Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಆಕರ್ಷಕ ದರದಲ್ಲಿ ದುರ್ಗಾಶ್ರೀ ವೆಂಚರ್ಸ್ ಸೈಟ್ಸ್

Saturday, 30.06.2018, 3:01 AM       No Comments

ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ವಿಶೇಷ ಛಾಪು ಮೂಡಿಸಿರುವ ದುರ್ಗಾಶ್ರೀ ವೆಂಚರ್ಸ್, ಮೈಸೂರು ರಸ್ತೆಯ ದೊಡ್ಡ ಆಲದ ಮರ ಬಳಿ 12 ಎಕರೆ ಮತ್ತು ತುಮಕೂರು ರಸ್ತೆಯ ಆರ್​ಟಿಒ ಕಚೇರಿ ಬಳಿ 5 ಎಕರೆ ಜಾಗದಲ್ಲಿ ಲೇಔಟ್ ನಿರ್ಮಾಣ ಮಾಡಿದ್ದು, ಆಕರ್ಷಕ ದರದಲ್ಲಿ ಗ್ರಾಹಕರಿಗೆ ನಿವೇಶನಗಳು ಸಿಗಲಿವೆ.

ತಮ್ಮ ಕನಸಿನ ಮನೆ ಕಟ್ಟಿಕೊಳ್ಳಬೇಕೆಂಬ ಬಯಕೆ ಎಷ್ಟೋ ಜನರಿಗೆ ಇರುತ್ತದೆ. ಆದರೆ, ಆರ್ಥಿಕ ಸಮಸ್ಯೆಯಿಂದಾಗಿ ಮರೀಚಿಕೆಯಾಗಿರುತ್ತದೆ. ಈ ಉದ್ದೇಶವನ್ನು ಈಡೇರಿಸಲು ದುರ್ಗಾಶ್ರೀ ವೆಂಚರ್ಸ್ ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿಯ ಚುಂಚನಕುಪ್ಪೆ (ದೊಡ್ಡ ಆಲದ ಮರ) ಬಳಿ ಲಲಿತಾ ರೆಸಿಡೆನ್ಸಿ ಮತ್ತು ತುಮಕೂರು ರಸ್ತೆಯ ಆರ್​ಟಿಒ ಕಚೇರಿ ಬಳಿ ಮಾಡೆಲ್ ವಿಲೇಜ್​ನಲ್ಲಿ ಲೇಔಟ್ ನಿರ್ಮಾಣ ಮಾಡಿದ್ದು, ನೂರಾರು ಸೈಟ್​ಗಳು ಮಾರಾಟಕ್ಕೆ ಸಿದ್ಧವಾಗಿವೆ ಎನ್ನುತ್ತಾರೆ, ದುರ್ಗಾಶ್ರೀ ವೆಂಚರ್ಸ್​ನ ಎಂಡಿ ವಿಕ್ರಂ.

ಬಿಡದಿಯನ್ನು ಸ್ಮಾರ್ಟ್ ಸಿಟಿಯನ್ನಾಗಿ ಮಾಡುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈಗಾಗಲೇ ಬಿಡದಿ ಬಳಿ 10 ಸಾವಿರ ಎಕರೆ ಜಾಗ ವಶಪಡಿಸಿಕೊಂಡಿದೆ. ಕೈಗಾರಿಕೆ ಅಭಿವೃದ್ಧಿ, ಉದ್ದಿಮೆಗಳಿಗೆ ಪೂರಕವಾಗಿರುವ ಸ್ಥಳವಾಗಿದೆ. ಅಂತಾರಾಷ್ಟ್ರೀಯ ಕೈಗಾರಿಕೆಗಳು ಮತ್ತು ಕಂಪನಿಗಳು ಸಾಕಷ್ಟಿವೆ. ಲಕ್ಷಾಂತರ ಉದ್ಯೋಗಿಗಳು ಕೆಲಸ ಮಾಡುತ್ತಿದ್ದು, ವೇಗವಾಗಿ ಬೆಳೆಯುತ್ತಿದೆ. ಅಲ್ಲದೆ, ದೊಡ್ಡ ಆಲದ ಮರ ಬಳಿ ಟೌನ್​ಶಿಪ್ ಮಾಡಲು 2ಸಾವಿರ ಎಕರೆ ಜಾಗವನ್ನು ಸರ್ಕಾರ ಖರೀದಿಸಿದೆ. ಆದುದರಿಂದ ಗ್ರಾಹಕರಿಗೆ ಮನೆಕಟ್ಟಿಕೊಳ್ಳುವ ಸಲುವಾಗಿ ಲೇಔಟ್ ನಿರ್ಮಾಣ ಮಾಡಲಾಗಿದೆ.

