Thursday, 15th November 2018  

Vijayavani

ಆ್ಯಂಬಿಡೆಂಟ್ ಕೋಟಿ ಕೋಟಿ ಡೀಲ್ ಪ್ರಕರಣ - ಕೆಲವೇ ಕ್ಷಣಗಳಲ್ಲಿ ಜಾಮೀನು ಅರ್ಜಿ ತೀರ್ಪು- ಬಿಡುಗಡೆಯಾಗ್ತಾರಾ ಗಣಿಧಣಿ..?        ನಾನು ಸಕ್ಕರೆ, ಮಾಧ್ಯಮಗಳು ಇರುವೆ - ನಾನು ಹೋದ್ಕಡೆ ನನ್ನನ್ನೇ ಹಿಂಬಾಲಿಸುತ್ತಾರೆ -  ಜಂಭ ಕೊಚ್ಚಿಕೊಂಡ ನಟಿ ಶ್ರುತಿ        ನಮ್ಮ ತಂದೆನೂ ಬ್ರಾಹ್ಮಣರನ್ನ ಸೋಲಿಸಿದ್ರು - ನಾನೂ ಈಗ ಬ್ರಾಹ್ಮಣರ ವ್ಯಕ್ತಿಯನ್ನು ಸೋಲಿಸಿದ್ದೇನೆ - ಸಿದ್ದು ನ್ಯಾಮಗೌಡ ಹೇಳಿಕೆ        ಮಹದಾಯಿ ನದಿ ನೀರು ಹಂಚಿಕೆ ವಿಚಾರ - ಇದೇ 17ರಂದು ಸರ್ವೆ ಪಕ್ಷ ಸಭೆ ಕರೆ ಸಿಎಂ- ಬಿಎಸ್​ವೈ, ದಿನೇಶ್​ ಗುಂಡೂರಾವ್​ಗೆ ಪತ್ರ        ರಫೇಲ್ ಖರೀದಿ ಅವ್ಯವಹಾರ ಆರೋಪ - ಸುದೀರ್ಘ 5 ಗಂಟೆಗಳ ಕಾಲ ನಡೆದ ವಿಚಾರಣೆ ಮುಕ್ತಾಯ - ತೀರ್ಪು ಕಾಯ್ದಿರಿಸಿದ ಸುಪ್ರೀಂ        ವೈಟ್​​ಹೌಸ್​​ನಲ್ಲಿ ದೀಪಾವಳಿ ಸಂಭ್ರಮ - ದೀಪ ಬೆಳಗಿ ಹಿಂದುಗಳಿಗೆ ಶುಭಕೋರಿದ ಟ್ರಂಪ್ - ಮೋದಿ ನನ್ನ ಸ್ನೇಹಿತ ಎಂದ ಟ್ರಂಪ್​       
Breaking News

ಅವನು ಅವಳಾಗುವ, ಅವಳು ಅವನಾಗುವ ಸರ್ಜರಿಗೆ ಡಿಮ್ಯಾಂಡ್

Thursday, 25.01.2018, 3:01 AM       No Comments

| ಪ್ರಕಾಶ್ ಮಂಜೇಶ್ವರ ಮಂಗಳೂರು

ಅವನು ಅವಳಾಗುವುದು, ಇಲ್ಲವೇ ಅವಳು ಅವನಾಗುವುದು ಈಗ ಮುಜುಗರಪಡುವ ವಿಷಯವಲ್ಲ. ಅಲ್ಲೊಂದು, ಇಲ್ಲೊಂದು ಎಂಬಂತೆ ಆಗೊಮ್ಮೆ ಈಗೊಮ್ಮೆ ವರದಿಯಾಗುತ್ತಿದ್ದ ಇಂತಹ ಸರ್ಜರಿಯ ಟ್ರೆಂಡ್ ಕರಾವಳಿ ನಗರ ಮಂಗಳೂರಿನಲ್ಲಿ ಹೆಚ್ಚುತ್ತಿದೆ. ನಗರದ ಎ.ಜೆ.ಹಾಸ್ಪಿಟಲ್ ಆಂಡ್ ರಿಸರ್ಚ್ ಸೆಂಟರ್​ನಲ್ಲಿ ಮೂರು ಮಂದಿ ಯಶಸ್ವಿಯಾಗಿ ಲಿಂಗ ಪರಿವರ್ತನೆಗೊಳಪಟ್ಟು ಸಂತೃಪ್ತಿಯ ಜೀವನ ಸಾಗಿಸುತ್ತಿದ್ದಾರೆ. ಕೇರಳ, ತಮಿಳುನಾಡಿನಿಂದಲೂ ಈ ಶಸ್ತ್ರಚಿಕಿತ್ಸೆಗೊಳಪಡಲು ಮಂಗಳೂರಿಗೆ ಬರುತ್ತಿದ್ದಾರೆ.

