More

    ಆಂಗ್ಲಭಾಷೆ ಜಾಹೀರಾತು ಫಲಕಗಳ ತೆರವು

    ಕುಶಾಲನಗರ: ಕುಶಾಲನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಗಾತ್ರದ ಆಂಗ್ಲ ಭಾಷೆಯ ಜಾಹೀರಾತು ಫಲಕಗಳನ್ನು ಮಂಗಳವಾರ ಪಟ್ಟಣ ಪಂಚಾಯಿತಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ತೆರವು ಮಾಡಿದರು.
    ಜಾಹೀರಾತು ಫಲಕಗಳನ್ನು ಅಳವಡಿಸಿದ್ದ ಸಂಸ್ಥೆಗೆ ಸೂಚನೆ ನೀಡಿದ್ದರೂ ತೆರವು ಮಾಡಲು ಕ್ರಮ ತೆಗೆದುಕೊಳ್ಳದಿರುವುದರಿಂದ ಪಂಚಾಯಿತಿಯಿಂದ ತೆರವು ಮಾಡಲಾಯಿತು.


    ಸ್ಥಳೀಯ ಅಂಗಡಿ, ಹೋಟೆಲ್ ಇತರ ಉದ್ದಿಮೆಯ ಇಂಗ್ಲಿಷ್ ಫಲಕಗಳನ್ನು ತೆಗೆದು ಕನ್ನಡದಲ್ಲಿ ಅಳವಡಿಸಲು ನ.30ರ ತನಕ ಸಮಯಾವಕಾಶ ನೀಡಿದ್ದೇವೆ. ಕನ್ನಡ ಫಲಕಗಳನ್ನು ಹಾಕದಿದ್ದರೆ ದಂಡ ಹಾಕುವುದರ ಜತೆಗೆ ಇಂಗ್ಲಿಷ್ ಫಲಕಗಳನ್ನು ಪಂಚಾಯಿತಿ ಸಿಬ್ಬಂದಿ ತೆರವು ಮಾಡಲಿದ್ದಾರೆ ಎಂದು ಆರೋಗ್ಯಾಧಿಕಾರಿ ಉದಯ್ ವಿಜಯವಾಣಿಗೆ ತಿಳಿಸಿದ್ದಾರೆ.


    ಬುಧವಾರ ಪಟ್ಟಣ ಪ್ರದೇಶದಲ್ಲಿ ಆಟೋಗೆ ಮೈಕ್ ಕಟ್ಟಿಕೊಂಡು ವ್ಯಾಪಾರಸ್ಥರಿಗೆ ಅರಿವು ಮೂಡಿಸುತ್ತೇವೆ. ಎಚ್ಚೆತ್ತುಕೊಂಡು ಬೋರ್ಡ್ ಬದಲಿಸಬೇಕು ಎಂದು ಸೂಚನೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts