More

  ಅಶ್ವಾರೂಡ ಬಸವೇಶ್ವರರ ಪುತ್ಥಳಿ ಅನಾವರಣ

  ಜಿಲ್ಲೆಯ ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದಲ್ಲಿರುವ ಕೊಟ್ಟೂರುಸ್ವಾಮಿ ಶಾಖಾಮಠದ ಶ್ರೀಗಳ ಆಶಯದಂತೆ ಗ್ರಾಮದಲ್ಲಿ ಅಶ್ವಾರೂಡ ಬಸವಣ್ಣನವರ ಪುತ್ಥಳಿ ಸ್ಥಾಪನೆ ಇಂದು ನಡೆಯಲಿದೆ.
  ಬಸವೇಶ್ವರರ ಪುತ್ಥಳಿ ಹಾಗೂ ಗದ್ದುಗೆ ನಿರ್ಮಾಣಕ್ಕೆ 15 ಲಕ್ಷ ರೂ. ಸೋಮಸಮುದ್ರ ಗ್ರಾಮದ ಭಕ್ತರು ದೇಣಿಗೆ ನೀಡಿದ್ದಾರೆ. ಬಸವಜಯಂತಿಯ ಅಂಗವಾಗಿ ಗ್ರಾಮವನ್ನು ಸಿಂಗರಿಸಿ ಶ್ರೀ ಬಸವೇಶ್ವರರ ಪುತ್ಥಳಿಯ ಅನಾವರಣವನ್ನು ಬೆಳಿಗ್ಗೆ 6 ಗಂಟೆಗೆ ಕೊಟ್ಟೂರು ಸ್ವಾಮಿ ಮಠದ ಬಸವಲಿಂಗ ಸ್ವಾಮೀಜಿ ನೆರವೇರಿಸಲಿದ್ದಾರೆ.
  ಕೊಟ್ಟೂರುಸ್ವಾಮಿ ಶಾಖಾಮಠದ ಸಿದ್ಧಲಿಂಗ ದೇಶಿಕರು ಹಾಗೂ ಹಲವಾರು ಮಠಾಧೀಶರು, ಶಾಸಕರು, ರಾಜಕೀಯ ಧುರೀಣರು, ಗಣ್ಯಮಾನ್ಯರು, ಸರ್ವಸಮಾಜಗಳ ಬಾಂಧವರು ಭಾಗವಿಸಲಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts