ಮಹಾಲಿಂಗಪುರ: ಕಾರ್ಮಿಕ ಇಲಾಖೆಯಲ್ಲಿ ಅಸಂಘಟಿತ ಕಾರ್ಮಿಕರು ನೋಂದಣಿ ಮಾಡಿಕೊಂಡು ಸರ್ಕಾರದ ಸೌಲಭ್ಯ ಪಡೆಯಬೇಕೆಂದು ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ರಮೇಶ ಸುಂಬಡ ಹೇಳಿದರು.
ಸ್ಥಳೀಯ ಕರ್ನಾಟಕ ರಾಜ್ಯ ನೇಕಾರರ ಸೇವಾ ಸಂಘದ ಕೇಂದ್ರ ಕಚೇರಿಗೆ ಶನಿವಾರ ಭೇಟಿ ನೀಡಿ ವಿವಿಧ ವೃತ್ತಿಯಲ್ಲಿ ತೊಡಗಿದ ಕಾರ್ಮಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು.
ನೋಂದಣಿಗೆ ಯಾವುದೇ ಶುಲ್ಕ ಇಲ್ಲ. ಕಾರ್ಮಿಕ ಸಚಿವ ಸಂತೋಷ ಲಾಡ್ ಅಸಂಘಟಿತ ಕಾರ್ಮಿಕರ ಉದ್ಧಾರಕ್ಕಾಗಿ ಆಸಕ್ತಿ ವಹಿಸಿದ್ದಾರೆ. ರಾಜ್ಯದಲ್ಲಿ ಅಂದಾಜು 50 ಲಕ್ಷಕ್ಕಿಂತ ಹೆಚ್ಚು ಅಸಂಘಟಿತ ಕಾರ್ಮಿಕರಿದ್ದಾರೆ. ತಮ್ಮ ದೂರುಗಳು ಮತ್ತು ಕುಂದು ಕೊರತೆಗಳನ್ನು ಇಲಾಖೆ ಗಮನಕ್ಕೆ ತರಲು ಸಹಾಯವಾಣಿ 1,55,214 ಮತ್ತು 1098 ಕರೆ ಮಾಡಬೇಕು. ಹಮಾಲರು, ಚಿಂದಿ ಆಯುವವರು, ಮನೆಗಳಿಗೆ ತೆರಳಿ ಕೆಲಸ ಮಾಡುವವರು, ಟೇಲರ್, ಅಗಸರು, ಕ್ಷೌರಿಕರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಬಟ್ಟೆ ಕಾರ್ಮಿಕರು, ನೇಕಾರರು, ಪತ್ರಿಕಾ ವಿತರಕರು, ಅಲೆಮಾರಿ ಪಂಗಡದವರು, ಬೀಡಿ ಕಾರ್ಮಿಕರು, ಕಲ್ಯಾಣ ಮಂಟಪ ಕಾರ್ಮಿಕರು, ಸಭಾಭವನ, ಟೆಂಟ್, ಪೆಂಡಾಲ್ ಕೆಲಸ ನಿರ್ವಹಿಸುವ ಕಾರ್ಮಿಕರು, ಸ್ವತಂತ್ರ ಲೇಖನ ಬರಹಗಾರರು, ೋಟೋಗ್ರಾರ್, ಹೋಟೆಲ್ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಸಿನಿಮಾ ಮತ್ತು ಸಾಂಸ್ಕೃತಿಕ ಕಾರ್ಯಕರ್ತರು, ೂಡ್ ರೈಡರ್ಸ್, ಖಾಸಗಿ ವಾಣಿಜ್ಯ ಚಾಲಕರು, ಮೇದಾರರು, ಭಜಂತ್ರಿ ಇವರೆಲ್ಲರನ್ನೂ ಅಸಂಘಟಿಕ ಕಾರ್ಮಿಕರ ವ್ಯಾಪ್ತಿಯಲ್ಲಿ ತರಲಾಗಿದೆ. ಇಎಸ್‌ಐ, ಪಿಎ್ ಮತ್ತು ತೆರೆಗೆ ಕಟ್ಟದವರು ಈ ಕೆಟಗೆರಿಯಲ್ಲಿ ಸೇರುತ್ತಾರೆ ಎಂದರು.
