ಧಾರವಾಡ: ರಾಜ್ಯದಲ್ಲಿ ಸಂಘಟಿತ, ವಲಸೆ ಕಾರ್ವಿುಕರ ಸಂಖ್ಯೆಗೆ ಅನುಗುಣವಾಗಿ ಕಲ್ಯಾಣ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಅಸಂಘಟಿತ ಕಾರ್ವಿುಕರ ಸಮೀಕ್ಷೆ ಮಾಡಿ ದತ್ತಾಂಶ ಸಂಗ್ರಹಿಸಲು ಕಾರ್ವಿುಕ ಇಲಾಖೆ ನಿರ್ಧರಿಸಿದ್ದು, ಬರುವ ಅಧಿವೇಶನದಲ್ಲಿ ಅವರ ಭದ್ರತೆಗೆ ಪ್ರತ್ಯೇಕ ಕಾನೂನು ರಚಿಸಲು ಚರ್ಚೆ ನಡೆಸಲಾಗುವುದು ಎಂದು ಸಚಿವ ಶಿವರಾಮ ಹೆಬ್ಬಾರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ವಿುಕ ಇಲಾಖೆಯ ಪ್ರಗತಿ ಪರಿಶೀಲನೆ ಹಾಗೂ ಫಲಾನುಭವಿಗಳಿಗೆ ಪರಿಹಾರ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಲಾಖೆಯು ಕಾರ್ವಿುಕ ಮತ್ತು ಮಾಲೀಕರ ಮಧ್ಯೆ ಸೇತುವೆಯಾಗಿದೆ. ಕಾರ್ವಿುಕರ ಹಿತ ರಕ್ಷಣೆಗೆ ವಿವಿಧ ಕಾನೂನುಗಳು ಅಸ್ತಿತ್ವದಲ್ಲಿದ್ದರೂ ಉದ್ಯೋಗ ಕಡಿತ ಹಾಗೂ ಉತ್ಪಾದನೆಗಳ ಸ್ಥಗಿತದ ಹಿನ್ನೆಲೆಯಲ್ಲಿ ಇಲಾಖೆ ಮಾನವೀಯತೆ ಆಧಾರದಲ್ಲಿ ಸಮನ್ವಯತೆಯಿಂದ ಕೆಲಸ ಮಾಡುತ್ತಿದೆ. ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿರುವ ಹೊಸ ಕೈಗಾರಿಕಾ ನೀತಿ ಕಾರ್ವಿುಕ ವರ್ಗಕ್ಕೆ ಪೂರಕವಾಗಿದೆ ಎಂದರು.
ಸರ್ಕಾರ ರಾಜ್ಯದಲ್ಲಿ ಕಾರ್ವಿುಕ ಸ್ನೇಹಿ ವಾತಾವರಣಕ್ಕೆ ಆದ್ಯತೆ ನೀಡಿದೆ. ಮುಂದಿನ ದಿನಗಳಲ್ಲಿ ಕಾರ್ವಿುಕರ ಮಕ್ಕಳಿಗೆ ಆಯಾ ಪ್ರದೇಶಗಳಲ್ಲೇ ವಸತಿಯುತ ಶಾಲೆ ಆರಂಭಿಸಲು ಇಲಾಖೆ ಚಿಂತಿಸಿದೆ. ಕೋವಿಡ್ ಸಂದರ್ಭದಲ್ಲಿ ಕಾರ್ವಿುಕರು ಕರ್ತವ್ಯ ನಿರ್ವಹಿಸುವಾಗ ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಭರವಸೆ ಕಳೆದುಕೊಳ್ಳದೆ ಬದುಕು ಕಟ್ಟಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಇಲಾಖೆಯ ಮದುವೆ, ಶೈಕ್ಷಣಿಕ, ಅಂತ್ಯ ಸಂಸ್ಕಾರ, ವಾಣಿಜ್ಯ ವಾಹನ ಚಾಲಕರ ಅಪಘಾತ ಪರಿಹಾರ ಧನ ಸಹಾಯದ ಚೆಕ್ಗಳನ್ನು ಕಾರ್ವಿುಕ ಫಲಾನುಭವಿಗಳಿಗೆ ಮತ್ತು ಕರ್ನಾಟಕ ರಾಜ್ಯ ಅಸಂಘಟಿತ ಕಾರ್ವಿುಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ಹಮಾಲರು, ಅಕ್ಕಸಾಲಿಗರು, ಮಡಿವಾಳರು, ಮನೆ ಗೆಲಸದವರು, ಟೈಲರ್, ಕ್ಷೌರಿಕ, ಚಿಂದಿ ಆಯುವ ವೃತ್ತಿಯ ಅಸಂಘಟಿತ ಕಾರ್ವಿುಕರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಿದರು.
