Tuesday, 11th December 2018  

Vijayavani

Breaking News

ಅಹಿಂದ ಹಿತಕ್ಕೆ ಬದ್ಧ

Monday, 01.01.2018, 3:01 AM       No Comments

ಕೂಡಲಸಂಗಮ: ಅಹಿಂದ ವರ್ಗದ ಹೆಸರು ಹೇಳಿ ಅಧಿಕಾರ ಹಿಡಿದ ಸಿಎಂ ಸಿದ್ದರಾಮಯ್ಯ ಈ ವರ್ಗದ ಹಿತ ಕಾಪಾಡುವಲ್ಲಿ ವಿಫಲವಾದ ಕಾರಣ ‘ನಮ್ಮ ಕಾಂಗ್ರೆಸ್ ಪಕ್ಷ’ ಸ್ಥಾಪಿಸಲಾಗಿದೆ ಎಂದು ಪಕ್ಷದ ಸಂಸ್ಥಾಪಕ ಅಧ್ಯಕ್ಷ ವರ್ತರು ಪ್ರಕಾಶ್ ಹೇಳಿದ್ದಾರೆ. ಕೂಡಲಸಂಗಮದಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ಉದ್ಘಾಟಿಸಿ ಮಾತನಾಡಿದ ಅವರು, ಈ ವರ್ಗದ ಜನರಿಗೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸ್ಥಾನಮಾನ ಕಲ್ಪಿಸುವುದೇ ಪಕ್ಷದ ಗುರಿ ಎಂದರು.

ಸಿಎಂ ಸಿದ್ದರಾಮಯ್ಯ ಸರ್ಕಾರದ ಯಂತ್ರವನ್ನು ಬಳಸಿಕೊಂಡು ರಾಜ್ಯದಲ್ಲಿ ಸಾಧನಾ ಸಮಾವೇಶ ಮಾಡುತ್ತಿದ್ದಾರೆ. ಅಧಿಕಾರದಿಂದ ಕೆಳಗಿಳಿದು ಬಂದು ಸಮಾವೇಶ ನಡೆಸಿ ಜನರನ್ನು ಸೇರಿಸಲಿ. ಜನರು ಸೇರಿದರೆ ನಾನು ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದು ಸವಾಲು ಹಾಕಿದರು.

ಬೀದಿ ಪಾಲಾದ ಅನ್ನ: ಬೆಳಗ್ಗೆ 11 ಗಂಟೆಗೆ ಆರಂಭ ಗೊಳ್ಳಬೇಕಿದ್ದ ಉದ್ಘಾಟನೆ ಸಮಾರಂಭ ಜನರ ಕೊರತೆಯಿಂದಾಗಿ ಮಧ್ಯಾಹ್ನ 2.30ಕ್ಕೆ ಆರಂಭಗೊಂಡಿತು. ಸುಮಾರು 2 ಲಕ್ಷ ಜನ ಸೇರಬಹುದೆಂದು ಊಟದ ವ್ಯವಸ್ಥೆ ಮಾಡಲಾಗಿತ್ತು. ನಿರೀಕ್ಷಿತ ಪ್ರಮಾಣದಲ್ಲಿ ಜನ ಸೇರದಿದ್ದರಿಂದ ಬಹುತೇಕ ಆಹಾರವನ್ನು ಚೆಲ್ಲಲಾಯಿತು.

Leave a Reply

Your email address will not be published. Required fields are marked *

Back To Top