ಅವೈಜ್ಞಾನಿಕ ನಿಯಮ ಕೈಬಿಡಿ

ಹುಬ್ಬಳ್ಳಿ:ಎಲ್​ಪಿಜಿ, ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಉತ್ತರ ಕರ್ನಾಟಕ ಆಟೋ ಚಾಲಕರ ಒಕ್ಕೂಟದ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಆಟೋರಿಕ್ಷಾಗಳ ಮೇಲೆ ಕೇಂದ್ರ, ರಾಜ್ಯ ಸರ್ಕಾರಗಳು ಅವೈಜ್ಞಾನಿಕ ನಿಯಮಗಳನ್ನು ಹೇರುವುದರಿಂದ ಚಾಲ ಕರ ಬದುಕು ನೆಮ್ಮದಿ ಕಳೆದುಕೊಂಡಿದೆ. ಕಡಿಮೆ ಆದಾಯದಿಂದಾಗಿ ಕುಟುಂಬ ನಿರ್ವಹಣೆ ಜೊತೆಗೆ ಮಕ್ಕಳಿಗೆ ಶಿಕ್ಷಣ ಕೊಡಿಸು ವುದು ಕಷ್ಟವಾಗಿದೆ. ಹಾಗಾಗಿ, ಓಲಾ, ಉಬೇರ್ ಮತ್ತಿತರ ಕ್ಯಾಬ್​ಗಳ ಸಂಚಾರ ರದ್ದುಪಡಿಸಬೇಕು. 2 ಸ್ಟ್ರೋಕ್ ಆಟೋಗಳಿಗೆ 30 ಸಾವಿರ ರೂ. ಸಹಾಯಧನದ ಬದಲಾಗಿ 60 ಸಾವಿರ ರೂ. ಸಹಾಯಧನ ನೀಡಬೇಕು.

ರಿಕ್ಷಾ ಚಾಲಕರಿಗಾಗಿ ಪ್ರತಿ ಜಿಲ್ಲೆಯಲ್ಲಿ ಸಮುದಾಯ ಭವನ ಸ್ಥಾಪಿಸಬೇಕು. ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಬೇಕು. ಜನಸಂಖ್ಯೆಗೆ ಅನುಗುಣವಾಗಿ ಹೊಸ ಆಟೋಗಳಿಗೆ ಪರವಾನಗಿ ನೀಡಬೇಕು. ಇನ್ಶುರೆನ್ಸ್ ಹಣ ಕಡಿತಗೊಳಿಸಬೇಕು. ಚಾಲನಾಪತ್ರ ಪಡೆಯಲು 8ನೇ ತರಗತಿ ಕಡ್ಡಾಯ ನಿಯಮ ರದ್ದುಪಡಿಸಬೇಕು. ಆಟೋಚಾಲಕರಿಗೆ ಇಎಸ್​ಐ ಸೌಲಭ್ಯ ನೀಡಬೇಕು ಎಂದು ಒಕ್ಕೂಟದ ಸದಸ್ಯರು ತಹಸೀಲ್ದಾರ್ ಮೂಲಕ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದೆ. ಒಕ್ಕೂಟದ ಅಧ್ಯಕ್ಷ ಶೇಖರಯ್ಯ ಮಠಪತಿ, ಪುಂಡಲೀಕ ಬಡಿಗೇರ, ಚಿದಾನಂದ ಸವದತ್ತಿ, ಮುಸ್ತಾಕ ಕರ್ಜಜಿ ಇದ್ದರು.