ಶಾಸಕ ಪ್ರಸಾದ ಅಬ್ಬಯ್ಯ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಕಾರ್ವಿುಕ ಇಲಾಖೆ ಉಪಕಾರ್ವಿುಕ ಆಯುಕ್ತ ವೆಂಕಟೇಶ ಶಿಂಧಿಹಟ್ಟಿ, ಸಹಾಯಕ ಕಾರ್ವಿುಕ ಆಯುಕ್ತೆ ಮೀನಾ ಪಾಟೀಲ, ಇಲಾಖೆ ಅಧಿಕಾರಿಗಳು, ಕಾರ್ವಿುಕ ಸಂಘಟನೆ ಮುಖಂಡರು, ಅಸಂಘಟಿತ ವಲಯದ ಸಂಘಟನೆಗಳ ಪ್ರತಿನಿಧಿಗಳು, ವಿವಿಧ ಯೋಜನಾ ಫಲಾನುಭವಿಗಳು, ಇತರರು ಇದ್ದರು.
ಸಭೆಗೂ ಪೂರ್ವದಲ್ಲಿ ಕಾರ್ವಿುಕ ಸಚಿವ ಶಿವರಾಮ ಹೆಬ್ಬಾರ ಅವರು ರಾಯಾಪುರದ ಎಎಚ್ಪಿ ಗಾರ್ವೆಂಟ್ಸ್, ಬೇಲೂರು ಕೈಗಾರಿಕಾ ಪ್ರದೇಶದ ಟಾಟಾ ಮಾರ್ಕೇಪೋಲೊ, ಟಾಟಾ ಹಿಟಾಚಿ ಕೈಗಾರಿಕೆಗಳಿಗೆ ಭೇಟಿ ನೀಡಿ ಕಾರ್ವಿುಕರು ಹಾಗೂ ಆಡಳಿತ ವರ್ಗದೊಂದಿಗೆ ಚರ್ಚೆ ನಡೆಸಿದರು.
ಸೆ. 1ರಿಂದ ಎಲ್ಲ ಚಟುವಟಿಕೆ ಪ್ರಾರಂಭ
ಕರೊನಾದೊಂದಿಗೆ ನಮ್ಮ ನಿತ್ಯದ ಜೀವನ ನಡೆಸುವುದು ಅನಿವಾರ್ಯವಾಗಿದೆ. ಔಷಧ ಬರುವವರೆಗೂ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕಿದೆ. ಹೀಗಾಗಿ ಸೆ. 1ರಿಂದ ಎಲ್ಲ ರೀತಿಯ ಕೈಗಾರಿಕೆ ಹಾಗೂ ಇತರ ಚಟುವಟಿಕೆಗಳು ಆರಂಭಿಸಲು ಸರ್ಕಾರ ಅನುಮತಿ ನೀಡಲಿದೆ. ತುರ್ತಾಗಿ ಆರ್ಥಿಕ ಚಟುವಟಿಕೆಗಳ ಪುನಾರಂಭ ಮಾಡುವ ಅಗತ್ಯವಿದೆ ಎಂದು ಸಚಿವ ಹೆಬ್ಬಾರ ತಿಳಿಸಿದರು.