ಸರ್ಜರಿ ಹೇಗೆ?: ಲಿಂಗವನ್ನು ಒಪ್ಪಿಕೊಳ್ಳಲಾಗದ ಮನಃಸ್ಥಿತಿಗೆ ವೈದ್ಯಕೀಯ ಭಾಷೆಯಲ್ಲಿ ಜೆಂಡರ್ ಐಡೆಂಟಿಟಿ ಡಿಸಾರ್ಡರ್ (ಲಿಂಗ ಗುರುತು ಪತ್ತೆ ಸಮಸ್ಯೆ) ಎನ್ನಲಾಗುತ್ತದೆ. ಅವರ ಮನಸ್ಸಿಗೊಪ್ಪುವ ದೇಹರಚನೆಯೇ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ. ಪ್ರಧಾನ ಶಸ್ತ್ರಚಿಕಿತ್ಸೆಗೆ ಆರು ತಿಂಗಳು ಮೊದಲೇ ಸಂಬಂಧಪಟ್ಟ ವ್ಯಕ್ತಿಗೆ ಹಾಮೋನ್ ಥೆರಪಿ ಆರಂಭವಾಗುತ್ತದೆ. ಸರ್ಜರಿ ಹಾಗೂ ಒಟ್ಟು ನಿರ್ವಹಣೆ ಪ್ರಕ್ರಿಯೆಯಲ್ಲಿ ಪ್ಲಾಸ್ಟಿಕ್, ಮೈಕ್ರೋವಾಸ್ಕುಲರ್ ಆಂಡ್ ಕಾಸ್ಮೆಟಿಕ್ ಸರ್ಜನ್ ಜತೆ ಮನಃಶಾಸ್ತ್ರಜ್ಞರು, ಪ್ರಸೂತಿ ತಜ್ಞರು, ಎಂಡೊಕ್ರೖೆನಾಲಜಿಸ್ಟ್ ಗಳು ವಿವಿಧ ಹಂತಗಳಲ್ಲಿ ಸಹಕರಿಸುತ್ತಾರೆ. ಅಂತಿಮವಾಗಿ ಶಸ್ತ್ರಚಿಕಿತ್ಸೆಗೊಳಗಾದವರು ತಮಗೆ ಬೇಕಾದ ದೇಹರಚನೆ ಪಡೆದಿರುತ್ತಾರೆ. ಆದರೆ, ಲಿಂಗ ಪರಿವರ್ತಿತರು ಮಕ್ಕಳನ್ನು ಪಡೆಯುವುದು ಸಾಧ್ಯವಿಲ್ಲ.

ನಿಯಮಗಳು ಅನ್ವಯ: ಈ ವೈದ್ಯಕೀಯ ಪ್ರಕ್ರಿಯೆಯನ್ನು ರಹಸ್ಯವಾಗಿ ನಡೆಸಲಾಗದು. ಶಸ್ತ್ರಚಿಕಿತ್ಸೆಗೊಳಗಾಗುವ ವ್ಯಕ್ತಿ ಅಫಿಡವಿಟ್ ಮಾಡಿಸಿಕೊಳ್ಳಬೇಕು. ಮನೆಯ ಒಬ್ಬ ಜವಾಬ್ದಾರಿಯುತ ಸದಸ್ಯನ ಒಪ್ಪಿಗೆಯೂ ಬೇಕು.

ಆರುಷಿಯಾದ ಅರುಣ್

25 ವರ್ಷದ ಐಟಿ ಉದ್ಯೋಗಿ ಅರುಣ್ (ಹೆಸರು ಬದಲಿಸಲಾಗಿದೆ) ಈಗ ಆರುಷಿಯಾಗಿದ್ದಾರೆ. ಹೆಣ್ಣಾಗಬೇಕು ಎನ್ನುವ ಅವರ ಮನದಾಸೆಗೆ ಆರಂಭದಿಂದಲೂ ಮನೆಯವರ ವಿರೋಧವಿತ್ತು. ಆದರೆ, ಅವರ ದೃಢಇಚ್ಛೆಗೆ ಮನೆ ಮಂದಿ ಕೊನೆಗೂ ಮಣಿಯಬೇಕಾಯಿತು. ಶಸ್ತ್ರಚಿಕಿತ್ಸೆಗೂ ಮೊದಲೇ ಅವರ ಹಾವಭಾವ, ದೇಹಭಾಷೆ ಹೆಣ್ಣಿನದೇ ಇತ್ತು. ಹೆಣ್ಣಿನಂತೆಯೇ ಸ್ವರ ಬದಲಿಸಿ ಮಾತನಾಡುತ್ತಿದ್ದರು. ದೈಹಿಕ ಚಲನವಲನ ಕೂಡ ಹೆಣ್ಣಿನಂತೆಯೇ ಇತ್ತು. ದೈಹಿಕ ಲಕ್ಷಣಗಳು ಹಾಗೂ ಲಿಂಗ ಪರಿವರ್ತನೆಯಷ್ಟೇ ಬಾಕಿ ಇತು ಎನ್ನುತ್ತಾರೆ ಆಸ್ಪತ್ರೆಯ ಪ್ಲಾಸ್ಟಿಕ್, ಮೈಕ್ರೋವಾಸ್ಕುಲರ್ ಆಂಡ್ ಕಾಸ್ಮೆಟಿಕ್ ಸರ್ಜನ್ ಡಾ.ದಿನೇಶ್ ಕದಮ್