ಈ ಎಲ್ಲ ಕೆಟಗೆರಿ ಕಾರ್ಮಿಕರ ಆರ್ಥಿಕ ಪ್ರಗತಿಗೆ ಹಾಗೂ ಸಾಮಾಜಿಕ ಭದ್ರತೆಗೆ ಸರ್ಕಾರ ಅಂಬೇಡ್ಕರ್ ಸಹಾಯ ಹಸ್ತ ಯೋಜನೆಯಡಿ ಮಂಡಳಿ ನಿರ್ಮಿಸಿದೆ. ಈ ಮಂಡಳಿಯಲ್ಲಿ ಅಂದಾಜು 54 ಕೋಟಿ ರೂ. ಮೀಸಲಾಗಿಡಲಾಗಿದೆ. ನೇಕಾರರು ಗ್ಯಾರೇಜ್ ಕಾರ್ಮಿಕರು, ಟೇಲರ್‌ಗಳು ಮುಂತಾದವರು ಕಾರ್ಮಿಕ ಇಲಾಖೆಯಿಂದ ಹೊರಡಿಸಲಾದ ವೆಬ್‌ಸೈಟ್‌ನಲ್ಲಿ ತಮ್ಮ ಫೋಟೋ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಹಾಕಬೇಕು. ಕಾರ್ಮಿಕ ಕಾರ್ಡ್ ಆಗುವವರೆಗೂ ಸ್ಮಾರ್ಟ್ ಕಾರ್ಡ್ ನೀಡಲಾಗುವುದು. ಕಾರ್ಡ್ ಪಡೆದ ಕಾರ್ಮಿಕ ಅಪಘಾತದಲ್ಲಿ ನಿಧನರಾದರೆ 1 ಲಕ್ಷ ರೂ., ಗಾಯಗೊಂಡರೆ 50 ಸಾವಿರ ರೂ., ಸಹಜ ಮರಣ ಹೊಂದಿದರೆ 10 ಸಾವಿರ ರೂ. ನೀಡಲಾಗುವುದೆಂದು ತಿಳಿಸಿದರು.
ರಾಜ್ಯ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಮಾತನಾಡಿ, ಮುಖ್ಯಮಂತ್ರಿ ಹಾಗೂ ಕಾರ್ಮಿಕ ಸಚಿವರು ಅಸಂಘಟಿತ ಕಾರ್ಮಿಕರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯಾದ್ಯಂತ 45 ರಿಂದ 50 ಲಕ್ಷ ಕಾರ್ಮಿಕರ ನೋಂದಣಿ ಮಾಡಿ ಹಲವು ಸೌಲಭ್ಯ ನೀಡುವ ಉದ್ದೇಶ ಹೊಂದಿದ್ದಾರೆ ಎಂದು ತಿಳಿಸಿದರು.
ನೇಕಾರ ಮುಖಂಡ ರಾಜೇಂದ್ರ ಮಿರ್ಜಿ, ಸೋಮು ಮರೆಗುದ್ದಿ, ನಾಗಪ್ಪ ಮುದಕವಿ, ಶಂಕರ ಶಿರೋಳ, ಗಿರಿಮಲ್ಲ ಕೈಸೊಲಗಿ, ಸದಾಶಿವ ಮುನ್ನೊಳ್ಳಿ, ಈರಪ್ಪ ಮುದಕವಿ, ಶಂಭು ಕೈಸೊಲಗಿ, ನಾಗಪ್ಪ ಯಾದವಾಡ, ಹಾಜಿಸಾಬ ನಾಲಬಂದ, ಶ್ರೀಶೈಲ ಬ್ಯಾಕೋಡ ಇತರರಿದ್ದರು.