ಕಲಬುರಗಿ: ಜೇವರ್ಗಿ ತಾಲೂಕಿನ ಆಂದೋಲದ ಶ್ರೀ ಕರುಣೇಶ್ವರ ಸಂಸ್ಥಾನ ಹಿರೇಮಠದಲ್ಲಿ ನ.೧೨ ರಂದು ಜಗಜ್ಯೋತಿ ಬಸವೇಶ್ವರರ ಕಂಚಿನ ಆಶ್ವಾರೂಢ ಪುತ್ಥಳಿ ಅನಾವರಣ ಮತ್ತು ಧರ್ಮ ಸಭೆ ಸೇರಿ ನ.೨೪ರವರೆಗೆ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿವೆ ಎಂದು ಶ್ರೀಮಠದ ಪೀಠಾಧಿಪತಿ ಶ್ರೀ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.
ನ.೧೨ರಂದು ಸಂಜೆ ೪ಕ್ಕೆ ಬಸವೇಶ್ವರರ ಕಂಚಿನ ಅಶ್ವಾರೂಢ ಪುತ್ಥಳಿ ಅನಾವರಣ, ಧರ್ಮ ಸಭೆಯನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿz್ದÁರೆ. ಕಾಶಿ ಜಗದ್ಗುರು ಶ್ರೀ ಡಾ.ಚಂದ್ರಶೇಖರ ಶಿವಾಚಾರ್ಯರು ಸೇರಿ ವಿವಿಧ ಪೂಜ್ಯರು ಸಾನ್ನಿಧ್ಯ ವಹಿಸಲಿದ್ದಾರೆ. ಸಚಿವರಾದ ಪ್ರಿಯಾಂಕ್ ಖರ್ಗೆ, ಡಾ.ಶರಣಪ್ರಕಾಶ ಪಾಟೀಲ್, ಈಶ್ವರ ಖಂಡ್ರೆ ಮತ್ತು ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಶಾಸಕರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
೧೩ ರಂದು ಬೆಳಗ್ಗೆ ೮ಕ್ಕೆ ಶ್ರೀ ಕರುಣೇಶ್ವರರ ರಜತ ಪುತ್ಥಳಿ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಮಧ್ಯಾಹ್ನ ೧೨ಕ್ಕೆ ಕರುಣೇಶ್ವರ ಸಾಮಾಜಿಕ ಕಲ್ಯಾಣ ಮತ್ತು ಅಭಿವೃದ್ಧಿ ಸಮಿತಿ ಹಾಗೂ ಆಂದೋಲ ಗ್ರಾಮಸ್ಥರಿಂದ ಉಚಿತ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ. ಸಂಜೆ ೪ಕ್ಕೆ ಕಲ್ಯಾಣ ಕರ್ನಾಟಕ ಮಠಾಧೀಶರ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆ ಸೇರಿ ವಿವಿಧ ಜಿಲ್ಲೆಗಳ ೨೦೦ಕ್ಕೂ ಅಧಿಕ ಮಠಾಧೀಶರು, ಪ್ರಮೋದ ಮುತಾಲಿಕ್, ಟಿ.ರಾಜಾಸಿಂಗ್ ಸೇರಿದಂತೆ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
೧೪ರಂದು ಸಂಜೆ ೪ಕ್ಕೆ ಆದಿಯೋಗಿ ಪುತ್ಥಳಿ ಅನಾವರಣ ಶಿವಾರತಿ, ಭಾರತಮಾತಾ ಪೂಜೆ ಹಾಗೂ ಮಾತೃ ಸಮಾವೇಶ ನಡೆಯಲಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಸೇರಿ ವಿವಿಧ ರಾಜಕೀಯ ನಾಯಕರು, ಮಠಾಧೀಶರು, ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
ಸಮಾರಂಭದ ವೇದಿಕೆಗಳಿಗೆ ಸಿದ್ಧಗಂಗಾ ಶ್ರೀ, ಪೇಜಾವರ ಶ್ರೀ ವೇದಿಕೆ, ಪುಟ್ಟರಾಜ ಶ್ರೀ, ಸಿದ್ಧೇಶ್ವರ ಶ್ರೀ ಎಂದು ನಾಮಕರಣ ಮಾಡಲಾಗಿದೆ. ಸಮಾರಂಭದ ಪೂರ್ವಭಾವಿಯಾಗಿ ೧೧ ರಂದು ಮಧ್ಯಾಹ್ನ ೩ಕ್ಕೆ ಆಂದೋಲ ಮಠದಿಂದ ಜೇವರ್ಗಿವರೆಗೆ ಬೈಕ್ ರ‍್ಯಾಲಿ ನಡೆಸಲಾಗುತ್ತಿದೆ. ತಾಲೂಕಿನ ೧೧೦ ಹಳ್ಳಿಗಳಿಗೆ ಕರಪತ್ರ ವಿತರಿಸಲಾಗಿದೆ ಎಂದು ತಿಳಿಸಿದರು.
