ಅಶ್ವಗಂಧ ಬೆಳೆಯತ್ತ ರೈತರ ಚಿತ್ತ

ಗದಗ: ಸತತ 5 ವರ್ಷಗಳ ಬರಗಾಲದಿಂದ ಜಿಲ್ಲೆ ತತ್ತರಿಸಿದ್ದು, ಪ್ರಸಕ್ತ ವರ್ಷವೂ ಮುಂಗಾರು ಕೈಕೊಟ್ಟಿದ್ದರಿಂದ ಬಸವಳಿದಿದ್ದ ಅನ್ನದಾತರೀಗ ಮಳೆಯಾಶ್ರಿತ ಔಷಧಿ ಸಸ್ಯ ಅಶ್ವಗಂಧ ಬೆಳೆಯಲು ಮುಂದೆ ಬಂದಿದ್ದಾರೆ.

ಅಶ್ವಗಂಧ ಬೆಳೆಯಲು ನೀರು ಬಸಿದು ಹೋಗುವಂತಹ ಗೋಡು ಅಥವಾ ಕೆಂಪು ಮಣ್ಣು ಹಾಗೂ ಕಪ್ಪು (ಎರಿ) ಮಣ್ಣು ಪೂರಕವಾಗಿದೆ. ಜಿಲ್ಲೆಯ ರೋಣ ತಾಲೂಕಿನಲ್ಲಿ ಕಪ್ಪು (ಎರಿ) ಮಣ್ಣು ಅಧಿಕವಾಗಿದ್ದು, ಅಲ್ಲಿನ ರೈತರು ಅಶ್ವಗಂಧ ಬೆಳೆಯತ್ತ ಗಮನಹರಿಸಿದ್ದಾರೆ. ಕೇವಲ 150ರಿಂದ 170 ದಿನಗಳ ಅವಧಿಯಲ್ಲಿ ಬೆಳೆ ಕೈಗೆ ಬರá-ವುದರಿಂದ ರೈತರು ಈ ಕೃಷಿಗೆ ಆಕರ್ಷಿತರಾಗಿದ್ದಾರೆ.

ಪ್ರಸಕ್ತ ವರ್ಷದ ಆರಂಭದಲ್ಲಿ ಮುಂಗಾರು ಕೈಕೊಟ್ಟಿದ್ದರಿಂದ ಹೆಸರು ಬಿತ್ತನೆ ಹಾಗೂ ಇಳುವರಿಯಲ್ಲೂ ಕುಂಠಿತಗೊಂಡಿತ್ತು. ಈಗ ಕಳೆದ ಮೂರು ವಾರಗಳಿಂದ ಉತ್ತಮ ಮಳೆ ಸುರಿಯುತ್ತಿರá-ವುದರಿದ ಮೆಕ್ಕೆಜೋಳ, ಜೋಳ, ಈರá-ಳ್ಳಿ, ಮೆಣಸಿನಕಾಯಿ, ಸೂರ್ಯಕಾಂತಿ ಬೆಳೆಯಲು ರೈತರು ಉತ್ಸುಕರಾಗಿದ್ದಾರೆ. ಪರ್ಯಾಯವಾಗಿ ಔಷಧಿ ಸಸ್ಯ ಅಶ್ವಗಂಧ ಬೆಳೆಯಲು ರೈತರು ಮುಂದಾಗಿದ್ದು, ತೋಟಗಾರಿಕೆ ಇಲಾಖೆಯೂ ಉತ್ತೇಜನ ನೀಡುತ್ತಿದೆ.

ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಅಶ್ವಗಂಧ ಬೆಳೆಯಬಹುದಾಗಿದ್ದು, ಹೆಕ್ಟೇರ್​ಗೆ 12 ಕೆಜಿ ಬೀಜ ಬೇಕಾಗುತ್ತದೆ. ಅಡಿ ಅಂತರದಲ್ಲಿ ಕೂರ್ಗಿಯಿಂದ ಬಿತ್ತನೆ ಮಾಡಿ ಹೆಕ್ಟೇರ್​ಗೆ 5ರಿಂದ 8 ಕ್ವಿಂಟಾಲ್ ಇಳುವರಿ ಪಡೆಯಬಹುದು. ಅಶ್ವಗಂಧ ಉತ್ತೇಜನ ಬೆಳೆಯಾಗಿದ್ದು, ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಬಿತ್ತನೆಯಾದ ಬೆಳೆ ಫೆಬ್ರವರಿ, ಮಾರ್ಚ್​ನಲ್ಲಿ ಕಟಾವಿಗೆ ಬರá-ತ್ತದೆ. ಅಶ್ವಗಂಧ ಬೆಳೆಯಲ್ಲಿ ಬೇರಿನ ಜತೆಗೆ ಬೀಜವನ್ನು ರೈತರು ಮಾರಾಟ ಮಾಡಬಹುದಾಗಿದೆ.