ರೇರಾ ಅನುಮೋದನೆ

ದೊಡ್ಡ ಆಲದ ಮರ ಬಳಿ ಇರುವ ಲಲಿತಾ ರೆಸಿಡೆನ್ಸಿಯಲ್ಲಿ 3040 ಸೈಟಿನ ಬೆಲೆ 16 ಲಕ್ಷ ರೂ. ಮತ್ತು ಮಾಡಲ್ ವಿಲೇಜ್​ನಲ್ಲಿರುವ 3040 ಸೈಟಿನ ಬೆಲೆ 7 ಲಕ್ಷ ರೂ. ದರ ನಿಗದಿ ಮಾಡಲಾಗಿದೆ. ಸೈಟ್ ಕೊಳ್ಳುವವರು ಮೊದಲು ಶೇ.30ರಷ್ಟು ಮುಂಗಡ ಹಣ ಪಾವತಿಸಬೇಕು. ಉಳಿದ ಶೇ.70ರಷ್ಟು ಹಣ ಬ್ಯಾಂಕಿನಲ್ಲಿ ನಿವೇಶನ ಸಾಲ ಸಿಗುತ್ತದೆ. ರೇರಾ, ಬಿಎಂಆರ್​ಎ, ಬಿಡಿಎ ಮತ್ತು ಕೆಎಚ್​ಬಿ ಸಂಸ್ಥೆಯಿಂದ ಅನುಮೋದನೆ ಸಿಕ್ಕಿದೆ.

ಸಕಲ ಸೌಲಭ್ಯ

ಬೆಂಗಳೂರು-ಮೈಸೂರು ರಸ್ತೆಯ ಕೇವಲ 7 ಕಿಲೋಮೀಟರ್ ದೂರದಲ್ಲಿ ಲಲಿತಾ ರೆಸಿಡೆನ್ಸಿ ನಿರ್ಮಾಣ ಮಾಡಲಾಗಿದೆ. ಗ್ರಾಹಕರಿಗೆ 24 ಗಂಟೆಯೂ ಬಸ್ಸು ಮತ್ತು ರೈಲಿನ ಸೌಲಭ್ಯವಿದೆ. ಪಾರ್ಕ್, ಜಾಗಿಂಗ್ ಟ್ರಾ್ಯಕ್, ಮಕ್ಕಳ ಆಟದ ಮೈದಾನ, ಬ್ಲಾಕ್ ಟಾಪ್ ರೋಡ್ಸ್, 24 ಗಂಟೆ ಭದ್ರತಾ ಸೌಲಭ್ಯ, ವಾಟರ್ ಟ್ಯಾಂಕ್, ಮಳೆ ನೀರು ಸಾರಾಗವಾಗಿ ಹರಿಯುವ ವ್ಯವಸ್ಥೆ ಮಾಡಲಾಗಿದೆ. ಸುತ್ತಮುತ್ತ ಶಾಲಾ-ಕಾಲೇಜು, ಆಸ್ಪತ್ರೆಗಳು ಇವೆ. ಪಂಜಾಬ್ ನ್ಯಾಷನಲ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಐಐಎಫ್​ಎಲ್, ರಿಪ್ಕೊ ಬ್ಯಾಂಕ್, ಯೆಸ್ ಬ್ಯಾಂಕ್, ಕೆನರಾ ಸೇರಿ ಹಲವು ಬ್ಯಾಂಕ್​ಗಳಲ್ಲಿ ಸಾಲ ಸೌಲಭ್ಯ ಸಿಗಲಿದೆ.

ಆಸಕ್ತರು, ನಂ.292, ಆಂಜನಾದ್ರಿ, 11ನೇ ಬ್ಲಾಕ್, 2ನೇ ಹಂತ ನಾಗರಭಾವಿ, ಬೆಂ-72 ಈ ವಿಳಾಸಕ್ಕೆ ಭೇಟಿ ನೀಡಬಹುದು. ಮಾಹಿತಿಗೆ ಮೊ: 8880660099, 7676769294ಕ್ಕೆ ಸಂಪರ್ಕಿಸಬಹುದು.

Leave a Reply

Your email address will not be published. Required fields are marked *

Back To Top