುನಾಥ ಪಟಗಾರ ಮತ್ತು ಪರಶುರಾಮ ಮಟ್ಟಿಮನಿ ಕಾರ್ಯಾಚರಣೆಯಲ್ಲಿದ್ದರು.</