ಜೀವದ ಗೆಳತಿ ಜತೆ ಮದುವೆ

ಕಾಸರಗೋಡಿನ ಆರೋಗ್ಯ ಕಾರ್ಯಕರ್ತೆ ನಯನಾ (ಹೆಸರು ಬದಲಿಸಲಾಗಿದೆ) ನವೀನನಾಗಿ ಪರಿವರ್ತನೆಗೊಂಡ ಕತೆಯಿದು. ಇವರ ತಂದೆ ಬೆಳ್ತಂಗಡಿ ತಾಲೂಕಿನ ನಾರಾವಿಯವರು. ಚಿಕ್ಕಂದಿನಿಂದಲೇ ಹುಡುಗರ ಸ್ವಭಾವ, ಹಾವಭಾವ ಹೊಂದಿದ್ದ ನಯನಾ ಸುಂದರವಾದ ಹೆಣ್ಣು ಮಕ್ಕಳನ್ನು ಕಂಡಾಗ ಆಕರ್ಷಣೆಗೆ ಒಳಗಾಗುತ್ತಿದ್ದರು. ಶಿಕ್ಷಣ ಮುಗಿಸಿ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ತಾತ್ಕಾಲಿಕ ಉದ್ಯೋಗವೂ ದೊರೆಯಿತು. ದುಡಿಮೆಯ ದುಡ್ಡನ್ನು ಒಟ್ಟುಗೂಡಿಸಿ ತಾನು ಪುರುಷನಾಗಬೇಕೆಂಬ ಕನಸನ್ನು ಈಗ ನನಸಾಗಿಸಿಕೊಂಡಿದ್ದಾರೆ. ಪುರುಷನಾಗಿ ಪರಿವರ್ತನೆಯಾದ ಬಳಿಕ ತನ್ನ ಜೀವದ ಗೆಳತಿ ಪಯ್ಯನ್ನೂರಿನ ತರುಣಿಯನ್ನು ಮದುವೆಯಾಗಿ ಸಂತೃಪ್ತ ಜೀವನ ನಡೆಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ಅವರ ಶಸ್ತ್ರಚಿಕಿತ್ಸೆ ಷರತ್ತು ಪತ್ರಕ್ಕೆ ಅವರ ಚಿಕ್ಕಪ್ಪ ಸಹಿ ಹಾಕಿದ್ದಾರೆ. ಸರ್ಕಾರಿ ದಾಖಲೆಗಳಲ್ಲಿ ನವೀನ ಹೆಸರು ನಯನಾಳಾಗಿಯೇ ಇದ್ದಾಳೆ.

ಲಿಂಗವನ್ನು ಒಪ್ಪಿಕೊಳ್ಳಲಾಗದ ವ್ಯಕ್ತಿ ವಿರುದ್ಧ ಲಿಂಗಿಯ ದೇಹದಲ್ಲಿ ಸಿಕ್ಕಿಹಾಕಿಕೊಂಡಿರುವಂತಹ ಪರಿಸ್ಥಿತಿ ಎದುರಿಸುತ್ತಿರುತ್ತಾರೆ. ಇದರಿಂದ ಬಿಡುಗಡೆ ಪಡೆಯಲು ಮನೆಯವರು ಹಾಗೂ ಸಮಾಜದ ಬೆಂಬಲ ಅಗತ್ಯ. ಶೇ.100 ಸಾಕ್ಷರತೆ ಇರುವ ಮಂಗಳೂರಿನಂತಹ ನಗರದಲ್ಲೂ ಹೆಚ್ಚಿನ ಜಾಗೃತಿ ಮೂಡಿಲ್ಲ.

| ಡಾ.ದಿನೇಶ್ ಕದಮ್ ಪ್ಲಾಸ್ಟಿಕ್, ಮೈಕ್ರೋವಾಸ್ಕುಲರ್ ಆಂಡ್ ಕಾಸ್ಮೆಟಿಕ್ ಸರ್ಜನ್, ಎ.ಜೆ.ಆಸ್ಪತ್ರೆ

ಸ್ತ್ರೀ ಪಾತ್ರಧಾರಿಗೂ ಬೇಕು

ಲಿಂಗ ಪರಿವರ್ತನೆ ಬಯಸಿ ತುಂಬಾ ಮಂದಿ ಆಸ್ಪತ್ರೆಯನ್ನು ಸಂರ್ಪಸುತ್ತಿದ್ದಾರೆ. ಇಂಥ ಹಲವಾರು ಆಸಕ್ತರ ಸಾಲಿನಲ್ಲಿ ಯಕ್ಷಗಾನದಲ್ಲಿ ನಿರಂತರ ಸ್ತ್ರೀ ಪಾತ್ರ ನಿರ್ವಹಿಸುತ್ತಿರುವ ಕರಾವಳಿಯ ಒಬ್ಬ ಕಲಾವಿದರೂ ಇದ್ದಾರೆ.

Leave a Reply

Your email address will not be published. Required fields are marked *

Back To Top