125 ಹೆಕ್ಟೇರ್ ಪ್ರದೇಶದಲ್ಲಿ ಅಶ್ವಗಂಧ ಬಿತ್ತನೆ ಗುರಿ

ಅಶ್ವಗಂಧ ಬೆಳೆಯಲು ತೋಟಗಾರಿಕೆ ಇಲಾಖೆ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 100 ಹೆಕ್ಟೇರ್ ಗುರಿ ಹೊಂದಿದೆ. ಕಳೆದ ವರ್ಷ ರೋಣ ತಾಲೂಕಿನಲ್ಲಿ 40 ಹೆಕ್ಟೇರ್, ಗದಗನಲ್ಲಿ 20 ಹೆಕ್ಟೇರ್, ರೋಣ, ಮುಂಡರಗಿ ಭಾಗದಲ್ಲಿ ತಲಾ 10 ಹೆಕ್ಟೇರ್ ಸೇರಿ ಒಟ್ಟು 80 ಹೆಕ್ಟೇರ್ ಪ್ರದೇಶದಲ್ಲಿ ಅಶ್ವಗಂಧ ಬಿತ್ತನೆಯಾಗಿತ್ತು. ಪ್ರಸಕ್ತ ವರ್ಷ 125ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುವ ಸಾಧ್ಯತೆಯಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳ.

ಹಲವು ಕಾಯಿಲೆಗಳಿಗೆ ಮನೆಮದ್ದು

ಕ್ಯಾನ್ಸರ್, ಯಕೃತ್, ಶ್ವಾಸಕೋಶ ಸಮಸ್ಯೆ, ಶುಗರ್ ಹಾಗೂ ರಕ್ತದೊತ್ತಡ ಸಮಸ್ಯೆಗಳಿಗೆ ಅಶ್ವಗಂಧ ಒಳ್ಳೆಯ ಔಷಧಿ ಸಸ್ಯ. ಅದರ ಬೇರನ್ನು ಪುಡಿ ಮಾಡಿ ನಿತ್ಯ ಸೇವಿಸುವುದರಿಂದ ಸಕ್ಕರೆ ಕಾಯಿಲೆ ಹಾಗೂ ರಕ್ತದೊತ್ತಡ ಸಮಸ್ಯೆ ನಿವಾರಿಸಬಹುದಾಗಿದೆ.

ತೋಟಗಾರಿಕೆ ಇಲಾಖೆಯಿಂದ ಸಬ್ಸಿಡಿ

ಹೆಕ್ಟೇರ್​ಗೆ 5ರಿಂದ 8 ಕ್ವಿಂಟಲ್ ಇಳುವರಿ ತೆಗೆಯಬಹುದಾದ ಅಶ್ವಗಂಧ ಕ್ವಿಂಟಾಲ್ ಬೇರಿಗೆ 15ರಿಂದ 16 ಸಾವಿರ ರೂ. ಆದಾಯ ನೀಡá-ತ್ತದೆ. ಕೆಜಿ ಬೀಜಕ್ಕೆ 40ರಿಂದ 50 ರೂ. ಸಿಗಲಿದೆ. ಜತೆಗೆ ತೋಟಗಾರಿಕೆ ಇಲಾಖೆಯು ಹೆಕ್ಟೇರ್​ಗೆ 14,600 ರೂ. ಪ್ರೋತ್ಸಾಹ ಧನ ನೀಡುತ್ತಿದೆ.

ಅಶ್ವಗಂಧವನ್ನು ಜುಲೈ, ಆಗಸ್ಟ್ ತಿಂಗಳಿನಲ್ಲಿ ಬೆಳೆಯಲು ಸೂಕ್ತ. 30 ಸೆ.ಮೀ. ಅಂತರದ ಸಾಲುಗಳಲ್ಲಿ 10 ಸೆ.ಮೀ.ಗೆ ಒಂದರಂತೆ ಬಿತ್ತನೆ ಮಾಡಬೇಕು. ಕೊಯ್ಲಿಗೆ ಬಂದ ನಂತರ ಗಿಡವನ್ನು ಬೇರು ಸಹಿತ ಕಿತ್ತು ಬೇರು ಮತ್ತು ಹಣ್ಣುಗಳನ್ನು ಬೇರ್ಪಡಿಸಿ ಒಣಗಿಸಬೇಕು. ಈರá-ಳ್ಳಿ ಹಾಗೂ ಮೆಣಸಿಕಾಯಿಗೆ ಪರ್ಯಾಯವಾಗಿ ಅಶ್ವಗಂಧ ಉತ್ತಮ ಬೆಳೆಯಾಗಿದೆ.

| ಸುರೇಶ ಕುಂಬಾರ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರು

ಕಳೆದ ವರ್ಷ ಮಳೆಯ ಅಭಾವದ ನಡುವೆಯೂ ಬಿತ್ತಲಾಗಿದ್ದ ಅಶ್ವಗಂಧದಿಂದ ಉತ್ತಮ ಇಳುವರಿಯೇ ಸಿಕ್ಕಿದೆ. ಬಿತ್ತನೆ ವೇಳೆ ಹಾಗೂ ನಂತರ ಮೂರು ಮಳೆಯಾದರೆ ಸಾಕು ಉತ್ತಮ ಬೆಳೆ ತೆಗೆಯಬಹುದು.

 ಮಲ್ಲಪ್ಪ ಟಕ್ಕೇದ, ಸಂದಿಗವಾಡ ಗ್ರಾಮದ ರೈತ

 

Leave a Reply

Your email address will not be published. Required fields are marked *