ಗೌಡಪ್ಪಗೌಡ ಪಾಟೀಲ್ ಆಂದೋಲ, ಗುರುಲಿಂಗಪ್ಪಗೌಡ ಆಂದೋಲ, ಶಿವರಾಜ ಪಾಟೀಲ್ ರz್ದÉÃವಾಡಗಿ, ಸಿದ್ದು ಅಂಗಡಿ, ಸುರೇಶ ಪಾಟೀಲ್, ದಂಡಪ್ಪ ಸಂಗಾರೆಡ್ಡಿ, ಮಲ್ಲಿಕಾರ್ಜುನ ಲಂಕಾಣಿ ಆಂದೋಲ, ಮೌನೇಶ ಮತ್ತು ಉ¯್ಲÉÃಶ ಇತರರಿದ್ದರು.
ಆಂದೋಲದಲ್ಲಿ ಜಗಜ್ಯೋತಿ ಬಸವೇಶ್ವರರ ಕಂಚಿನ ಆಶ್ವಾರೂಢ ಪುತ್ಥಳಿ ಅನಾವರಣದ ೩೦ ವರ್ಷದ ಸಂಕಲ್ಪ ಇದೀಗ ಈಡೇರಿದೆ. ಬಸವೇಶ್ವರ ಸಂದೇಶದAತೆ ಸರಳವಾಗಿ ೧೧ ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿದೆ.
| ಶ್ರೀ ಸಿದ್ದಲಿಂಗ ಸ್ವಾಮೀಜಿ,
ಶ್ರೀ ಕರುಣೇಶ್ವರ ಸಂಸ್ಥಾನ ಹಿರೇಮಠ, ಆಂದೋಲ
೨೦ರಂದು ರಥೋತ್ಸವ: ೨೦ರಂದು ಸಂಜೆ ೫ಕ್ಕೆ ಶ್ರೀ ಕರುಣೇಶ್ವರರ ಭವ್ಯ ರಥೋತ್ಸವ ಜರುಗಲಿದೆ. ನಂತರ ವಿಶೇಷ ಸಂಗೀತ ಸಭೆ ನಡೆಸಲಾಗುವುದು. ೨೧ರಂದು ಕುಸ್ತಿ ಪಂದ್ಯ ನಡೆಯಲಿವೆ. ೨೨ ರಂದು ಸಂಜೆ ೫ಕ್ಕೆ ಶಿವಸಂಚಾರ ಸಾಣೇಹಳ್ಳಿ ತಂಡದಿAದ ಕೋಳೂರು ಕೊಡಗೂಸು ಭಕ್ತಿ ನಾಟಕ, ೨೩ ರಂದು ಸಂಜೆ ೫ಕ್ಕೆ ತುಲಾಭಾರ ನಾಟಕ, ೨೪ ರಂದು ಸಂಜೆ ೫ಕ್ಕೆ ಬಂಗಾರದ ಮನುಷ್ಯ ನಾಟಕ ಪ್ರದರ್ಶನವಾಗಲಿದೆ. ಅಂದೇ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಆಂದೋಲಾ ಶ್ರೀ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.