More

    ಆಂತರಿಕ ಉನ್ನತಿಯಿಂದ ಶ್ರೇಷ್ಠತೆ ಸಾಕಾರ

    ಹುಬ್ಬಳ್ಳಿ: ಸೃಜನಶೀಲತೆ, ಸಾತ್ವಿಕತೆ ಮತ್ತು ಸದ್ಗುಣಗಳು ಸಮಾಜದಲ್ಲಿ ಉಳಿಯಬೇಕಾಗಿದೆ. ಮಾನವ ಬಾಹ್ಯವಾಗಿ ಎಷ್ಟೇ ಉನ್ನತಿ ಹೊಂದಿದರೂ ಆಂತರಿಕ ಉನ್ನತಿಯಿಂದ ಮಾತ್ರ ಶ್ರೇಷ್ಠನಾಗಬಲ್ಲ ಎಂದು ಹಿರಿಯ ಲೆಕ್ಕ ಪರಿಶೋಧಕ ಚಂದ್ರಶೇಖರ ಡವಳಗಿ ಅಭಿಪ್ರಾಯಪಟ್ಟರು.

    ಇಲ್ಲಿಯ ವಿಶ್ವೇಶ್ವರನಗರ ವರಸಿದ್ಧಿವಿನಾಯಕ ಮಂದಿರದಲ್ಲಿ ನಡೆಯುತ್ತಿರುವ ಉಚಿತ ಜ್ಯೋತಿಷ ಕಾರ್ಯಕ್ರಮದಲ್ಲಿ ಶ್ರೀಪರಮಾತ್ಮಾಜಿ ಮಹಾರಾಜರ ಜೀವನಚರಿತ್ರೆ, ಜೀವನ ಮತ್ತು ಸಾಧನೆ ಹಾಗೂ ಪರಮಾವತಾರಿ ಎಂಬ ಮೂರು ಕೃತಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

    ಮನುಷ್ಯನ ಆಂತರಿಕ ಉನ್ನತಿಗೆ ಸಾಧಕರ ಜೀವನ ಚರಿತ್ರೆಗಳು ದಾರಿದೀಪಗಳಾಗಿವೆ. ಪರಮಾತ್ಮಾಜಿ ಮಹಾರಾಜರು ಚಿಕ್ಕ ವಯಸ್ಸಿನಲ್ಲಿಯೇ ಕನ್ನಡಕ್ಕೆ ನೂರು ಕೃತಿಗಳನ್ನು ನೀಡಿದ ಮಹಾಮೇಧಾವಿಗಳು. ಅವರ ಸಾಧನೆ ತಿಳಿದುಕೊಳ್ಳಲು ಜೀವನಚರಿತ್ರೆ ಸಹಕಾರಿಯಾಗಿದೆ ಎಂದರು.

    ಸಾನ್ನಿಧ್ಯ ವಹಿಸಿದ್ದ ಶ್ರೀಪರಮಾತ್ಮಾಜಿ ಮಹಾರಾಜರು, ಮಹಾನ್ ಸಾಧನೆ ಕೆಲವೇ ದಿನಗಳಲ್ಲಿ ಆಗದು. ಅದಕ್ಕೆ ಸತತ ಪರಿಶ್ರಮದ ಅವಶ್ಯಕತೆಯಿದೆ. ನಾವು ಮಾಡುವ ಸಾಧನೆಗಳಿಂದ ನಮ್ಮ ಆತ್ಮದ ಜತೆಗೆ ಸಾವಿರಾರು ಆತ್ಮಗಳ ಉನ್ನತಿ ಸಾಧ್ಯವಾದರೆ ಅದೇ ಸರ್ವಶ್ರೇಷ್ಠ ಸಾಧನೆ ಎಂದು ಆಶೀರ್ವದಿಸಿದರು.

    ಲೇಖಕ ವೈದಿಕರತ್ನಂ ವೆಂಕಟರಮಣ ಪಂಡಿತರು, ಶ್ರೀಪರಮಾತ್ಮಾಜಿ ಮಹಾರಾಜರ ಜೀವನ ಚರಿತ್ರೆ ರಚಿಸುವ ಸದವಕಾಶ ದೊರೆತಿದ್ದು ನನ್ನ ಪುಣ್ಯ ಎಂದರು. ರಮೇಶ ಕುಲಕರ್ಣಿ ಮಾತನಾಡಿದರು. ವಸಂತ ಕೇಣಿ, ಜಿ. ಮಂಗಳಮೂರ್ತಿ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts